news
By Suvarna Web Desk | 04:10 PM January 11, 2017
ಖೈದಿ ನಂ 150 ಚಿತ್ರ ಬಿಡುಗಡೆಗೆ ಅಭಿಮಾನಿಗಳ ದಾಂಧಲೆ

Highlights

ತೆಲುಗು ಚಿತ್ರರಂಗದ ದಿಗ್ಗಜ, ಮೆಗಾಸ್ಟಾರ್ ಚಿರಂಜೀವಿ ಅವರ 150 ನೇ ಚಿತ್ರ ಎಂಬ ಕಾರಣಕ್ಕೋ ಅಥವಾ ದಶಕದ ನಂತರ ಅವರು ಪುನಃ ಚಿತ್ರ ಮಾಡಿದ್ದಾರೆ ಎಂಬ ಕಾರಣಕ್ಕೋ ಚಿರು ಅಭಿನಯದ ‘ಕೈದಿ ನಂ.150’ ಚಿತ್ರಕ್ಕೆ ಆಂಧ್ರ, ತೆಲಂಗಾಣವಲ್ಲದೆ ದೇಶದ್ಯಂತ ಕಾತುರತೆ ಇತ್ತು. ಚಿತ್ರ ಬುಧವಾರ ದೇಶಾದ್ಯಂತ ಬಿಡುಗಡೆಯೂ ಆಗಿದೆ. ಆದರೆ, ಹೈದರಾಬಾದ್ ಕರ್ನಾಟಕ ಭಾಗದ ರಾಯಚೂರಿನಲ್ಲಿ ಮಂಗಳವಾರ ತಡರಾತ್ರಿಯೇ ಚಿತ್ರ ಪ್ರದರ್ಶನಕ್ಕೆ ಅಭಿಮಾನಿಗಳು ಒತ್ತಾಯಿಸಿದರು. ಅಷ್ಟೇ ಅಲ್ಲ, ಚಿತ್ರಮಂದಿರದ ಎದುರು ಪಟ್ಟು ಹುಡಿದು ಕುಳಿತಿದ್ದ ಅಭಿಮಾನಿಗಳು ದಾಂಧಲೆ ಸೃಷ್ಟಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 28 ಮಂದಿಯನ್ನು ಬಂಧಿಸಲಾಗಿದೆ. 

ರಾಯಚೂರು (ಜ.11): ತೆಲುಗು ಚಿತ್ರರಂಗದ ದಿಗ್ಗಜ, ಮೆಗಾಸ್ಟಾರ್ ಚಿರಂಜೀವಿ ಅವರ 150 ನೇ ಚಿತ್ರ ಎಂಬ ಕಾರಣಕ್ಕೋ ಅಥವಾ ದಶಕದ ನಂತರ ಅವರು ಪುನಃ ಚಿತ್ರ ಮಾಡಿದ್ದಾರೆ ಎಂಬ ಕಾರಣಕ್ಕೋ ಚಿರು ಅಭಿನಯದ ‘ಕೈದಿ ನಂ.150’ ಚಿತ್ರಕ್ಕೆ ಆಂಧ್ರ, ತೆಲಂಗಾಣವಲ್ಲದೆ ದೇಶದ್ಯಂತ ಕಾತುರತೆ ಇತ್ತು. ಚಿತ್ರ ಬುಧವಾರ ದೇಶಾದ್ಯಂತ ಬಿಡುಗಡೆಯೂ ಆಗಿದೆ. ಆದರೆ, ಹೈದರಾಬಾದ್ ಕರ್ನಾಟಕ ಭಾಗದ ರಾಯಚೂರಿನಲ್ಲಿ ಮಂಗಳವಾರ ತಡರಾತ್ರಿಯೇ ಚಿತ್ರ ಪ್ರದರ್ಶನಕ್ಕೆ ಅಭಿಮಾನಿಗಳು ಒತ್ತಾಯಿಸಿದರು. ಅಷ್ಟೇ ಅಲ್ಲ, ಚಿತ್ರಮಂದಿರದ ಎದುರು ಪಟ್ಟು ಹುಡಿದು ಕುಳಿತಿದ್ದ ಅಭಿಮಾನಿಗಳು ದಾಂಧಲೆ ಸೃಷ್ಟಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 28 ಮಂದಿಯನ್ನು ಬಂಧಿಸಲಾಗಿದೆ. 

ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಮೆಗಾಸ್ಟಾರ್ ಚಿರಂಜೀವಿ ಬರೋಬ್ಬರಿ ದಶಕದ ನಂತರ ಸಿನಿಮಾದಲ್ಲಿ ನಟಿಸಿದ್ದರಿಂದ ಅವರ ಅಭಿಮಾನಿಗಳಲ್ಲಿ ಕೈದಿ ನಂ.150 ತೀವ್ರ ಕುತೂಹಲ ಮೂಡಿಸಿದೆ. ಇದರಿಂದ ರಾಯಚೂರಿನ ನಾಲ್ಕು ಚಿತ್ರಮಂದಿರಗಳ ಪೈಕಿ ಮೂರರಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಗರದ ಪೂರ್ಣಿಮಾ ಚಿತ್ರಮಂದಿರದ ಎದುರು ಮಂಗಳವಾರ ರಾತ್ರಿಯೇ ಅಭಿಮಾನಿಗಳು ಜಮಾಯಿಸಿದ್ದರು. ಚಿತ್ರ ವೀಕ್ಷಣೆಯ ಕಾತುರತೆ ತಾಳದ ಅಭಿಮಾನಿಗಳು ಕೊನೆಗೆ, ತಡರಾತ್ರಿಯೇ ಚಿತ್ರಪ್ರದರ್ಶಿಸಬೇಕೆಂದು ಪೂರ್ಣಿಮಾ ಚಿತ್ರಮಂದಿರದ ನಿರ್ವಾಹಕರನ್ನು ಒತ್ತಾಯಿಸಿದರು. ಆದರೆ ಚಿತ್ರಮಂದಿರದ ಸಿಬ್ಬಂದಿ ಪ್ರದರ್ಶನಕ್ಕೆ ಒಪ್ಪಿಲ್ಲ. ಪೊಲೀಸರು ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಗ್ಗೆ 9 ಕ್ಕೆ ಚಿತ್ರಪ್ರದರ್ಶನ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರದ ಎದುರು ಗದ್ದಲವೆಬ್ಬಿಸಿದರು.

ಅವರನ್ನು ಪೊಲೀಸರು ನಿಯಂತ್ರಿಸಲು ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸ್ ವಾಹನಗಳ ಮೇಲೆ ಕಲ್ಲೆಸೆದು, ಗಾಜು ಪುಡಿ ಪುಡಿಗಟ್ಟಿದರು. ಆಗ ಗುಂಪು ಚದುರಿಸಲು ಪೊಲೀಸರು ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಿದರು. ಘಟನೆಯಲ್ಲಿ ಯರಗೇರಾ ಸಿಪಿಐ ಸುರೇಶ ಸೇರಿ ನಾಲ್ಕು ಮಂದಿ ಪೊಲೀಸರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

Show Full Article


Recommended


bottom right ad