Asianet Suvarna News Asianet Suvarna News

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಮತ್ತೆ 14 ದಿನ ಡಿಕೆಶಿಗೆ ಜೈಲೇ ಗತಿ..!

ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ| ಅಕ್ಟೋಬರ್ 14ಕ್ಕೆ ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್| ನಾಳೆಗೆ ಡಿಕೆಶಿ ನ್ಯಾಯಾಂಗ ಬಂಧನ ಅಂತ್ಯವಾದರೂ ತಪ್ಪದ ಜೈಲುವಾಸ
 

Congress leader DK Shivakumar should be in Tihar jail for 14 more days as bail plea trail put off
Author
Bangalore, First Published Sep 30, 2019, 11:44 AM IST

ಬೆಂಗಳೂರು[ಸೆ.30]: ಇಡಿ ಸುಳಿಯಲ್ಲಿ ಸಿಲುಕಿರುವ ಡಿ. ಕೆ. ಶಿವಕುಮಾರ್ ಹೊರ ಬರಲು ಹರ ಸಾಹಸ ನಡೆಸುತ್ತಿದ್ದಾರೆ. ಒಂದು ತಿಂಗಳಿನಿಂದ ವಿಚಾರಣೆ ಎದುರಿಸುತ್ತಿರುವ ಡಿಕೆಶಿ ಜಾಮೀನು ಸಿಗದೆ ತಿಹಾರ್ ಜೈಲು ಸೇರಿದ್ದಾರೆ. ಸದ್ಯ ಇನ್ನೂ 14 ದಿನ ಡಿಕೆಶಿ ಜೈಲಿನಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

"

ಡಿಕೆಶಿ ಭೇಟಿಯಾದ ಅಹ್ಮದ್ ಪಟೇಲ್, ಮಹತ್ವದ ಸಂದೇಶ ತಲುಪಿಸಿದ ಸೋನಿಯಾ ಆಪ್ತ!

ಹೌದು ಪದೇ ಪದೇ ಜಾಮೀನು ಅರ್ಜಿ ವಜಾ ಹಾಗೂ ವಿಚಾರಣೆ ಮುಂದೂಡಿಕೆಯಾದ ಪರಿಣಾಮ ಡಿಕೆಶಿ ತಿಹಾರ್ ಜೈಲು ಸೇರಿದ್ದಾರೆ. ಹೀಗಿರುವಾಗ ಇಂದು ಸೆ. 30ರಂದು ನಡೆಯಬೇಕಿದ್ದ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 14 ಮುಂದೂಡಿಯಾಗಿದೆ. ಹೀಗಾಗಿ ನಾಳೆ[ಸೆ.30]ಗೆ ಡಿಕೆಶಿ ನ್ಯಾಯಾಂಗ ಬಂಧನ ಅಂತ್ಯವಾದರೂ ಮತ್ತೆ 14 ದಿನ ಜೈಲಿನಲ್ಲಿರಬೇಕಾಗುತ್ತದೆ. 

ಅಣ್ಣ ಡಿಕೆಶಿ ಬೆನ್ನಲ್ಲೇ ತಮ್ಮನಿಗೂ ED ನೋಟಿಸ್!

ಅತ್ತ ಡಿಕೆಶಿ ತಿಹರ್ ಜೈಲಿನಲ್ಲಿದ್ದು ಸಂಕಷ್ಟವನ್ನೆದುರಿಸುತ್ತಿದ್ದರೆ, ಇತ್ತ ತಮ್ಮ ಡಿ. ಕೆ ಸುರೇಶ್ ಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ. ಡಿಕೆ ಕುಟುಂಬ ಈ ಸಂಕಷ್ಟಗಳ ಸರಮಾಲೆಯಿಂದ ಹೇಗೆ ಹೊರ ಬರುತ್ತೆ ಕಾದು ನೊಡಬೇಕಷ್ಟೆ

Follow Us:
Download App:
  • android
  • ios