Asianet Suvarna News Asianet Suvarna News

ವಾಟ್ಸಾಪ್ ವದಂತಿ ನಂಬಿ ಗೃಹಸಚಿವರಿಗೆ ರಕ್ಷಣೆ ನೀಡಲು ನಿರಾಕರಿಸಿದ ಪೊಲೀಸರು

250 ಜನ ಪೊಲೀಸರನ್ನು ನಿಯೋಜಿಸಿದ್ದರೂ ಕೂಡಾ ಒಬ್ಬರೂ ಗೃಹ ಸಚಿವ ರಾಜನಾಥ್ ಸಿಂಗ್’ಗೆ ರಕ್ಷಣೆ ನೀಡಲು ನಿರಾಕರಿಸಿದ್ದಾರೆ. ಕಾರಣವೇನು ಗೊತ್ತಾ? ವಾಟ್ಸಾಪ್ ವದಂತಿ. ಹೌದು. ಪೊಲೀಸರ ವೇತನವನ್ನು ಸರ್ಕಾರ ಕಡಿಮೆ ಮಾಡಲಿದೆ ಎನ್ನುವ ವಿಚಾರ ವಾಟ್ಸಾಪಿನಲ್ಲಿ ಓಡಾಡುತ್ತಿದ್ದು ಅದನ್ನು ನಂಬಿದ ಪೊಲೀಸರು ರಾಜನಾಥ್ ಸಿಂಗ್’ಗೆ ರಕ್ಷಣೆ ನೀಡಲು ನಿರಾಕರಿಸಿ ಸಾಮೂಹಿಕ ರಜೆ ಹಾಕಿದ್ದಾರೆ. ಕರ್ತವ್ಯಕ್ಕೆ ಹಾಜರಾಗಿಲ್ಲ.

Cops Refuse Guard of Honor to Rajnath Singh After WhatsApp Rumour

ನವದೆಹಲಿ (ಅ.17): 250 ಜನ ಪೊಲೀಸರನ್ನು ನಿಯೋಜಿಸಿದ್ದರೂ ಕೂಡಾ ಒಬ್ಬರೂ ಗೃಹ ಸಚಿವ ರಾಜನಾಥ್ ಸಿಂಗ್’ಗೆ ರಕ್ಷಣೆ ನೀಡಲು ನಿರಾಕರಿಸಿದ್ದಾರೆ. ಕಾರಣವೇನು ಗೊತ್ತಾ? ವಾಟ್ಸಾಪ್ ವದಂತಿ. ಹೌದು. ಪೊಲೀಸರ ವೇತನವನ್ನು ಸರ್ಕಾರ ಕಡಿಮೆ ಮಾಡಲಿದೆ ಎನ್ನುವ ವಿಚಾರ ವಾಟ್ಸಾಪಿನಲ್ಲಿ ಓಡಾಡುತ್ತಿದ್ದು ಅದನ್ನು ನಂಬಿದ ಪೊಲೀಸರು ರಾಜನಾಥ್ ಸಿಂಗ್’ಗೆ ರಕ್ಷಣೆ ನೀಡಲು ನಿರಾಕರಿಸಿ ಸಾಮೂಹಿಕ ರಜೆ ಹಾಕಿದ್ದಾರೆ. ಕರ್ತವ್ಯಕ್ಕೆ ಹಾಜರಾಗಿಲ್ಲ.

ಪೊಲೀಸರು ರಜೆಯ ಮೇಲೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜೋಧಪುರ ಪೊಲೀಸ್ ಕಮಿಷನರ್ ಅಶೋಕ್ ರಾಥೋಡ್,  ನಾವು ಪೊಲೀಸರಿಗೆ ರಜೆಯನ್ನು ಅಧಿಕೃತವಾಗಿ ನೀಡಿಲ್ಲ. ಅವರೇ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಕೆಲವರನ್ನು ಗೃಹ ಸಚಿವರ ರಕ್ಷಣೆಗಾಗಿ ನಿಯೋಜಿಸಲಾಗಿತ್ತು. ಆದರೆ ಅವರು ಕರ್ತವ್ಯಕ್ಕೆ  ಹಾಜರಾಗಲು ನಿರಾಕರಿಸಿದ್ದಾರೆ. ಅವರ ಬದಲಿಗೆ ಬೇರೆಯವರನ್ನು ನಾವು ನೇಮಿಸಿದ್ದೇವೆ ಎಂದು ಹೇಳಿದ್ದಾರೆ.

ಯಾರು ಕರ್ತವ್ಯಕ್ಕೆ ಹಾಜರಾಗಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗಿರುವ ಪೊಲೀಸರ ವೇತನ 24 ಸಾವಿರದಿಂದ 19 ಸಾವಿರಕ್ಕೆ ಕಡಿತಗೊಳಿಸಲಾಗುತ್ತದೆ ಎನ್ನುವ ಸುದ್ದಿ ವೈರಲ್ ಆಗಿದೆ ಎಂದು ಅಶೋಕ್ ರಾಥೋಡ್ ಹೇಳಿದ್ದಾರೆ.

ನಿನ್ನೆ ರಾಜನಾಥ್ ಸಿಂಗ್ ಐಬಿ ಟ್ರೈನಿಂಗ್ ಸೆಂಟರ್ ಉದ್ಘಾಟನೆಗೆ ಜೋಧಪುರಕ್ಕೆ ಆಗಮಿಸಿದ್ದರು.   

 

Follow Us:
Download App:
  • android
  • ios