Asianet Suvarna News Asianet Suvarna News

ವಂದೇ ಭಾರತಂ: bharatkeveer.gov.in ಗೆ ಹರಿದು ಬಂತು ಕೋಟಿ ಕೋಟಿ ನೆರವು!

ಒಂದಾದ ಭಾರತವನ್ನು ಅಲುಗಾಡಿಸಲು ಸಾಧ್ಯವೇ?| ಪುಲ್ವಾಮಾ ದಾಳಿಯ ಹುನ್ನಾರ ಛಿದ್ರ ಛಿದ್ರ| ದಾಳಿಗೆ ಬೆದರದೇ ಮತ್ತಷ್ಟು ಗಟ್ಟಿಗೊಂಡ ಭಾರತ| bharatkeveer.gov.in ವೆಬ್‌ಸೈಟ್‌ನಲ್ಲಿ ನೆರವಿನ ಮಹಾಪೂರ| ಕೇವಲ 36 ಗಂಟೆಯಲ್ಲಿ 3.5 ಕೋಟಿ ರೂ. ನೆರವು| ಗಂಟೆಗೆ 10 ಲಕ್ಷ ರೂ. ನೆರವು ಸ್ವೀಕರಿಸಿದ ವೆಬ್‌ಸೈಟ್|

Bharat ke Veer site swamped, guess how much Indians donated for Pulwama martyrs
Author
Bengaluru, First Published Feb 16, 2019, 6:02 PM IST

ನವದೆಹಲಿ(ಫೆ.16): ಭಾರತವನ್ನು ಛಿದ್ರಗೊಳಿಸಲು ಸಾಧ್ಯವಿಲ್ಲ, ಭಾರತವನ್ನು ಮಣಿಸಲು ಸಾಧ್ಯವಿಲ್ಲ, ಭಾರತದ ಅಸ್ಮಿತೆಯನ್ನು ಕಸಿಯಲು ಸಾಧ್ಯವಿಲ್ಲ, ಭಾರತದ ಹುಮ್ಮಸ್ಸನ್ನು ಕುಗ್ಗಿಸಲು ಸಾಧ್ಯವಿಲ್ಲ. ಇಂತದ್ದೊಂದು ಸಂದೇಶ ಗಡಿಗಳನ್ನು ದಾಟಿ ನಮ್ಮ ಶತ್ರು ರಾಷ್ಟ್ರಗಳಿಗೆ ಇಂದು ತಲುಪಿದೆ.

ಹೌದು, ಪುಲ್ವಾಮಾ ಭಯೋತ್ಪಾದಕ ದಾಳಿ ಭಾರತವನ್ನು ಕುಗ್ಗಿಸಲಿದೆ ಎಂಬ ಶತ್ರು ರಾಷ್ಟ್ರದ ಹುನ್ನಾರವನ್ನು ಭಾರತೀಯರು ವಿಫಲಗೊಳಿಸಿದ್ದಾರೆ. ಪುಲ್ವಾಮಾ ದಾಳಿಯಾದ ಕೇವಲ 36 ಗಂಟೆಯಲ್ಲಿ bharatkeveer.gov.in ವೆಬ್‌ಸೈಟ್‌ಗೆ 3.5 ಕೋಟಿ ರೂ. ನೆರವು ಹರಿದು ಬಂದಿದೆ.

bharatkeveer.gov.in ವೆಬ್‌ಸೈಟ್‌ನಲ್ಲಿ ಪುಲ್ವಾಮಾ ಹುತಾತ್ಮರ ಕುಟುಂಬಕ್ಕೆ ನೆರವು ನೀಡಲು ಮಾಹಿತಿ ನೀಡಲಾಗಿದ್ದು, ಕೇವಲ 36 ಗಂಟೆಯಲ್ಲಿ 3.5 ಕೋಟಿ ರೂ. ಹರಿದು ಬಂದಿದೆ. ಅಲ್ಲದೇ ಪ್ರತಿ ಗಂಟೆಗೆ ಸುಮಾರು 10 ಲಕ್ಷ ರೂ. ನೆರವು ಹರಿದು ಬಂದಿದೆ.

bharatkeveer.gov.in ವೆಬ್‌ಸೈಟ್‌ನಲ್ಲಿ ಓರ್ವ ವ್ಯಕ್ತಿ ಕನಿಷ್ಠ 10 ರೂ.ದಿಂದ ಗರಿಷ್ಠ 15 ಲಕ್ಷ ರೂ.ವರೆಗೂ  ಸಹಾಯ ನೀಡಬಹುದಾಗಿದ್ದು, ನಿಮ್ಮ ಹಣ ತಲುಪುತ್ತಿದ್ದಂತೇ  ವೆಬ್‌ಸೈಟ್‌ನಲ್ಲೇ ಪ್ರಮಾಣಪತ್ರವೊಂದು ಜನರೇಟ್ ಆಗುತ್ತದೆ. ಅಲ್ಲದೇ ವೆಬ್‌ಸೈಟ್‌ನಿಂದ ನಿಮಗೆ ಅಧಿಕೃತ ಇ-ಮೇಲ್ ಸಂದೇಶ ಕೂಡ ಬರುತ್ತದೆ.

ಕೃಪೆ: MyNation

Follow Us:
Download App:
  • android
  • ios