Asianet Suvarna News Asianet Suvarna News

ದೋಸ್ತಿ ಸರ್ಕಾರ ಬಂದು 6 ತಿಂಗಳ ಬಳಿಕ ‘ಟೀಂ’ ಬಗ್ಗೆ ಮಾತನಾಡಿದ ಮೋದಿ

ಕಾಂಗ್ರೆಸ್ ಇಬ್ಬಗೆಯ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿರುವ ಮೋದಿ ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್‌ ನಡೆದುಕೊಂಡ ಬಗೆಯನ್ನು ಟೀಕಿಸಿದ್ದಾರೆ.

congress saying jds is bjps B team what happened after Karnataka elections says PM Narendra Modi
Author
Bengaluru, First Published Dec 3, 2018, 8:35 PM IST

ಹೈದರಾಬಾದ್[ಡಿ.03]   ಕರ್ನಾಟಕ ವಿಧಾನಸಭೆ ಚುನಾವಣೆಗೂ ಮೊದಲು ರಾಹುಲ್​ ಗಾಂಧಿ ಅವರು, ಜೆಡಿಎಸ್ ಅನ್ನು ಬಿಜೆಪಿಯ ‘ಬಿ’ ಟೀಂ ಎಂದಿದ್ದರು. ಆದರೆ, ಚುನಾವಣೆ ನಂತರ ಏನಾಯ್ತು? ಕಾಂಗ್ರೆಸ್ ಹೇಗೆ ನಡೆದುಕೊಂಡಿತು? ಯಾರೊಂದಿಗೆ ಅಧಿಕಾರ ಮಾಡಿತು? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ.

 ಕರ್ನಾಟಕ ವಿಧಾನಸಭೆ ಚುನಾವಣೆಗೂ ಮೊದಲು ಜೆಡಿಎಸ್ ಅನ್ನು ಬಿಜೆಪಿಯ ‘ಬಿ’ ಟೀಂ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಕರೆದಿದ್ದರು. ಈಗ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅವರಿಬ್ಬರೂ ಸೇರಿ ಸರ್ಕಾರ ಮಾಡುತ್ತಿದ್ದಾರೆ. ತೆಲಂಗಾಣದಲ್ಲೂ ಅಷ್ಟೇ, ಕಾಂಗ್ರೆಸ್​ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಈ ಸಮಯದಲ್ಲಿ ಮಾತ್ರ ಹೋರಾಟ ಎಂದು ತೋರಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ತೆಲಂಗಾಣ ಚುನಾವಣೆ ಪ್ರಚಾರ ಕೈಗೊಂಡಿದ್ದ ರಾಹುಲ್​ ಗಾಂಧಿ ಚಂದ್ರಶೇಖರ್​ ರಾವ್​ ಅವರ ನೇತೃತ್ವದ ಟಿಆರ್​ಎಸ್​ ಬಿಜೆಪಿಯ ‘ಬಿ’ ಟೀಂ,ಎಂದು ಕರೆದಿದ್ದರು. ಅದಕ್ಕೂ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್​ ಅನ್ನು ಬಿಜೆಪಿಯ ‘ಬಿ’ ಟೀಂ ಎಂದಿದ್ದರು. ಆದರೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶ ಎದುರಾದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚನೆ ಮಾಡಿ ದೋಸ್ತಿ ಸರ್ಕಾರ ನಡೆಸುತ್ತಿವೆ. 

Follow Us:
Download App:
  • android
  • ios