Asianet Suvarna News Asianet Suvarna News

ಗುಜರಾತ್‌ನಲ್ಲಿ ಶೇ.75ಕ್ಕಿಂತ ಜಾಸ್ತಿ ಮತದಾನವಾದರೆ ಬಿಜೆಪಿ ಸರ್ಕಾರ ಮರಳಿ ಬರಲು ತಿಣಕಾಡುವುದು ನಿಶ್ಚಿತವಂತೆ!

2012ರಲ್ಲಿ ಮೋದಿ ಗುಜರಾತ್‌ನಲ್ಲಿ ಸತತ ಮೂರನೇ ಬಾರಿ ಗೆದ್ದಾಗ ಒಟ್ಟು 71.5 ಪ್ರತಿಶತ ಸರಾಸರಿ ವೋಟಿಂಗ್ ಆಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಒಟ್ಟಾರೆ 62 ಪ್ರತಿಶತಕ್ಕಿಂತ ಕಡಿಮೆ ಮತದಾನ ಅಥವಾ 75 ಪ್ರತಿಶತಕ್ಕಿಂತ ಜಾಸ್ತಿ ಮತದಾನವಾದರೆ ಬಿಜೆಪಿ ಸರ್ಕಾರ ಮರಳಿ ರಚಿಸಲು ತಿಣಕಾಡುವುದು ನಿಶ್ಚಿತವಂತೆ.

BJP in Trouble If Polling is More Than 75pc in Gujarat

ಆದರೆ ಹೀಗೆ ಮಾಡಲು ಕಾಂಗ್ರೆಸ್ ಬಳಿ ಕೂಡ ನಾಯಕತ್ವವೂ ಇಲ್ಲ ಮತ್ತು ಸಂಘಟನೆ ಕೂಡಾ ಇಲ್ಲ. ಹೀಗಾಗಿ ಕಾಂಗ್ರೆಸ್ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕುರ್ ಎಂಬ ಜಾತಿ ಸಂಘಟನೆ ಕಟ್ಟಿದ ಯುವಕರನ್ನು ನಂಬಿಕೊಂಡು ಕೆಲಸ ಮಾಡುತ್ತಿದೆ.

ಗುಜರಾತಿನಲ್ಲಿ ಓಡಾಡಿ ಸರ್ವೇ ನಡೆಸುತ್ತಿರುವ ಏಜೆನ್ಸಿಗಳ ಖಾಸಗಿ ಅಭಿಪ್ರಾಯದ ಪ್ರಕಾರ ಗುಜರಾತ್‌ನಲ್ಲಿ ಕಾಂಗ್ರೆಸ್ ಬದಲಾಗಿ ಯಾವುದೇ ಬೇರೆ ಪ್ರಾದೇಶಿಕ ಪಕ್ಷ ಇದ್ದಿದ್ದಲ್ಲಿ ಸುಲಭವಾಗಿ ಗೆಲ್ಲಬಹುದಿತ್ತಂತೆ. ಆದರೆ ಎದುರಿಗೆ ಕಾಂಗ್ರೆಸ್ ಇರುವುದರಿಂದ ಬಿಜೆಪಿ ಮತ್ತು ಮೋದಿ ಇಷ್ಟು ವಿರೋಧದ ನಡುವೆಯೂ ಗೆಲ್ಲುವ ಉತ್ಸಾಹವನ್ನು ಹೊರಗಂತೂ ತೋರಿಸುತ್ತಿದ್ದಾರೆ.

BJP in Trouble If Polling is More Than 75pc in Gujarat

ಇಂಡಿಯಾ ಗೇಟ್’ನಲ್ಲಿ ಪ್ರಶಾಂತ್ ನಾತು

Follow Us:
Download App:
  • android
  • ios