news
By Suvarna Web Desk | 06:19 AM April 21, 2017
ಒಂದೇ ಕಾಪ್ಟರಲ್ಲಿ ಸಿಎಂ, ದೇವೇಗೌಡರ ಪ್ರಯಾಣ?

Highlights

ಆದರೆ, ಇದನ್ನು ಸಿದ್ದರಾಮಯ್ಯ ಹಾಗೂ ದೇವೇಗೌಡರ ಆಪ್ತ ಬಳಗ ನಿರಾಕರಿಸುತ್ತವೆ. ಈ ಕಾರ್ಯಕ್ರಮಕ್ಕೆ ಇಬ್ಬರಿಗೂ ಆಹ್ವಾನವಿರುವುದು ನಿಜ. ಆದರೆ, ಇಬ್ಬರೂ ನಾಯಕರು ಪ್ರತ್ಯೇಕ ಹೆಲಿಕಾಪ್ಟರ್‌ಗಳಲ್ಲಿ ತೆರಳಲಿದ್ದಾರೆ ಎಂದು ಸಿಎಂ ಆಪ್ತ ಮೂಲ ಹೇಳಿದರೆ, ದೇವೇಗೌಡರು ಈ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್‌ ಮೂಲಕ ತೆರಳುವ ಮಾಹಿತಿಯಿದೆ. ಆದರೆ, ಈ ಯೋಜನೆ ಕಡೆ ಕ್ಷಣದಲ್ಲಿ ರದ್ದಾದರೂ ರದ್ದಾಗಬಹುದು.

ದಶಕಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಒಂದೇ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಲಿದ್ದಾರೆಯೇ?

ಉಡುಪಿ ಜಿಲ್ಲೆಯ ಭಾರ್ಗವ ಬೀಡುವಿನಲ್ಲಿ ಶ್ರೀ ಬಾರ್ಕೂರು ಮಹಾಸಂಸ್ಥಾನಂ ಟ್ರಸ್ಟ್‌ ಆಯೋಜಿಸಿರುವ ಅಳಿಯಕಟ್ಟು ಪರಂಪರೆಯ ಸಮುದಾಯಗಳ ಶ್ರೀ ಸಂಸ್ಥಾನ ಲೋಕಾರ್ಪಣೆ ಉದ್ಘಾಟನಾ ಸಮಾರಂಭ ಶುಕ್ರವಾರ ಮಧ್ಯಾಹ್ನ 12ಕ್ಕೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದೇವೇಗೌಡ ಇಬ್ಬರಿಗೂ ಆಹ್ವಾನವಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಒಂದೇ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿ​ನಿಂದ ಉಡುಪಿಯ ಬಾರ್ಕೂರಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯೊಂದು ಇದೆ ಎಂದು ಉನ್ನತ ಮೂಲಗಳು ಹೇಳುತ್ತವೆ.

ಆದರೆ, ಇದನ್ನು ಸಿದ್ದರಾಮಯ್ಯ ಹಾಗೂ ದೇವೇಗೌಡರ ಆಪ್ತ ಬಳಗ ನಿರಾಕರಿಸುತ್ತವೆ.

ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಒಂದೇ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿ​ನಿಂದ ಉಡುಪಿಯ ಬಾರ್ಕೂರಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯೊಂದು ಇದೆ ಎಂದು ಉನ್ನತ ಮೂಲಗಳು ಹೇಳುತ್ತವೆ.

ಆದರೆ, ಇದನ್ನು ಸಿದ್ದರಾಮಯ್ಯ ಹಾಗೂ ದೇವೇಗೌಡರ ಆಪ್ತ ಬಳಗ ನಿರಾಕರಿಸುತ್ತವೆ. ಈ ಕಾರ್ಯಕ್ರಮಕ್ಕೆ ಇಬ್ಬರಿಗೂ ಆಹ್ವಾನವಿರುವುದು ನಿಜ. ಆದರೆ, ಇಬ್ಬರೂ ನಾಯಕರು ಪ್ರತ್ಯೇಕ ಹೆಲಿಕಾಪ್ಟರ್‌ಗಳಲ್ಲಿ ತೆರಳಲಿದ್ದಾರೆ ಎಂದು ಸಿಎಂ ಆಪ್ತ ಮೂಲ ಹೇಳಿದರೆ, ದೇವೇಗೌಡರು ಈ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್‌ ಮೂಲಕ ತೆರಳುವ ಮಾಹಿತಿಯಿದೆ. ಆದರೆ, ಈ ಯೋಜನೆ ಕಡೆ ಕ್ಷಣದಲ್ಲಿ ರದ್ದಾದರೂ ರದ್ದಾಗಬಹುದು.

ಏಕೆಂದರೆ, ದೇವೇಗೌಡರು ತಮ್ಮ ಆತ್ಮಕಥೆ ರಚಿಸುತ್ತಿರುವ ಲೇಖಕರು ಹಾಗೂ ವಿದ್ವಾಂಸರೊಂದಿಗೆ ಮೈಸೂರಿನಲ್ಲಿ ಸಭೆಯೊಂದನ್ನು ಆಯೋಜಿಸಿದ್ದು, ಈ ಸಭೆಗೆ ಅವರು ತೆರಳುವ ಸಾಧ್ಯತೆ ಯೂ ಇದೆ ಎನ್ನುತ್ತವೆ. ಒಂದು ವೇಳೆ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಒಂದೇ ಹೆಲಿಕಾಪ್ಟರ್‌ನಲ್ಲಿ ತೆರಳಿದರೆ, ದಶಕಗಳ ನಂತರ ಈ ನಾಯಕರು ಇಂತಹದೊಂದು ಪ್ರಯಾಣ ಮಾಡಿದಂತಾಗುತ್ತದೆ.

Show Full Article

Recommended

bottom right ad