Asianet Suvarna News Asianet Suvarna News

ಬಿಜೆಪಿಯಿಂದ ಟಿ 20 ಸೂತ್ರ : ಏನಿದು ಮಾಸ್ಟರ್ ಪ್ಲಾನ್..?

ಬಿಜಪಿ ಇದೀಗ ಮಾಸ್ಟರ್ ಪ್ಲಾನ್ ಒಂದನ್ನು ಮಾಡುತ್ತಿದೆ. ಅದರ ಹೊಸ ತಂತ್ರ ಟಿ 20 ಎಂಬ ಸೂತ್ರವಾಗಿದೆ. ಮುಂದಿನಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಈ ಹೊಸ ತಂತ್ರವನ್ನು ರೂಪಿಸಿದೆ. 

bjp Apply t20 Formula For Lok Sabha Election 2019
Author
Bengaluru, First Published Sep 17, 2018, 7:49 AM IST

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ 2014 ರಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲೇಬೇಕು ಎಂಬ ಗುರಿ ಹೊಂದಿರುವ ಭಾರತೀಯ ಜನತಾಪಕ್ಷವು, ಇದರ ಈಡೇರಿಕೆಗಾಗಿ ‘ಟಿ20 ’ ಸೂತ್ರದ ಮೊರೆ ಹೋಗಿದೆ. 20 ಓವರ್‌ಗಳ ಚುಟುಕು ಕ್ರಿಕೆಟ್‌ಗೆ ‘ಟಿ20 ’  ಎಂಬ ಪದ ವ್ಯಾಪಕವಾಗಿ ಬಳಕೆಯಲ್ಲಿದೆ. ಆ ಪದವನ್ನೇ ಬಿಜೆಪಿ ಬಳಸಿಕೊಳ್ಳುತ್ತಿದೆಯಾದರೂ, ಕ್ರಿಕೆಟ್‌ಗೂ ಪಕ್ಷಕ್ಕೂ ಸಂಬಂಧವಿಲ್ಲ.

ತನ್ನ ಪ್ರತಿ ಕಾರ್ಯಕರ್ತನನ್ನು ಆತ ವಾಸಿಸುವ  ಪ್ರದೇಶದ 20 ಮನೆಗಳಿಗೆ ಕಳುಹಿಸಿ, ಚಹಾ ಕುಡಿಯುತ್ತಾ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಬಿಜೆಪಿ ಕಾರ್ಯಕ್ರಮ ರೂಪಿಸಿದ್ದು, ಅದಕ್ಕೆ ‘ಟಿ20 ’ ಎಂಬ ನಾಮಕರಣ ಮಾಡಿದೆ.

ಮತದಾರರ ಜತೆ ನೇರ ಸಂಪರ್ಕ ಸಾಧಿ ಸುವ ಪ್ರಯತ್ನದ ಭಾಗವಾಗಿ ಬಿಜೆಪಿ ರೂಪಿಸಿರುವ ಕಾರ್ಯಕ್ರಮಗಳಲ್ಲಿ ಇದು ಕೂಡ ಒಂದಾಗಿದೆ. 2014ರ ಲೋಕಸಭೆ ಚುನಾವ ಣೆಗೂ ಮುನ್ನ ಅಂದು  ಪ್ರಧಾನಿ ಅಭ್ಯರ್ಥಿ ಯಾಗಿದ್ದ ನರೇಂದ್ರ ಮೋದಿ ಅವರು ಚಹಾ ಹೀರುತ್ತಾ ಮತದಾರರ ಜತೆ ಸಂವಾದ ನಡೆಸಲು ‘ಚಾಯ್ ಪೇ ಚರ್ಚೆ’ ಎಂಬ ವಿಶೇಷ ಕಾರ್ಯಕ್ರಮ ನಡೆಸಿದ್ದರು. 

ಅದರ ಮುಂದುವರಿದ ಭಾಗದಂತೆ ‘ಟಿ20’ ಇದೆ. ಇದಲ್ಲದೆ ನಮೋ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಯಾಗಲಿದ್ದು, ಹೆಚ್ಚು ಹೆಚ್ಚು ಜನರನ್ನು ಸೇರ್ಪಡೆಗೊಳಿಸುವ ಅಂಶ ಇರುತ್ತದೆ. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ 100 ಜನರನ್ನು ಆ್ಯಪ್‌ಗೆ ಸೇರ್ಪಡೆ ಮಾಡುವ ಗುರಿಯನ್ನು ಕಾರ್ಯಕರ್ತರಿಗೆ ನೀಡಲಾಗುತ್ತಿದೆ.

Follow Us:
Download App:
  • android
  • ios