Asianet Suvarna News Asianet Suvarna News

ಆಟ ಶುರು ಮಾಡಿದರೆ ಸಾವು ಗ್ಯಾರೆಂಟಿ! ಕರುನಾಡ ಪೋಷಕರೇ ಎಚ್ಚರ ಸಾಯೋ ಗೇಮ್ ಬಂದಿದೆ !

ಆ ಗೇಮ್​ ಆಡಿದಂತೆ ಆತನ ಚಟುವಟಿಕೆಗೆ ತಕ್ಕಂತೆ ಆತನಿಗೆ ಪೋತ್ಸಾಹ ನೀಡುತ್ತಾ, ಗೇಮ್​​ ಆಡಿದಂತೆ ಅದಕ್ಕೆ ಅಂಕದ ಮಾದರಿಯಲ್ಲಿ ಮಕ್ಕಳಿಗೆ ಪೋತ್ಸಾಹ ನೀಡುತ್ತಾ ಗೇಮ್​​ ಆಡುವ ಅಭಿರುಚಿ ಹೆಚ್ಚಿಸುತ್ತಾ ಹೋಗಿ ಗುಂಪಿನ ಅಡ್ಮಿನ್​​ ಆಟಕ್ಕೆ ಒಪ್ಪಿದ ಸದಸ್ಯರ ಮೇಲೆ ಮಾನಸಿಕ ಹಿಡಿತ ಸಾಧಿಸುತ್ತಾರೆ.

Blue Whale Challenge What is it what it is not

ಮನುಷ್ಯ ಆಟ ಆಡೋದು ಮನರಂಜನೆಗಾಗಿ..ಖುಷಿಗಾಗಿ..ಕೆಲಸದ ಒತ್ತಡ ನಿವಾರಣೆಗಾಗಿ. ಉಲ್ಲಾಸ ಹೆಚ್ಚಿಸಿಕೊಳ್ಳುವುದಕ್ಕಾಗಿ. ಆದರೆ ಈಗ ವಿಶ್ವದ ತುಂಬ ಹೊಸದೊಂದು ಆಟ ಶುರುವಾಗಿದೆ. ಆ ಆಟ ಮಕ್ಕಳು ಆಡಿದರೆ ಸಾವು ಶತಸಿದ್ಧ. ಈ ಗೇಮ್​'ಗೆ ಪ್ರವೇಶ ಮಾಡಿದರೆ ಮುಗಿಯಿತು ಆಟದಿಂದ ಹೊರ ಬರಲು ಸಾಧ್ಯವಾಗದ ಆಟಗಳು ಅಲ್ಲಿರುತ್ತವೆ. ಆಂಥ ಭಯಾನಕ ಆಟವೇ ಬ್ಲೂವೇಲ್.

ಏನಿದು ಬ್ಲೂವೇಲ್ ಗೇಮ್‌?

ರಷ್ಯಾದಲ್ಲಿ ಹುಟ್ಟಿಕೊಂಡಿರುವ ಬ್ಲೂ ವೇಲ್‌ ಸೂಸೈಡ್‌ ಚಾಲೆಂಗ್‌ ಗೇಮ್‌ ಆನ್‌ಲೈನ್‌ ಆಟವಾಗಿದೆ. ಈ ಆಟದಲ್ಲಿ ಆಟಗಾರನಿಗೆ 50 ಟಾಸ್ಕ್‌ ಗಳು ನೀಡಲಾಗುತ್ತದೆ. ನಂತರ 50ನೇ ಟಾಸ್ಕ್‌ಗೆ ಬಂದಾಗ ಮಹಡಿಯಿಂದ ಜಿಗಿಯುವಂತೆ ಆಟದಲ್ಲಿ ಸೂಚನೆ ನೀಡಲಾಗುತ್ತದೆ. ಅಲ್ಲದೆ ಸಾಯುವುದಕ್ಕೂ ಮುನ್ನ ತಾವು ಆಟವನ್ನು ಕೊನೆಗೊಳಿಸಿದ್ದೇವೆ ಎನ್ನಲು ತಮ್ಮ ಫೋಟೊವನ್ನು ತೆಗೆದು ಸಾಕ್ಷಿ ನೀಡುವಂತೆ ಕೇಳುತ್ತದೆ. ಅಲ್ಲದೆ ಈ ಆಟದಲ್ಲಿ ಹಾರರ್‌ ಸಿನಿಮಾಗಳನ್ನು ನೋಡುವ ಟಾಸ್ಕ್‌, ಆಟದಲ್ಲಿ ಸೂಚಿಸುವಂತೆ ಗಂಟೆ ಗಟ್ಟಲೆ ನಡೆಯುತ್ತಲೇ ಇರುವುದು. ತಮಗೆ ತಾವೇ ಹಾನಿ ಮಾಡಿಕೊಳ್ಳುವುದು, ಈ ರೀತಿಯ ಸೂಚನೆಗಳನ್ನು ನೀಡುತ್ತದೆ. ಏನೂ ಅರಿವಿಲ್ಲದ ಮಕ್ಕಳು ಹಾಗೂ ಯುವಕ-ಯುವತಿಯರು ಆಟದ ಚಟಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

‘ಬ್ಯೂ ವೇಲ್’ ಹೆಸರಿನ ನಿಗೂಢ ಗ್ಯಾಂಗ್!!

ರಷ್ಯಾದಲ್ಲಿ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಲ್ಲಿದ್ದು, ಇದರಲ್ಲಿ ‘ಬ್ಯೂ ವೇಲ್’ ಹೆಸರಿನ ನಿಗೂಢ ಗುಂಪೊಂದು ಕಾರ್ಯನಿರ್ವಹಿಸುತ್ತಿದೆ. ತನ್ನನ್ನು ತಾನು ‘ಆನ್‌ಲೈನ್ ಗೇಮ್’ ಎಂದು ಕರೆದುಕೊಂಡಿರುವ ‘ಬ್ಲೂ ವೇಲ್’ಗೆ 12 ರಿಂದ 29ರ ನಡುವಿನ ಯುವಕ -ಯುವತಿಯರು ಸದಸ್ಯರಾಗುತ್ತಾರೆ. ನಂತರ ಅವರಿಗೆ 50 ದಿನಗಳ ಆಟಕ್ಕೆ ಅಹ್ವಾನ ನೀಡಲಾಗುತ್ತದೆ. ಈ ಆಟದ ಪ್ರಕಾರ ಅಡ್ಮಿನ್​​ ಭಾಗವಹಿಸುವ ಅಭ್ಯರ್ಥಿಗೆ 50 ದಿನ 50 ಸವಾಲುಗಳನ್ನು ನೀಡುತ್ತಾರೆ. ಅಭ್ಯರ್ಥಿಯು ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಜಯಗಳಿಸಬೇಕು. ಒಮ್ಮೆ ಆಟಕ್ಕೆ ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗುತ್ತದೆ.

ಹೇಗಿರುತ್ತದೆ ಟಾಸ್ಕ್‌ಗಳು?

ಬ್ಲೂವೇಲ್ ಗೇಮ್ ಆಟಗಾರನಿಗೆ ಹಾರರ್ ಸಿನಿಮಾ ನೋಡುವುದು, ರಾತ್ರಿ ವೇಳೆಯಲ್ಲಿ ಎದ್ದು ವಾಕ್ ಮಾಡುವುದು ಹಾಗೂ ತನಗೆ ತಾನೇ ನೋವುಂಟು ಮಾಡಿಕೊಳ್ಳುವುದು ಸೇರಿ ಹಲವು ವಿಕೃತ ಗೇಮ್‌ಗಳಿರುತ್ತವೆ. ಬೆಳಗ್ಗೆ 4.20ನಿಮಿಷದಿಂದಲ್ಲೇ ಗೇಮ್​ನ ಟಾಸ್ಕ್​​ಗಳು ಆರಂಭವಾಗುತ್ತವೆ. ಆ ಗೇಮ್​ ಆಡಿದಂತೆ ಆತನ ಚಟುವಟಿಕೆಗೆ ತಕ್ಕಂತೆ ಆತನಿಗೆ ಪೋತ್ಸಾಹ ನೀಡುತ್ತಾ, ಗೇಮ್​​ ಆಡಿದಂತೆ ಅದಕ್ಕೆ ಅಂಕದ ಮಾದರಿಯಲ್ಲಿ ಮಕ್ಕಳಿಗೆ ಪೋತ್ಸಾಹ ನೀಡುತ್ತಾ ಗೇಮ್​​ ಆಡುವ ಅಭಿರುಚಿ ಹೆಚ್ಚಿಸುತ್ತಾ ಹೋಗಿ ಗುಂಪಿನ ಅಡ್ಮಿನ್​​ ಆಟಕ್ಕೆ ಒಪ್ಪಿದ ಸದಸ್ಯರ ಮೇಲೆ ಮಾನಸಿಕ ಹಿಡಿತ ಸಾಧಿಸುತ್ತಾರೆ.

ಭಾರತಕ್ಕೂ ಬಂದಿದೆ ಪ್ರಾಣ ತೆಗೆಯುವ ಗೇಮ್​​!

ಮೊದಲಿಗೆ ರಷ್ಯಾದಲ್ಲಿ ಪ್ರಾರಂಭವಾದ ಈ ಅಟ ಇತ್ತೀಚಿಗಷ್ಟೆ ಮೆಲ್ಲನೆ ಭಾರತವನ್ನೂ ಪ್ರವೇಶಿಸಿದೆ. ಒಂದು ಸಾಮಾಜಿಕ ಜಾಲತಾಣ ಇದನ್ನು ನಿರ್ವಹಿಸುತ್ತಿದೆ. ಈ ಆಟದಲ್ಲಿ ಪಾಲ್ಗೊಳ್ಳ ಬೇಕಾದವರು ಅಡ್ಮಿನ್​​ ಹೇಳಿದಂತೆ ಮಾಡಬೇಕು. 50 ದಿನಗಳ ಕಾಲ ಅವರು ನೀಡುವ ಟಾಸ್ಕ್ ಗಳನ್ನು ಮಾಡುತ್ತಿರಬೇಕು. ಮೊದಲು ಒಂದು ಪೇಪರಲ್ಲಿ ತಿಮಿಂಗಲ ಚಿತ್ರವನ್ನು ರಚಿಸಬೇಕು. ನಂತರ ಶರೀರದ ಮೇಲೆ ಬರೆಸಿಕೊಳ್ಳಬೇಕು. ನಂತರ ಹಾರರ್ ಸಿನಿಮಾಗಳನ್ನು ನೋಡುತ್ತಾ, ಮಧ್ಯರಾತ್ರಿ ಎದ್ದೇಳುವುದು ನಡೆಯುವುದು ಮೊದಲಾದ ಟಾಸ್ಕ್ ಗಳನ್ನು ಪೂರೈಸಬೇಕು.ಈ ರೀತಿ 50 ಟಾಸ್ಕ್ ಗಳನ್ನು 50 ದಿನಗಳಲ್ಲಿ ಪೂರ್ಣಗೊಳಿಸಿದ ನಂತರ ಆತ್ಮಹತ್ಯೆ ಮಾಡಿಕೊಳ್ಳಬೇಕು. ಇದನ್ನೇ ಸೆಲ್ಫ್ ಡೆಸ್ಟ್ರಾಯಿಂಗ್ ಎನ್ನುತ್ತಾರೆ. ಆಟದಲ್ಲಿ ಗೆಲ್ಲಬೇಕಾದರೆ, ತಪ್ಪದೇ ಆತ್ಮಹತ್ಯೆ ಮಡಿಕೊಳ್ಳಲೇಬೇಕು ಎಂದು ಅಡ್ಮಿನ್​​  ಆಟಗಾರರ ಮೇಲೆ ಒತ್ತಡ ಹೇರುತ್ತಾರೆ. ಹೀಗಾಗಿ… ಆಟವನ್ನು ಗೆಲ್ಲಲೇ ಬೇಕೆಂಬ ಹಠದಿಂದ ಮಕ್ಕಳು ಎತ್ತರ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಳ್ಳುತ್ತಾರೆ.

ಮಕ್ಕಳನ್ನು ಬ್ಲೂವೇಲ್ ಗೇಮ್​ನಿಂದ ಹೊರ ತರುವುದು ಹೇಗೆ?

1) ಮಕ್ಕಳು ಬಳಸುವ ಮೊಬೈಲ್​-ಕಂಪ್ಯೂಟರ್​​ಗೆ ಇರುವ ನೆಟ್​​ ತೆಗೆಯಬೇಕು

2) ಪೋಷಕರು 12 ರಿಂದ 29ರ ವಯಸ್ಸಿನ ಮಕ್ಕಳ ಮೇಲೆ ನಿಗಾ ವಹಿಸಬೇಕು

3) ಮಕ್ಕಳ ನಿತ್ಯದ ಚಟುವಟಿಕೆಗಳ ಬಗ್ಗೆ ವಿಚಾರಣೆ ಮಾಡಬೇಕು

4) ಮಕ್ಕಳೊಂದಿಗೆ ಸ್ನೇಹದಿಂದ ವರ್ತಿಸಿ, ಅವರನ್ನು ಆಟದಿಂದ ದೂರ ಮಾಡಬೇಕು

5) ಶಾಲಾ-ಕಾಲೇಜಿನಲ್ಲಿ ಮಕ್ಕಳು ಏನು ಮಾಡುತ್ತಾರೆ ಎಂಬುವುದರ ಬಗ್ಗೆ ಗಮನಹರಿಸಬೇಕು

6) ಮಕ್ಕಳು ಹಾಸ್ಟೆಲ್​ ಮತ್ತು ಬೇರೆ ಕಡೆ ಇದ್ದರೆ,  ಪೋಷಕರು ನಿತ್ಯ ಸಂಪರ್ಕದಲ್ಲಿ ಇರಬೇಕು

ಒಟ್ಟಿನಲ್ಲಿ ಭಯಾನಕ ಬ್ಲೂವೇಲ್ ಗೇಮ್​ ಭಾರತದಲ್ಲಿ ಪ್ರವೇಶ ಮಾಡಿದೆ. ಈಗಾಗಲೇ ಭಾರತದಲ್ಲಿ ನೂರಾರು ಮಕ್ಕಳು ಈ ಬ್ಲೂವೇಲ್ ಗೇಮ್​ ಆಟವಾಡುತ್ತಿದ್ದಾರೆ.ಅದರಲ್ಲೂ ಬೆಂಗಳೂರಿನಲ್ಲಿಯೇ ಹೆಚ್ಚಿದ್ದಾರೆ ಎಂಬ ಮಾಹಿತಿಯಿದೆ.ಯಾವುದಕ್ಕೂ ಪೋಷಕರು 12 ರಿಂದ 29ರ ನಡುವಿನ ವಯಸ್ಸಿನ ಮಕ್ಕಳ ಚಟುವಟಿಕೆ ಮೇಲೆ ನಿಗಾವಹಿಸಿ, ಮಕ್ಕಳನ್ನು ಸಾಯಿಸಲು ಮುಂದಾಗಿರುವ ಈ ಮಹಾಮಾರಿ ಆಟದಿಂದ ದೂರವಿರುವಂತೆ ನೋಡಿಕೊಳ್ಳಿ.

-ಜೆ. ಎಸ್​. ಪೂಜಾರ್​, ನ್ಯೂಸ್​ ಡ್ಕೆಸ್​, ಸುವರ್ಣನ್ಯೂಸ್​

 

Follow Us:
Download App:
  • android
  • ios