Asianet Suvarna News Asianet Suvarna News

ಉ.ಕೊರಿಯಾಕ್ಕೆ ಚೀನಾ ಶಾಕ್

ವಿಶ್ವ ಸಮುದಾಯದ ಎಚ್ಚರಿಕೆಗಳನ್ನು ಉಪೇಕ್ಷಿಸಿ ಒಂದಾದ ಮೇಲೊಂದರಂತೆ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾದಿಂದ ಇದೀಗ ಅದರ ಪರಮಾಪ್ತ ದೇಶ ಚೀನಾ ಕೂಡ ಅಂತರ ಕಾಯ್ದುಕೊಂಡಿದೆ. ವಿಶ್ವಸಂಸ್ಥೆ ದಿಗ್ಬಂಧನ ಹೇರಿದ ಬೆನ್ನಲ್ಲೇ, ಉತ್ತರ ಕೊರಿಯಾಗೆ ತಾನು ಪೂರೈಕೆ ಮಾಡುತ್ತಿದ್ದ ಪೆಟ್ರೋಲ್, ಡೀಸೆಲ್‌'ನಂತಹ ಸಂಸ್ಕರಿತ ಪೆಟ್ರೋಲಿಯಂ ರಫ್ತು ಪ್ರಮಾಣವನ್ನು ವರ್ಷಕ್ಕೆ 20 ಲಕ್ಷ ಬ್ಯಾರೆಲ್‌'ಗೆ ತಗ್ಗಿಸಿದೆ. ಅಲ್ಲದೆ 2015ರ ಜ.1ರಿಂದ ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಸರಬರಾಜನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

China moves to implement UN sanctions with limits on some refined oil exports to North Korea

ಬೀಜಿಂಗ್/ಪ್ಯೋಂಗ್‌ಯಾಂಗ್(ಸೆ.24): ವಿಶ್ವ ಸಮುದಾಯದ ಎಚ್ಚರಿಕೆಗಳನ್ನು ಉಪೇಕ್ಷಿಸಿ ಒಂದಾದ ಮೇಲೊಂದರಂತೆ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾದಿಂದ ಇದೀಗ ಅದರ ಪರಮಾಪ್ತ ದೇಶ ಚೀನಾ ಕೂಡ ಅಂತರ ಕಾಯ್ದುಕೊಂಡಿದೆ. ವಿಶ್ವಸಂಸ್ಥೆ ದಿಗ್ಬಂಧನ ಹೇರಿದ ಬೆನ್ನಲ್ಲೇ, ಉತ್ತರ ಕೊರಿಯಾಗೆ ತಾನು ಪೂರೈಕೆ ಮಾಡುತ್ತಿದ್ದ ಪೆಟ್ರೋಲ್, ಡೀಸೆಲ್‌'ನಂತಹ ಸಂಸ್ಕರಿತ ಪೆಟ್ರೋಲಿಯಂ ರಫ್ತು ಪ್ರಮಾಣವನ್ನು ವರ್ಷಕ್ಕೆ 20 ಲಕ್ಷ ಬ್ಯಾರೆಲ್‌'ಗೆ ತಗ್ಗಿಸಿದೆ. ಅಲ್ಲದೆ 2015ರ ಜ.1ರಿಂದ ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಸರಬರಾಜನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡವಳಿಕೆ ವಿರುದ್ಧ ಚೀನಾ ಸಿಟ್ಟಾಗಿರುವುದರ ಪ್ರತೀಕ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ತೈಲ ಕೊರತೆ ಎದುರಿಸುತ್ತಿರುವ ಉತ್ತರ ಕೊರಿಯಾಗೆ ಚೀನಾದ ಈ ನಿರ್‘ಾರ ದುಬಾರಿಯಾಗಿ ಪರಿಣಮಿಸಿದೆ. ಉತ್ತರ ಕೊರಿಯಾದಲ್ಲಿ ತೈಲೋತ್ಪನ್ನಗಳ ಬೆಲೆ ಎರಡು ತಿಂಗಳ ಅವಧಿಯಲ್ಲಿ ಶೇ.20ರಷ್ಟು ಏರಿಕೆ ಕಂಡಿದೆ. ಚೀನಾ ಕೂಡ ಪೂರೈಕೆ ಕಡಿತಗೊಳಿಸಿದರೆ ತೈಲ ಬೆಲೆ ಗಗನ ಮುಟ್ಟಬಹುದು. ಇದರಿಂದ ನಾಗರಿಕರು ಹಾಗೂ ಸೇನಾಪಡೆಗಳ ಓಡಾಟಕ್ಕೆ ತೊಂದರೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಉತ್ತರ ಕೊರಿಯಾಕ್ಕೆ ಚೀನಾ ಈವರೆಗೆ ಎಷ್ಟು ತೈಲ ಪೂರೈಕೆ ಮಾಡುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ವಿಶ್ವಸಂಸ್ಥೆಯ ಪ್ರಕಾರ, 40 ಲಕ್ಷ ಬ್ಯಾರೆಲ್ ಕಚ್ಚಾತೈಲ ಹಾಗೂ 45 ಲಕ್ಷ ಬ್ಯಾರೆಲ್ ಪೆಟ್ರೋಲ್, ಡೀಸೆಲ್‌ನಂತಹ ಸಂಸ್ಕರಿತ ತೈಲವನ್ನು ಚೀನಾ ಪೂರೈಸುತ್ತಿದೆ. ಈಗ ಸಂಸ್ಕರಿತ ತೈಲವನ್ನು 20 ಲಕ್ಷ ಬ್ಯಾರೆಲ್‌ಗೆ ಇಳಿಸಿರುವುದು ಕೊರಿಯಾಗೆ ದೊಡ್ಡ ಹೊಡೆತ ಎಂದು ಹೇಳಲಾಗಿದೆ.

ಉತ್ತರ ಕೊರಿಯಾಗೆ ಚೀನಾ ಬಹುದೊಡ್ಡ ಮಿತ್ರ ರಾಷ್ಟ್ರ, ರಾಜತಾಂತ್ರಿಕ ರಕ್ಷಕ ಹಾಗೂ ಪ್ರಮುಖ ವ್ಯವಹಾರ ಪಾಲುದಾರ ಆಗಿತ್ತು ಎಂಬುದು ಗಮನಾರ್ಹ. ಇತ್ತೀಚೆಗೆ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಉತ್ತರ ಕೊರಿಯಾ ನಡೆಸಿದ ಬಳಿಕ ವಿಶ್ವಸಂಸ್ಥೆ ಆ ದೇಶಕ್ಕೆ ಪೂರೈಕೆಯಾಗುವ ತೈಲೋತ್ಪನ್ನಗಳ ಮೇಲೆ ದಿಗ್ಬಂ‘ನ ವಿಧಿಸಿತ್ತು. ಅದನ್ನು ಚೀನಾ ಪಾಲಿಸಿದೆ.

ಉ.ಕೊರಿಯಾದಲ್ಲಿ ಪೆಟ್ರೋಲ್ ಬೆಲೆ ದಿಢೀರ್ ಏರಿಕೆ

ವಿಶೇಷ ಎಂದರೆ, ಉತ್ತರ ಕೊರಿಯಾದಲ್ಲಿ ಕೆ.ಜಿ. ಲೆಕ್ಕದಲ್ಲಿ ಪೆಟ್ರೋಲ್ ಮಾರಾಟ ಮಾಡುವ ಪರಿಪಾಠವಿದೆ. ಒಂದು ಲೀಟರ್ ಪೆಟ್ರೋಲ್ ೦.77 ಕೆ.ಜಿ. ತೂಕ ಬರುತ್ತದೆ. ಕೆ.ಜಿ. ಲೆಕ್ಕದಲ್ಲಿ ಪೆಟ್ರೋಲ್ ಖರೀದಿಸಿದರೆ ಒಂದು ಲೀಟರ್‌ಗೆ 168 ರು. ಆಗುತ್ತದೆ. ಒಂದು ಕೆ.ಜಿ. ಪೆಟ್ರೋಲ್ ಶುಕ್ರವಾರ 123 ರು. ಇತ್ತು. ಶನಿವಾರ 130 ರು. ಆಗಿದೆ. ಇದು ಮತ್ತಷ್ಟು ಏರುವ ಸಂಭವವಿದೆ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಹೇಳುತ್ತಿದ್ದಾರೆ.

 

 

Follow Us:
Download App:
  • android
  • ios