Asianet Suvarna News Asianet Suvarna News

ಅವರಪ್ಪ​ನಾಣೆ ಮೋದಿ ಪಿಎಂ ಆಗಲ್ಲ: ಸಿದ್ದರಾಮಯ್ಯ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಪಕ್ಷಗಳಲ್ಲಿ ಗೆಲ್ಲುವ ಕಸರತ್ತು ಜೋರಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

BJP Will Not Get majority in Lok Sabha Election 2019 Says Congress Leader Siddaramaiah
Author
Bengaluru, First Published Feb 20, 2019, 12:05 PM IST

ಬೆಂಗ​ಳೂರು :  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ​ರ​ಪ್ಪ​ನಾಣೆಗೂ ಮತ್ತೆ ಪ್ರಧಾನಿಯಾಗು​ವು​ದಿಲ್ಲ. ತಿಪ್ಪ​ರ​ಲಾಗ ಹೊಡೆ​ದರೂ ಈ ಬಾರಿ ಬಿಜೆಪಿ ಅಧಿ​ಕಾ​ರಕ್ಕೆ ಬರು​ವು​ದಿಲ್ಲ ಎಂದು ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹೇಳಿ​ದ್ದಾ​ರೆ.

ನಗ​ರ​ದಲ್ಲಿ ಮಂಗ​ಳ​ವಾರ ನಡೆದ ಯುವ ಕಾಂಗ್ರೆ​ಸ್‌ನ ಸರ್ವ ಸದ​ಸ್ಯರ ಸಮಾ​ವೇಶ ಉದ್ಘಾ​ಟಿಸಿ ಮಾತ​ನಾ​ಡಿದ ಅವರು, ಬಿಜೆಪಿ ಪ್ರಜಾ​ಪ್ರ​ಭು​ತ್ವ​ವನ್ನೇ ನಾಶ ಮಾಡಲು ಹೊರಟ ಪಕ್ಷ​ವಾ​ಗಿದೆ. ಇದು ದೇಶದ ಜನ​ತೆಗೆ ಅರ್ಥ​ವಾ​ಗಿದೆ. ಹೀಗಾಗಿ ಬಿಜೆ​ಪಿಗೆ ಮತ್ತೆ ಅಧಿ​ಕಾ​ರ​ವನ್ನು ದೇಶದ ಜನತೆ ನೀಡು​ವು​ದಿಲ್ಲ. ತಿಪ್ಪ​ರ​ಲಾಗ ಹಾಕಿ​ದರೂ, ಅವ​ರ​ಪ್ಪ​ನಾ​ಣೆಗೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗು​ವು​ದಿಲ್ಲ ಎಂದು ಹೇಳಿ​ದ​ರು.

ಈ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಯುವ​ಕರ ಪಾತ್ರ ಬಹಳ ಪ್ರಮು​ಖ​ವಾ​ದದ್ದು. ಬಿಜೆಪಿ ಸದಾ ಯುವ ಮತ​ದಾ​ರ​ರನ್ನು ಹಾದಿ ತಪ್ಪಿಸುವ ಕೆಲಸ ಮಾಡು​ತ್ತದೆ. ಹೀಗಾಗಿ, ಬಿಜೆ​ಪಿ ಹಾಗೂ ನರೇಂದ್ರ ಮೋದಿ ಹೇಗೆ ಈ ದೇಶಕ್ಕೆ ಮಾರ​ಕ​ವಾ​ಗಿ​ದ್ದಾರೆ ಎಂಬು​ದನ್ನು ಯುವ​ಕ​ರಿಗೆ ಮನ​ದಟ್ಟು ಮಾಡಿ​ಕೊ​ಡುವ ಕೆಲ​ಸ​ವನ್ನು ಯುವ ಕಾಂಗ್ರೆಸ್‌ ಮಾಡ​ಬೇಕು. ತನ್ಮೂ​ಲಕ ಯುವ​ಕರ ಮುಗ್ಧತೆಯನ್ನು ಬಳ​ಸಿ​ಕೊಂಡು ಮತ ಲೂಟಿ ಮಾಡುವ ಬಿಜೆ​ಪಿಯ ಷಡ್ಯಂತ್ರ ಈ ಬಾರಿಯ ಚುನಾ​ವ​ಣೆ​ಯಲ್ಲಿ ಯಶ​ಸ್ವಿ​ಯಾ​ಗ​ದಂತೆ ತಡೆ​ಯ​ಬೇಕು ಎಂದರು.

ಅನಂತ​ಕು​ಮಾರ್‌ ಹೆಗಡೆ ಜೈಲಿಗೆ ಹಾಕು​ತ್ತಿ​ದ್ದೆ:  ಬಿಜೆಪಿ ಹಾಗೂ ಆ ಪಕ್ಷದ ನಾಯ​ಕ​ರಿಗೆ ಪ್ರಜಾ​ಪ್ರ​ಭುತ್ವ ಹಾಗೂ ಸಂವಿ​ಧಾ​ನದ ಬಗ್ಗೆ ಗೌರ​ವ​ವಿಲ್ಲ. ಸಂವಿ​ಧಾ​ನ​ವನ್ನೇ ಬದ​ಲಿ​ಸು​ವು​ದಾಗಿ ಕೇಂದ್ರ ಸಚಿವ ಅನಂತ​ಕು​ಮಾರ ಹೆಗಡೆ ಹೇಳಿಕೆ ನೀಡು​ತ್ತಾರೆ. ನಾನೇ​ನಾ​ದರೂ ಪ್ರಧಾ​ನಿ​ಯಾ​ಗಿ​ದ್ದರೆ ಇಂತಹ ಹೇಳಿಕೆ ನೀಡಿದ ಅನಂತ​ಕು​ಮಾರ ಹೆಗ​ಡೆ​ಯನ್ನು ಜೈಲಿಗೆ ತಳ್ಳು​ತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿ​ದ​ರು.

ಲೋಕ​ಸಭೆ ಚುನಾ​ವಣೆಗೆ ಯುವ ಕಾಂಗ್ರೆಸ್‌ ಸರ್ವ ಸಿದ್ಧತೆ ನಡೆ​ಸ​ಬೇಕು. ಸದ​ಸ್ಯತ್ವ ನೋಂದಣಿ ಹೆಚ್ಚಿ​ಸ​ಬೇಕು. ಕಾರ್ಯ​ಕ​ರ್ತರ ಸಂಘ​ಟ​ನೆ​ಯನ್ನು ಉತ್ತಮಪಡಿ​ಸ​ಬೇಕು ಎಂದು ಅವರು ಈ ಸಂದ​ರ್ಭ​ದಲ್ಲಿ ಕರೆ ನೀಡಿ​ದ​ರು. ಸಮಾ​ವೇ​ಶ​ದಲ್ಲಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಉಪಾ​ಧ್ಯಕ್ಷ ಶ್ರೀನಿ​ವಾಸ್‌, ಯುವ ಕಾಂಗ್ರೆಸ್‌ ರಾಜ್ಯಾ​ಧ್ಯಕ್ಷ ಬಸ​ನ​ಗೌಡ ಬಾದರ್ಲಿ, ಎಐ​ಸಿಸಿ ಕಾರ್ಯ​ದರ್ಶಿ ಕೇಶವ್‌ ಚಂದ್‌, ನಾಯ​ಕ​ರಾದ ಸಂದೀಪ್‌ ವಾಲ್ಮೀಕಿ, ಕೃಷ್ಣ ಆಳ್ವಾರ್‌ ಮೊದ​ಲಾ​ದ​ವರು ಪಾಲ್ಗೊಂಡಿ​ದ್ದರು.

Follow Us:
Download App:
  • android
  • ios