news
By Suvarna Web Desk | 11:15 AM April 21, 2017
ಅರುಣಾಚಲ ಪ್ರದೇಶ ಮರುನಾಮಕರಣ ನಮ್ಮ ಕಾನೂನುಬದ್ಧ ಹಕ್ಕು: ಚೀನಾ

Highlights

ಭಾರತಕ್ಕೆ ಸೇರಿದ ಸೇರಿದ ಅರುಣಾಚಲ ಪ್ರದೇಶದ 6 ಪ್ರದೇಶಗಳಿಗೆ  ಚೀನಾ ತನ್ನದೇ ಭಾಷೆಯಲ್ಲಿ ಮರುನಾಮಕರಣ ಮಾಡಿರುವುದನ್ನು ಇದು ನಮ್ಮ ಕಾನೂನಿನ ಹಕ್ಕು ಎಂದು ತನ್ನ ನಡೆಯನ್ನು ಚೀನಾ ಸಮರ್ಥಿಸಿಕೊಂಡಿದೆ.  

ನವದೆಹಲಿ (ಏ.21): ಭಾರತಕ್ಕೆ ಸೇರಿದ ಸೇರಿದ ಅರುಣಾಚಲ ಪ್ರದೇಶದ 6 ಪ್ರದೇಶಗಳಿಗೆ  ಚೀನಾ ತನ್ನದೇ ಭಾಷೆಯಲ್ಲಿ ಮರುನಾಮಕರಣ ಮಾಡಿರುವುದನ್ನು ಇದು ನಮ್ಮ ಕಾನೂನಿನ ಹಕ್ಕು ಎಂದು ತನ್ನ ನಡೆಯನ್ನು ಚೀನಾ ಸಮರ್ಥಿಸಿಕೊಂಡಿದೆ.  

ಈ ಸಂಬಂಧ ಚೀನಾ ವಿದೇಶಾಂಗ ಸಚಿವಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದು, ಭಾರತ-ಚೀನಾ ಬೌಂಡರಿಯು ಸ್ಪಷ್ಟವಾಗಿದೆ. ಹಲವು ವರ್ಷಗಳ ಕಾಲ ಇಲ್ಲಿ ಬಾಳಿ ಬದುಕಿದ್ದ ಮೊಂಬಾ ಮತ್ತು ಟಿಬೆಟಾನ್ ಜನಾಂಗಗಳು ಆ ಹೆಸರನ್ನು ಬಳಸಿವೆ.  ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ಹೆಸರನ್ನು ಅಧಿಕೃತಗೊಳಿಸಿ ಪ್ರಚಾರ ಮಾಡುವುದು ನಮ್ಮ ಕಾನೂನುಬದ್ಧ ಹಕ್ಕು ಎಂದು ಚೀನಾ ಹೇಳಿದೆ.

ಈ ವಿಷಯವಾಗಿ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತ ಸರಕಾರ, ಹೆಸರು ಬದಲಿಸಿದರೆ ಅಕ್ರಮ ನಾಡು ಸ್ವಂತದ್ದಾಗುವುದಿಲ್ಲ ಎಂದು ಟಾಂಗ್ ಕೊಟ್ಟಿದೆ. ಅರುಣಾಚಲ ಯಾವತ್ತಿದ್ದರೂ ಭಾರತದ ಅವಿಭಾಜ್ಯ ಅಂಗ. ಅರುಣಾಚಲದ ಸ್ಥಳಗಳಿಗೆ ಹೊಸ ಹೆಸರು ಕೊಡುವ ಯಾವ ಹಕ್ಕೂ ಚೀನಾಗೆ ಇಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದೆ.

ಚೀನಾ ದೇಶವು ಭಾರತದಲ್ಲಿರುವ ಅರುಣಾಚಲಪ್ರದೇಶ ರಾಜ್ಯವನ್ನು ತನ್ನದೆಂದು ಪ್ರಬಲವಾಗಿ ವಾದಿಸುತ್ತಿದೆ. ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದೂ ಕರೆಯುವ ಚೀನಾ ನಿನ್ನೆ ಆ ರಾಜ್ಯದ 6 ಸ್ಥಳಗಳಿಗೆ ಹೊಸ ನಾಮಕರಣ ಮಾಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹೆಸರುಗಳು ಸೌತ್ ಟಿಬೆಟ್ ಮೇಲೆ ಚೀನಾಗಿರುವ ಹಕ್ಕನ್ನು ಪ್ರತಿಫಲಿಸುತ್ತವೆ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆಡಳಿತಾತ್ಮಕವಾಗಿ ಸ್ಪಷ್ಟ ಸಾಕ್ಷ್ಯಾಧಾರಗಳಿಂದ ಮರುನಾಮಕರಣ ಮಾಡಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವ ಲೂ ಕಾಂಗ್ ಹೇಳಿಕೆ ನೀಡಿದ್ದಾರೆ.

 

Show Full Article


Recommended


bottom right ad