Asianet Suvarna News Asianet Suvarna News

ತಮಿಳು ರಾಜಕೀಯದಲ್ಲಿ ಹೊಸ ಅಲೆ: ಬಿಜೆಪಿ, ಎಐಎಡಿಎಂಕೆ ಮೈತ್ರಿ ಭಲೆ ಭಲೆ!

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿ| ಎಐಎಡಿಎಂಕೆ, ಪಿಎಂಕೆ, ಬಿಜೆಪಿ ಮೈತ್ರಿ ಅಸ್ತಿತ್ವಕ್ಕೆ| ಪಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ| ಪೂರ್ಣಗೊಂಡ ಸೀಟು ಹಂಚಿಕೆ ಪ್ರಕ್ರಿಯೆ|

BJP, AIADMK And PMK Join Hands For Lok Sabha Polls
Author
Bengaluru, First Published Feb 19, 2019, 7:19 PM IST

ಚೆನ್ನೈ(ಫೆ.19): ಲೋಕಸಭೆ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿರುವಂತೆಯೇ ಪಕ್ಕದ ತಮಿಳುನಾಡಿನ ಬಿಜೆಪಿ, ಎಐಎಡಿಎಂಕೆ ಮತ್ತು ಪಿಎಂಕೆ ನಡುವೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದೆ.

ಪಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿವೆ. ಒಪ್ಪಂದಂತೆ ತಮಿಳುನಾಡಿನ ಒಟ್ಟು 39 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳನ್ನು ಪಿಎಂಕೆಗೆ ಹಂಚಿಕೆ ಮಾಡಲಾಗಿದೆ.

ಮುಂದಿನ ವರ್ಷ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಒಂದು ಸೀಟು ಪಿಎಂಕೆಗೆ ನೀಡಲಾಗುತ್ತಿದೆ. ಅಲ್ಲದೇ ಬಿಜೆಪಿಗೆ ಐದು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.

ಎಐಡಿಎಂಕೆ  ಸಂಯೋಜಕ ಪನ್ನೀರ್ ಸೆಲ್ವಂ ಮತ್ತು ಜಂಟಿ ಸಂಯೋಜಕ ಕೆ ಪಳನಿಸ್ವಾಮಿ ಪಿಎಂಕೆ ಸಹ ಸಂಸ್ಥಾಪಕ ಎಸ್ ರಾಮೋದಾಸ್ ಅವರೊಂದಿಗೆ ಮೈತ್ರಿಗೆ ಸಹಿ ಮಾಡಿವೆ, 10 ವರ್ಷಗಳ ನಂತರ ಈ ಎರಡು ಪಕ್ಷಗಳು ಮತ್ತೆ ಮೈತ್ರಿಗೆ ಕೈ ಜೋಡಿಸಿವೆ, 39 ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಎಐಎಡಿಎಂಕೆ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

Follow Us:
Download App:
  • android
  • ios