Asianet Suvarna News Asianet Suvarna News

ಏನಪ್ಪಾ ರಾಜಕಾರಣ, ಡಿಕೆಶಿ ಪರ ಈಶ್ವರಪ್ಪ ಬ್ಯಾಟಿಂಗ್!

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತು ಹಿಂದಿನ ಸರ್ಕಾರ ನಡೆದುಕೊಂಡಿದ್ದ ರೀತಿಯ ಬಗ್ಗೆ ಅಂದಿನ ಸರಕಾರದ ಭಾಗವಾಗೇ ಇದ್ದ ಡಿಕೆ ಶಿವಕುಮಾರ್ ನೀಡಿದ ಹೇಳೀಕೆಯನ್ನು ಬಿಜೆಪಿ ನಾಯಕರು ಸ್ವಾಗತ ಮಾಡಿದ್ದಾರೆ.

BJP Leader KS Eshwarappa Welcomes DK Shivakumar Statement on Lingayat Issue
Author
Bengaluru, First Published Oct 18, 2018, 7:14 PM IST

ಶಿವಮೊಗ್ಗ[ಅ.18]  ಲಿಂಗಾಯತ ಜಾತಿ ಒಡೆಯುವುದು, ಮುಸ್ಲಿಂ ಸಮುದಾಯದ ಒಲೈಕೆ ಮಾಡುವ ಕೆಲಸ ಕಾಂಗ್ರೆಸ್ ನಾಯಕರು ಈಗಲಾದರೂ ಅದು ತಪ್ಪು ಎಂದರಲ್ಲ. ಮತ್ತೆ ಈ ತಪ್ಪು ಮಾಡದೀರಲಿ. ಜಾತಿ ಒಡೆದು ತಪ್ಪು ಮಾಡಿದ್ದಾಗಿ ಪ್ರಾಯಶ್ಚಿತ್ತ ಪಟ್ಟ ಸಚಿವ ಡಿಕೆ ಶಿವಕುಮಾರ್ ಹೇಳಿಕೆಯನ್ನು ಸ್ವಾಗತಿಸುವುದಾಗಿ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಯಾರೇ ವಿರೋಧ ವ್ಯಕ್ತಪಡಿಸಿದರೂ ಟಿಪ್ಪು ಜಯಂತಿ ಮಾಡುವ ಡಿಸಿಎಂ ಪರಮೇಶ್ವರ ಹೇಳಿಕೆಗೆ ತಿರುಗೇಟು ನೀಡಿ ಯಾವುದೇ ಮುಸ್ಲಿಂಮರು ಟಿಪ್ಪು ಜಯಂತಿ ಬೇಕು ಎಂದಿರಲಿಲ್ಲ. ಮತ್ತೆ ಟಿಪ್ಪು ಜಯಂತಿ ಆಚರಿಸಿದರೆ ಕೊಲೆ ಸುಲಿಗೆ ದರೋಡೆ ಗೆ ಅವಕಾಶ ನೀಡುತ್ತದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡ ಬಾರದು ಎಂದರು.

ಮೈತ್ರಿ VS ಬಿಜೆಪಿ ; 5 ಕ್ಷೇತ್ರದ ಅಖಾಡದಲ್ಲಿ ಯಾರೆಲ್ಲ ಇದ್ದಾರೆ?

ಸಿಎಂ ಕುಮಾರಸ್ವಾಮಿ ಸೇರಿದಂತೆ ಮಂತ್ರಿಗಳು ವಿಧಾನ ಸೌಧದಲ್ಲಿ ಸಿಗೋಲ್ಲ. ರಾಜ್ಯದ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ವಿಧಾನ ಸೌಧದಲ್ಲಿ ಸಿಎಂ ಸೇರಿದಂತೆ ಮಂತ್ರಿಗಳು ವಾರದಲ್ಲಿ ಒಂದು ದಿನವಾದರೂ ಇರಿ. ಇದು ಕೆಟ್ಟ, ಬೇಜವಾಬ್ದಾರಿ ಸರ್ಕಾರ . ಸಿಎಂ ಕುಮಾರಸ್ವಾಮಿ ವರಿಗೆ ಒಂದೇ ಒಂದು ಪ್ರಶ್ನೆ ರಾಜ್ಯದಲ್ಲಿ ಆಶ್ರಯ ಸಮಿತಿ ಮಾಡಿಲ್ಲ, ಬಡವರಿಗೆ  ಮನೆ ಕಟ್ಟಿ ಕೊಡಲು ಆಗಿಲ್ಲ . ಹಿಂದೂತ್ವ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಹೇಳಿದ ಮೇಲೆ ಸಿಎಂ ಕುಮಾರಸ್ವಾಮಿ ನಾವು ಹಿಂದೂತ್ವದವರೇ ಹೇಳಿಕೆ ನೀಡಿದ್ದ ಸ್ವಾಗತ ಮಾಡುತ್ತೇನೆ. ಕಾಂಗ್ರೆಸ್ ಜೆಡಿಎಸ್ ನಾಯಕರು ಒಬ್ಬರಿಗೊಬ್ಬರು ಮುಖ ನೋಡದ ಪರಿಸ್ಥಿತಿ ಬಂದೊದಗಿದೆ. ಬಿಜೆಪಿ ಯಾವುದೇ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಬೀಳಿಸುವ ಯತ್ನ ಮಾಡಲ್ಲ ಎಂದಿದ್ದಾರೆ.

ಅವರಾಗಿಯೇ ಬಿದ್ದರೆ ನಾವೇನು ಮಾಡೋಕೆ ಆಗೋಲ್ಲ.  ಬಿಜೆಪಿ ವಿರೋಧ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡಿಕೊಂಡು ಹೋಗ್ತಾ ಇದ್ದೇವೆ. ಒಳ್ಳೆ ಸರ್ಕಾರ ಕೊಡ್ರಿ ನಾನೇನೂ ಬೀಳಿಸೋಲ್ಲ. ಸಿಎಂ ಮತ್ತವರ ಮಂತ್ರಿಗಳು ಜನರ ಕೈಗೆ ಸಿಗೋಲ್ಲ ಅಂದರೆ ಹೇಗೆ? ರಾಜ್ಯದ ಜನತೆ ಬಿಜೆಪಿಯ 104 ಶಾಸಕರನ್ನು ಗೆಲ್ಲಿಸಿದ್ದು ಜನರ ಕೆಲಸ ಮಾಡಬೇಕಿದೆ ಎಂದರು.

Mee too ಅಭಿಯಾನದಲ್ಲಿ ಕೇಂದ್ರ ಸರ್ಕಾರದ ಮಂತ್ರಿ ಅಕ್ಬರ್  ರಾಜಿನಾಮೆ ನೀಡಿದ್ದು ತನಿಖೆ ಮುಗಿದ ನಂತರ ತಪ್ಪಿತಸ್ಥ ರಲ್ಲ ಎಂದರೇ ಮತ್ತೆ ಕೇಂದ್ರ ಮಂತ್ರಿ ಆಗುತ್ತಾರೆ. ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಬಿಜೆಪಿಯಲ್ಲಿದಾಗ ಒಂದು ಹೊರಗೆ ಹೋದಾಗ ಮತ್ತೊಂದು ಹೇಳೋದು ಸರಿಯಲ್ಲ ಎಂದರು.

ಶಿವಮೊಗ್ಗ ದಸರಾ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. 170 ದೇವಾಲಯದ ದೇವತೆಗಳು ದಸರಾ ಮೆರವಣಿಗೆ ಯಲ್ಲಿ ಭಾಗವಹಿಸಲಿವೆ. ರಾಜ್ಯ ಸರ್ಕಾರ ಪಾಲಿಕೆ ಫಲಿತಾಂಶ ಬಂದು ತಿಂಗಳಾದರೂ ಮೇಯರ್ ಉಪ ಮೇಯರ್ ಚುನಾವಣೆ ನಡೆಸಿಲ್ಲ.ಮೇಯರ್ ಉಪ ಮೇಯರ್, ನಗರಸಭೆ, ಪುರಸಭೆ ಸ್ಥಾನ ಗಳಿಗೆ ಮೀಸಲಾತಿ  ಬದಲಾವಣೆ ಮಾಡುವ ಹುನ್ನಾರ ರಾಜ್ಯ ಸರ್ಕಾರದಿಂದ ನಡೆದಿದೆ ಎಂದು ಆರೋಪಿಸಿದರು.

Follow Us:
Download App:
  • android
  • ios