news
By Suvarna Web Desk | 04:29 PM June 19, 2017
ರಾಷ್ಟ್ರಪತಿ ಚುನಾವಣೆ: ಯಾರಿವರು ರಾಮ್'ನಾಥ್ ಕೋವಿಂದ?

Highlights

ಬಿಜೆಪಿ ಮುಖಂಡ ಹಾಗೂ ಬಿಹಾರ ರಾಜ್ಯಪಾಲ ರಾಮ್'ನಾಥ್ ಕೋವಿಂದ್ ಅವರನ್ನು ಎನ್'ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ. ರಾಷ್ಟ್ರಪತಿ ಚುನಾವಣಾ ಅಖಾಡದಲ್ಲಿ ಬಿಜೆಪಿಯ ಸಾಕಷ್ಟು ಹಿರಿಯ ತಲೆಗಳ ಹೆಸರು ಕೇಳಿ ಬಂದಿತ್ತು. ಆಶ್ಚರ್ಯ ಎಂಬಂತೆ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಪ್ರಸ್ತುತ ಬಿಹಾರ ರಾಜ್ಯಪಾಲ ರಾಮ್ ನಾಥ್ ಕೋವಿಂದಾರನ್ನು ಆಯ್ಕೆ ಮಾಡಲಾಗಿದೆ. ಯಾರಿವರು ಕೋವಿಂದ? ಏನಿವರ ಹಿನ್ನಲೆ? ಇಲ್ಲಿದೆ ನೋಡಿ.

ನವದೆಹಲಿ (ಜೂ.19): ಬಿಜೆಪಿ ಮುಖಂಡ ಹಾಗೂ ಬಿಹಾರ ರಾಜ್ಯಪಾಲ ರಾಮ್'ನಾಥ್ ಕೋವಿಂದ್ ಅವರನ್ನು ಎನ್'ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ. ರಾಷ್ಟ್ರಪತಿ ಚುನಾವಣಾ ಅಖಾಡದಲ್ಲಿ ಬಿಜೆಪಿಯ ಸಾಕಷ್ಟು ಹಿರಿಯ ತಲೆಗಳ ಹೆಸರು ಕೇಳಿ ಬಂದಿತ್ತು. ಆಶ್ಚರ್ಯ ಎಂಬಂತೆ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಪ್ರಸ್ತುತ ಬಿಹಾರ ರಾಜ್ಯಪಾಲ ರಾಮ್ ನಾಥ್ ಕೋವಿಂದಾರನ್ನು ಆಯ್ಕೆ ಮಾಡಲಾಗಿದೆ. ಯಾರಿವರು ಕೋವಿಂದ? ಏನಿವರ ಹಿನ್ನಲೆ? ಇಲ್ಲಿದೆ ನೋಡಿ.

ಉತ್ತರ ಪ್ರದೇಶದ ಕಾನ್ಪುರದಲ್ಲಿ 1945, ಅಕ್ಟೋಬರ್ 1 ರಂದು ಜನನ

ಕಾನ್ಪುರ ಯೂನಿವರ್ಸಿಟಿಯಲ್ಲಿ ಕಾನೂನು ಮತ್ತು ವಾಣಿಜ್ಯ ಪದವಿ ಪಡೆದಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿದ್ದವರು. 1977-79 ರವರೆಗೆ ದೆಹಲಿ ಹೈಕೋರ್ಟ್’ನಲ್ಲಿ ಸರ್ಕಾರಿ ವಕೀಲರಾಗಿದ್ದರು. 1980-93 ರವರೆಗೆ ಸುಪ್ರೀಂಕೋರ್ಟ್’ನಲ್ಲಿ ಕೇಂದ್ರ ಸರ್ಕಾರದ ಪರ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ದೆಹಲಿ ಹೈ ಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಒಟ್ಟಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

1994-2000 ಮತ್ತು 2000-2006 ರಲ್ಲಿ ಎರಡು ಅವಧಿಗೆ ರಾಜ್ಯ ಸಭಾ ಸದಸ್ಯರಾಗಿದ್ದರು. ಬಿಜೆಪಿಯ ಎಸ್ಸಿ, ಎಸ್ಟಿ ವಿಭಾಗವನ್ನು ಮುನ್ನಡೆಸಿದವರು. 2002 ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಬಿಹಾರದ 36 ನೇ ರಾಜ್ಯಪಾಲರಾಗಿ 2015 ಆಗಸ್ಟ್ ನಲ್ಲಿ ಆಯ್ಕೆಯಾಗಿದ್ದಾರೆ. ಬಿಜೆಪಿ ದಲಿತ ಮೋರ್ಚಾ ಹಾಗೂ ಅಖಿಲ ಬಾರತ ಕೋಲಿ ಸಮಾಜದ ಮಾಜಿ ಅಧ್ಯಕ್ಷರಾಗಿದ್ದರು. ಬಿಜೆಪಿಯ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಸಂಸತ್ತಿನ ಹಲವು ವಿಭಾಗಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ ಸಂಸತ್ ಸಮಿತಿ, ಗೃಹ ವ್ಯವಹಾರಗಳ ಸಮಿತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಮಿತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ, ಕಾನೂನು ಮತ್ತು ನ್ಯಾಯ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

Show Full Article


Recommended


bottom right ad