Asianet Suvarna News Asianet Suvarna News

’ರಾಹುಲ್ ವಂಶವೇ ಗೊತ್ತು, ಮೋದಿಯ ಅಪ್ಪ ಯಾರು?’: ಕೈ ನಾಯಕನ ವಿವಾದಾತ್ಮಕ ಹೇಳಿಕೆ

ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಕಾಂಗ್ರೆಸ್‌ನ ಮಾಜಿ ಸಚಿವ ವಿಲಾಸ್ ರಾವ್ ಮುತ್ತೇಮ್‌ವಾರ್ ’ರಾಹುಲ್ ಗಾಂಧಿಯ ವಂಶಸ್ಥರು ಯಾರು ಎಂದು ಇಡೀ ಜಗತ್ತಿಗೇ ತಿಳಿದಿದೆ. ಆದರೆ ಪ್ರಧಾನಿ ಮೋದಿಯ ಅಪ್ಪ ಯಾರು? ಎಂದು ಯಾರಿಗೂ ತಿಳಿದಿಲ್ಲ. ಹೀಗಿದ್ದರೂ ಮೋದಿಯವರು ರಾಹುಲ್ ಗಾಂಧಿ ಬಳಿ ಲೆಕ್ಕ ಕೇಳುತ್ತಾರೆ’ ಎಂದಿದ್ದಾರೆ. 

Congress leader Vilasrao Muttemwar says Nobody knows name of Modi s father
Author
New Delhi, First Published Nov 25, 2018, 3:38 PM IST

ನವದೆಹಲಿ[ಜ.25]: ಮಾಜಿ ಕೇಂದ್ರ ಸಚಿವ ಸಿ. ಪಿ ಜೋಷಿ ಹಾಗೂ ರಾಜ್ ಬಬ್ಬರ್ ಬಳಿಕ ಮತ್ತೊಬ್ಬ ಕೈ ನಾಯಕ ಪ್ರಧಾನಿ ಮೋದಿ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಕಾಂಗ್ರೆಸ್‌ನ ಮಾಜಿ ಸಚಿವ ವಿಲಾಸ್ ರಾವ್ ಮುತ್ತೇಮ್‌ವಾರ್ ’ರಾಹುಲ್ ಗಾಂಧಿಯ ವಂಶಸ್ಥರು ಯಾರು ಎಂದು ಇಡೀ ಜಗತ್ತಿಗೇ ತಿಳಿದಿದೆ. ಆದರೆ ಪ್ರಧಾನಿ ಮೋದಿಯ ಅಪ್ಪ ಯಾರು? ಎಂದು ಯಾರಿಗೂ ತಿಳಿದಿಲ್ಲ. ಹೀಗಿದ್ದರೂ ಮೋದಿಯವರು ರಾಹುಲ್ ಗಾಂಧಿ ಬಳಿ ಲೆಕ್ಕ ಕೇಳುತ್ತಾರೆ’ ಎಂದಿದ್ದಾರೆ. 

ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕ ಪ್ರಧಾನಿ ಮೋದಿಯ ವಿರುದ್ಧ ವಾಗ್ಧಾಳಿ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಈ ವಿಡಿಯೋ ಶೇರ್ ಮಾಡಿಕೊಂಡಿರುವ ಅಮಿತ್ ಮಾಳವೀಯ 'ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ವಿಲಾಸ್ ರಾವ್ ಅವರು ಮೋದಿ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿಯ ವಂಶಸ್ಥರ ಬಗ್ಗೆ ಇಡೀ ವಿಶ್ವಕ್ಕೇ ತಿಳಿದಿದೆ ಆದರೆ ಪ್ರಧಾನಿ ಮೋದಿಯ ತಂದೆ ಯಾರು? ಎಂದು ಪ್ರಶ್ನಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೋದಿ ತಾಯಿ ಬಗ್ಗೆ ಕಾಂಗ್ರೆಸ್‌ ಮುಖಂಡನ ಕೀಳು ಹೇಳಿಕೆ

ಇತ್ತೀಚೆಗಷ್ಟೇ ಮಧ್ಯಪ್ರದೇಶ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಪಿಎಂ ಮೋದಿ ತಾಯಿಯ ಕುರಿತಾಗಿ ವಿವಾದಾತ್ಮ,ಕ ಹೇಳಿಕೆ ನೀಡಿದ್ದರು. ಡಾಲರ್ ಎದುರು ಕುಸಿತ ಕಾಣುತ್ತಿರುವ ರೂಪಾಯಿ ಮೌಲ್ಯವನ್ನು ಪ್ರಧಾನಿ ಮೋದಿಯ ತಾಯಿಯ ವಯಸ್ಸಿಗೆ ಹೋಲಿಸುವ ಮೂಲಕ ವಿವಾದ ಹುಟ್ಟು ಹಾಕಿದ್ದರು.

ಇದನ್ನೂ ಓದಿ: ಮೋದಿ ಜಾತಿ ವಿವಾದ: ಕ್ಷಮೆ ಯಾಚಿಸಲು 'ಕೈ' ಮುಖಂಡನಿಗೆ ರಾಹುಲ್ ಆದೇಶ

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಸಿ. ಪಿ ಜೋಶಿ ಕೂಡಾ ಪ್ರಧಾನಿ ಮೋದಿ ಹಾಗೂ ಉಮಾಭಾರತಿ ಜಾತಿಯನ್ನು ಪ್ರಶ್ನಿಸುವ ಮೂಲಕ ಚರ್ಚೆ ಹುಟ್ಟು ಹಾಕಿದ್ದರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹೇಳಿಕೆ ಖಂಡಿಸಿದ ಬಳಿಕ ಅವರು ಕ್ಷಮೆ ಯಾಚಿಸಿದ್ದರು.

Follow Us:
Download App:
  • android
  • ios