Asianet Suvarna News Asianet Suvarna News

ಮಂಗಳೂರು ಏರ್'ಪೋರ್ಟ್'ನಲ್ಲಿ ಹುಸಿ ಬಾಂಬ್ ವದಂತಿ: ತಪಾಸಣೆ ವೇಳೆ ಪತ್ತೆಯಾಗಿದ್ದೇನು ಗೊತ್ತಾ?

ಮಂಗಳೂರು ಏರ್​ಪೋರ್ಟ್​ನಲ್ಲಿ  ಬಾಂಬ್ ಇಡಲಾಗಿದೆ ಎಂಬ ಸುದ್ದಿ ಹರಡಿ, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

Bomb threat call to mangalore airport

ಮಂಗಳೂರು(ಸೆ.20): ಮಂಗಳೂರು ಏರ್​ಪೋರ್ಟ್​ನಲ್ಲಿ  ಬಾಂಬ್ ಇಡಲಾಗಿದೆ ಎಂಬ ಸುದ್ದಿ ಹರಡಿ, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಪ್ರಯಾಣಿಕರ ಸ್ಕ್ರೀನಿಂಗ್ ತಪಾಸಣೆ ವೇಳೆ ಬಾಂಬ್ ಸುದ್ದಿಯಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದರು. ಬಳಿಕ ಸೂಕ್ತ ತಪಾಸಣೆಯ ನಂತರ ಏರ್​ಪೋರ್ಟ್​ನಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಅಂತ ವಿಮಾನ ನಿಲ್ದಾಣದ ತಪಾಸಣಾ ಅಧಿಕಾರಿಗಳು  ಸ್ಪಷ್ಟನೆ ಕೊಟ್ಟರು. ಇನ್ನು ಅಧಿಕಾರಿಗಳು ಪ್ರಯಾಣಿಕರ ಬ್ಯಾಗ್, ಸ್ಕ್ರೀನಿಂಗ್ ತಪಾಸಣೆ ವೇಳೆ ಸ್ಫೋಟಕ ವಸ್ತುಗಳಿಗೆ ಬರುವ ಮಾದರಿಯಲ್ಲಿ ಭೀಪ್ ಸೌಂಡ್ ಕೇಳಿ ಬಂದಿದೆ.

ಹೆಚ್ಚಿನ ತಪಾಸಣೆ ಮಾಡಿದಾಗ ಬ್ಯಾಗ್​ನಲ್ಲಿ ಮೊಬೈಲ್ ಚಾರ್ಜ್ ಮಾಡಲು ಬಳಸುವ ಪವರ್ ಬ್ಯಾಂಕ್ ಪತ್ತೆಯಾಗಿದೆ. ತಪಾಸಣಾ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಪವರ್ ಬ್ಯಾಂಕ್ ವಶಪಡಿಸಿಕೊಂಡಿದ್ದಾರೆ.

 

 

Follow Us:
Download App:
  • android
  • ios