Asianet Suvarna News Asianet Suvarna News

ಬ್ರಿಟಿಷ್ ಲೈಬ್ರೆರಿಯ 'ಅಶ್ಲೀಲ ಬರವಣಿಗೆಗಳು' ಆನ್‌ಲೈನ್‌ನಲ್ಲಿ!

ಇನ್ಮುಂದೆ ಬ್ರಿಟಿಷ್ ಲೈಬ್ರೆರಿಯಲ್ಲಿದ್ದ ಅಶ್ಲೀಲ ಬರವಣಿಗೆಗಳು ಆನ್‌ಲೈನ್‌ನಲ್ಲಿ ಲಭ್ಯ| ರಹಸ್ಯವಾಗಿರಿಸಿದ್ದ ಬರವಣಿಗೆಗಳು ಇದೀಗ ಆನ್‌ಲೈನ್‌ನಲ್ಲಿ ಲಭ್ಯ| ರೋಜರ್ ಫ್ಯುಕ್ವೆಲ್ಲಿ ಬರೆದಿದ್ದ ಹಲವು ರಹಸ್ಯ ಲೇಖನಗಳು ಸಾರ್ವಜನಿಕವಾಗಿ ಲಭ್ಯ| ಅಮೂಲ್ಯ ಬರವಣಿಗೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಲು ನಿರ್ಧಾರ

Collection of Obscene Writings of British Library Goes Online
Author
Bengaluru, First Published Feb 5, 2019, 7:54 PM IST

ಇಂಗ್ಲೆಂಡ್(ಫೆ.05): ಬ್ರಿಟಿಷ್ ಲೈಬ್ರೆರಿ ಅಂದ್ರೆ ಅದಕ್ಕೆ ಆದ ಇತಿಹಾಸವಿದೆ. ಅದಕ್ಕೆ ಆದ ಗರ್ವ ಇದೆ. ಇಲ್ಲಿ ವಿಶ್ವದ ಖ್ಯಾತನಾಮರೆಲ್ಲಾ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬರೆದಿರುವ ಪುಸ್ತಕಗಳ ಭಂಡಾರವೇ ಇಲ್ಲಿದೆ.

ಅದರಂತೆ ಬ್ರಿಟಿಷ್ ಲೈಬ್ರೆರಿಯಲ್ಲಿ 'ಅಶ್ಲೀಲ ಬರವಣಿಗೆ'ಗಳಿಗೂ ಒಂದು ಸ್ಥಾನ ಅಂತಾ ಇದೆ. ಪ್ರಮುಖವಾಗಿ ೧೮ನೇ ಶತಮಾನದಲ್ಲಿ ರೋಜರ್ ಫ್ಯುಕ್ವೆಲ್ಲಿ ಎಂಬಾತ ಬರೆದ ಹಲವು ಅಶ್ಲೀಲ ಬರವಣಿಗೆಗಳ ದಾಸ್ತಾನು ಬ್ರಿಟಿಷ್ ಲೈಬ್ರೆರಿಯಲ್ಲಿದೆ.

ಇವುಗಳನ್ನು 'PRIVATE CASE' ಎಂಬ ಪ್ರತ್ಯೇಕ ವಿಭಾಗದಲ್ಲಿ ಗುಪ್ತವಾಗಿರಿಸಲಾಗಿದೆ. ಆದರೆ ಇದೀಗ ಈ ದಾಖಲೆಗಳನ್ನು ಸಾರ್ವಜನಿಕವಾಗಿಸುವ ನಿರ್ಧಾರಕ್ಕೆ ಬ್ರಿಟಿಷ್ ಲೈಬ್ರೆರಿ ಬಂದಿದೆ.

ಹೌದು, ಬ್ರಿಟಿಷ್ ಲೈಬ್ರೆರಿಯಲ್ಲಿರುವ ಅನೇಕ ಬರವಣಿಗೆಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಅದರಂತೆ ಫ್ಯುಕ್ವೆಲ್ಲಿ ಸೇರಿದಂತೆ ಹಲವು ಬರಹಗಾರರ ಅಶ್ಲೀಲ ಬರವಣಿಗೆಗಳೂ ಸೇರಿವೆ.

ಈ ಕುರಿತು ಮಾಹಿತಿ ನೀಡಿರುವ ಗ್ರಂಥಾಲಯದ ಪ್ರಿಂಟಿಂಗ್ ವಿಭಾಗದ ಮುಖ್ಯಸ್ಥ ಆಡ್ರಿಯನ್ ಎಡ್ವರ್ಡ್ಸ್, ಹಲವು ಅಮೂಲ್ಯ ಬರವಣಿಗೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios