news
By Suvarna Web Desk | 12:49 PM June 18, 2017
ಗೋಹತ್ಯೆ ಅಧಿಸೂಚನೆಗೆ ಗೋವಾ ಬಿಜೆಪಿ ಸರ್ಕಾರದಿಂದಲೇ ಅಪಸ್ವರ

Highlights

ಪ್ರಾಣಿಗಳ ಮಾರುಕಟ್ಟೆಯಲ್ಲಿ ವಧೆಗಾಗಿ ಗೋವುಗಳ ಮಾರಾಟ ಮತ್ತು ಖರೀದಿ ಮೇಲೆ ನಿಷೇಧ ಹೇರುವ ಕೇಂದ್ರದ ನೂತನ ಅಧಿಸೂಚನೆಗೆ ಗೋವಾ ಬಿಜೆಪಿ ಸರ್ಕಾರದಿಂದಲೇ ವಿರೋಧ ವ್ಯಕ್ತವಾಗಿದೆ.

ಪಣಜಿ: ಪ್ರಾಣಿಗಳ ಮಾರುಕಟ್ಟೆಯಲ್ಲಿ ವಧೆಗಾಗಿ ಗೋವುಗಳ ಮಾರಾಟ ಮತ್ತು ಖರೀದಿ ಮೇಲೆ ನಿಷೇಧ ಹೇರುವ ಕೇಂದ್ರದ ನೂತನ ಅಧಿಸೂಚನೆಗೆ ಗೋವಾ ಬಿಜೆಪಿ ಸರ್ಕಾರದಿಂದಲೇ ವಿರೋಧ ವ್ಯಕ್ತವಾಗಿದೆ.

ಕೇಂದ್ರದ ಅಧಿಸೂಚನೆ ಸಾರ್ವಜನಿಕರಲ್ಲಿ ಕಳವಳ ಉಂಟು ಮಾಡುತ್ತಿದ್ದು, ಅದರಲ್ಲಿನ ಕೆಲ ಅಂಶಗಳ ಬದಲಾವಣೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಅದು ಒತ್ತಾಯಿಸಿದೆ. ಈ ಬಗ್ಗೆ ಶನಿವಾರ ಮಾತನಾಡಿದ ಗೋವಾ ಕೃಷಿ ಸಚಿವ ವಿಜಯ್‌ ಸರದೇಸಾಯಿ, ‘ಈ ಬಗ್ಗೆ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಜತೆ ಸಮಾಲೋಚನೆ ನಡೆಸಿದ್ದು, ಅವರು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ' ಎಂದಿದ್ದಾರೆ.

ಎಲ್ಲ ಜನತೆಯನ್ನು ಸಸ್ಯಾಹಾರಿಗಳನ್ನಾಗಿ ಮಾಡಬೇಕು ಎಂಬ ಉದ್ದೇಶವನ್ನು ಕೇಂದ್ರದ ಅಧಿಸೂಚನೆ ಹೊಂದಿದೆ ಎಂಬ ಭೀತಿಯನ್ನುಂಟು ಮಾಡಿದೆ. ಪ್ರಾಣಿಗಳ ಹಿಂಸೆ ತಡೆ ಕಾಯ್ದೆಯ ಅಧಿಸೂಚನೆಯಲ್ಲಿನ ಕೆಲ ಅಂಶಗಳ ವಿರುದ್ಧ ರಾಜ್ಯ ಸರ್ಕಾರ ಧ್ವನಿ ಎತ್ತಲಿದೆ. ಅಲ್ಲದೆ, ಕೆಲವು ಸಲಹೆಗಳನ್ನು ನೀಡಲಾಗುತ್ತದೆ. ರಾಜ್ಯದಲ್ಲಿ ಕೆಲವರು ದನದ ಮಾಂಸ ಸೇವನೆ ಮಾಡುವವರಿದ್ದಾರೆ. ಅವರ ಅನುಮಾನಗಳನ್ನು ನಿವಾರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಸರದೇಸಾಯಿ ಹೇಳಿದರು. ಗೋವಾ ಗೋಮಾಂಸ ಭಕ್ಷಣೆಯ ದೊಡ್ಡ ರಾಜ್ಯಗಳಲ್ಲಿ ಒಂದು.

Show Full Article


Recommended


bottom right ad