news
By Suvarna Web Desk | 04:40 AM March 20, 2017
ಇಡೀ ಸರ್ಕಾರವೇ ಪ್ರಚಾರ ಮಾಡಿದರೂ ಇವರು ಗೆಲ್ಲೋದಿಲ್ಲ

Highlights

ಐಟಿ ರೇಡ್​ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಎಷ್ಟು ಜನ ಶ್ರೀಮಂತರಿದ್ದಾರೆ ಎಂಬುದನ್ನು ಅವರೇ ಪಟ್ಟಿ ಮಾಡಿ ರೇಡ್​ ಮಾಡಿಸಲಿ

ಮೈಸೂರು(ಮಾ.20): ನಂಜನಗೂಡು ಹಾಗೂ ಗುಂಡ್ಲುಪೇಟೆ ಬೈಎಲೆಕ್ಷನ್​ನಲ್ಲಿ ಬಿಜೆಪಿಗೆ ನಿರೀಕ್ಷೆಗೆ ಮೀರಿ ಬೆಂಬಲ ಸಿಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಸರ್ಕಾರದ ಸಚಿವ ಸಂಪುಟದ ಎಷ್ಟೇ ಸದಸ್ಯರು ಚುನಾವಣೆ ಪ್ರಚಾರಕ್ಕೆ ಬಂದರೂ ನಾವು ಎದುರುವುದಿಲ್ಲ ಎಂದರು.  ನಾಳೆ ನಾಮಪತ್ರ ಸಲ್ಲಿಕೆಯಾದ ನಂತರ ಬಿಜೆಪಿಯಿಂದ ಕೂಡ ಮಾಜಿ ಮುಖ್ಯಮಂತ್ರಿ ಜಗದೀಸ್​ ಶೆಟ್ಟರ್, ಈಶ್ವರಪ್ಪ, ಸೇರಿದಂತೆ ನಾಯಕರ ದಂಡೇ ಪ್ರಚಾರದಲ್ಲಿ ತೊಡಗಲಿದೆ ಅಂದರು.  

ಇದೇ ವೇಳೆ ಐಟಿ ರೇಡ್​ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಎಷ್ಟು ಜನ ಶ್ರೀಮಂತರಿದ್ದಾರೆ ಎಂಬುದನ್ನು ಅವರೇ ಪಟ್ಟಿ ಮಾಡಿ ರೇಡ್​ ಮಾಡಿಸಲಿ ಎಂದು ಸವಾಲು ಹಾಕಿದರು. ಮುಖ್ಯಮಂತ್ರಿಗಳಿಗೆ ಜನರ ಕಷ್ಟ ಬೇಕಾಗಿಲ್ಲ. ಚುನಾವಣೆಯಲ್ಲಿ ಅಧಿಕಾರ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತಿದೆ ಎಂದು ಬಿಎಸ್​ವೈ ಹೇಳಿದ್ದಾರೆ.

Show Full Article


Recommended


bottom right ad