Asianet Suvarna News Asianet Suvarna News

ಮೋದಿ ಅಹಂಕಾರ ತೃಪ್ತಿ ಪಡಿಸಲು ಅವರನ್ನು ಹೀಗೆ ಕರೆಯುತ್ತಿದ್ದೆ : ನಾಯ್ಡು

ನನಗಿಂತಲೂ ರಾಜಕೀಯದಲ್ಲಿ ಜೂನಿಯರ್ ಆಗಿರುವ ನರೇಂದ್ರ ಮೋದಿ ಅವರ ಅಹಂಕಾರ ತೃಪ್ತಿಪಡಿಸಲು ಅವರನ್ನು ನಾನು ಸರ್ ಎಂದೇ ಕರೆಯುತ್ತಿದ್ದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. 

Callled PM Modi Sir 10 Times To Satisfy His Ego Says Chandrababu Naidu
Author
Bengaluru, First Published Jan 31, 2019, 1:44 PM IST

ನವದೆಹಲಿ : ನರೇಂದ್ರ ಮೋದಿ ಅಹಂಕಾರ ತೃಪ್ತಿಗಾಗಿ ನಾನು ಅವರನ್ನು ಸರ್ ಎಂದೇ ಸಂಬೊಧಿಸುತ್ತಿದ್ದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಹೇಳಿದ್ದಾರೆ. 

NDA ಮೈತ್ರಿಕೂಟದಿಂದ ಹೊರಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂತರವಾಗಿ ವಾಗ್ದಾಳಿ ನಡೆಸುತ್ತಿರುವ ನಾಯ್ಡು, ರಾಜಕೀಯದಲ್ಲಿ ನನಗಿಂತಲೂ ಮೋದಿ ಕಿರಿಯರಾಗಿದ್ದು, ಅವರ ಅಹಂಕಾರದ ಸಮಾಧಾನಕ್ಕಾಗಿ  ಗೌರವದಿಂದಲೇ ಕರೆಯುತ್ತಿದ್ದೆ ಎಂದು ಹೇಳಿದ್ದಾರೆ. 

ಟಿಡಿಪಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಿಕೊಡಲು ತಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ಈ ವೇಳೆ ಜನತೆಗೆ ಭರವಸೆ ನೀಡಿದರು. 

ಇನ್ನು ಅಮೆರಿಕಾ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರನ್ನು ಭೇಟಿಯಾಗಿದ್ದ ವೇಳೆಯೇ ಅವರನ್ನು ಕ್ಲಿಂಟನ್ ಎಂದೇ ಸಂಬೋಧಿಸಿದ್ದೆ. ಆದರೆ  ನರೇಂದ್ರ ಮೋದಿಗೆ ಮಾತ್ರ ಸರ್ ಎಂದು ಕರೆಯುತ್ತಿದ್ದೆ. 

ನರೇಂದ್ರ ಮೋದಿ ರಾಜಕಾರಣದಲ್ಲಿ ನನಗಿಂತಲೂ ಕಿರಿಯ ವ್ಯಕ್ತಿ, ಆದರೆ ಅವರು ಯಾವಾಗ ಅಧಿಕಾರಕ್ಕೆ ಏರಿದರೋ ಅವರನ್ನು ತಮಗಿಂತ ಮೇಲಿನ ವ್ಯಕ್ತಿ ಎನ್ನುವ ಗೌರವದಿಂದಲೇ ಕಾಣುತ್ತಿದ್ದೆ. ಈಗಲಾದರೂ ನಮ್ಮ ಬೇಡಿಕೆ ಈಡೇರಿಸಿ ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬಹುದು ಎನ್ನುವ ಭರವಸೆಯಿಂದ. ನನ್ನ ರಾಜ್ಯದ ಜನರಿಗೆ ನ್ಯಾಯ ಒದಗಿಸಿಕೊಡುವುದೇ ನನ್ನ ಮುಖ್ಯ ಉದ್ದೇಶವಾಗಿತ್ತು.

ಮೋದಿ ಸರ್ಕಾರದಲ್ಲಿ ಅಭಿವೃದ್ಧಿಯಾಯ್ತಾ ಅತ್ಯಾಕರ್ಷಕ ರಾಷ್ಟ್ರೀಯ ಹೆದ್ದಾರಿ?

ಬಿಜೆಪಿಯೊಂದಿಗೆ 2014ರ ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಮಾಡಿಕೊಂಡೆವು. ನಮ್ಮ ಪಕ್ಷ ಮೈತ್ರಿಯಿಲ್ಲದೇ ಹೆಚ್ಚು ಸ್ಥಾನ ಪಡೆದಿದ್ದರೂ ಮೈತ್ರಿ ಮಾಡಿಕೊಳ್ಳಲು ಮುಂದಾದೆವು. ಆದರೆ ನಮ್ಮ ಭರವಸೆಯನ್ನು ಸಂಪೂರ್ಣ ಸುಳ್ಳು ಮಾಡಿದರು. ನಮ್ಮ ರಾಜ್ಯಕ್ಕೆ ಸೂಕ್ತ ಸ್ಥಾನಮಾನ ಒದಗಿಸಿಕೊಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಹೊರಬಂದಿದ್ದಾಗಿ ಹೇಳಿದರು.

ನರೇಂದ್ರ ಮೋದಿ ದಕ್ಷಿಣ ಭಾರತ ದಂಡಯಾತ್ರೆ ರಹಸ್ಯ 

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ನಾಯ್ಡು ವಿಪಕ್ಷಗಳೊಂದಿಗೆ ಸೇರಿ ಸತತ ಯತ್ನದಲ್ಲಿ ತೊಡಗಿಕೊಂಡಿದ್ದಾರೆ.

Follow Us:
Download App:
  • android
  • ios