Asianet Suvarna News Asianet Suvarna News

ಗ್ಯಾಸ್ ಏಜೆನ್ಸಿಯ ನೌಕರರು ಸ್ಮಶಾನದಲ್ಲಿ ನಿಗೂಢ ಸಾವು!

ಗ್ಯಾಸ್ ಏಜೆನ್ಸಿಯ ನೌಕರರು ಸ್ಮಶಾನದಲ್ಲಿ ನಿಗೂಢ ಸಾವು!| ಸ್ಮಶಾನಕ್ಕೆ ತೆರಳಿ ಮದ್ಯದೊಂದಿಗೆ ವಿಷ ಸೇವನೆ ಇಬ್ಬರೂ ಸಂಬಂಧಿಕರು | ಲಕ್ಷ್ಮೀಪುರದಲ್ಲಿ ಘಟನೆ

Bengaluru Gas Agency Employees suspicious Death in Graveyard
Author
Bangalore, First Published Sep 29, 2019, 10:43 AM IST

ಬೆಂಗಳೂರು[ಸೆ.29]: ಗ್ಯಾಸ್ ಏಜೆನ್ಸಿಯ ನೌಕರರು ಸ್ಮಶಾನದಲ್ಲಿ ನಿಗೂಢ ಸಾವು!| ಸ್ಮಶಾನಕ್ಕೆ ತೆರಳಿ ಮದ್ಯದೊಂದಿಗೆ ವಿಷ ಸೇವನೆ ಇಬ್ಬರೂ ಸಂಬಂಧಿಕರು | ಲಕ್ಷ್ಮೀಪುರದಲ್ಲಿ ಘಟನೆ

ಹಲಸೂರು ಸಮೀಪದ ಲಕ್ಷ್ಮೀಪುರ ಸ್ಮಶಾನ ದಲ್ಲಿ ಗ್ಯಾಸ್ ಏಜೆನ್ಸಿಯೊಂದರ ಇಬ್ಬರು ನೌಕರರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ

ಮಾರತ್ತಹಳ್ಳಿಯ ಮುರುಗೇಶ್ (೪೨) ಮತ್ತು ರಾಜೇಶ್(೩೨) ಮೃತರು. ಹಲಸೂ ರಿನ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಸ್ಮಶಾನದಲ್ಲಿ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿ ದ್ದಾರೆ. ಸ್ಥಳಕ್ಕೆ ತೆರಳಿ ಸಿಬ್ಬಂದಿ ಪರಿಶೀಲಿಸಿದಾಗ ಮೃತದೇಹಗಳ ಗುರುತು ಪತ್ತೆಯಾಗಿದೆ.

ಪ್ರಾಥಮಿಕ ಹಂತದ ತನಿಖೆಯಲ್ಲಿ ಮದ್ಯದಲ್ಲಿ ವಿಷ ಮಿಶ್ರಣ ಮಾಡಿ ಸೇವಿಸಿ ಗ್ಯಾಸ್ ಏಜೆನ್ಸಿ ಕೆಲಸಗಾರರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಷಡ್ಕರು ಸಾವಿಗೆ ಕಾರಣವೇನು?: ಮಾರತ್ತಹಳ್ಳಿಯ ಮುರುಗೇಶ್ ಹಾಗೂ ರಾಜೇಶ್ ಸಂಬಂಧಿಗಳಾಗಿದ್ದು, ಒಂದೇ ಕುಟುಂಬದ ಅಕ್ಕ-ತಂಗಿಯನ್ನು ಅವರು ವಿವಾಹವಾಗಿದ್ದರು. ತಮ್ಮ ಪತ್ನಿ ಮತ್ತು ಮಕ್ಕಳ ಜತೆ ಪ್ರತ್ಯೇಕವಾಗಿ ನೆಲೆಸಿದ್ದ ಅವರು, ಹಲಸೂರು ಸಮೀಪ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಶುಕ್ರವಾರ ಬೆಳಗ್ಗೆ ಇಬ್ಬರು ಕೆಲಸಕ್ಕೆ ಬಂದಿದ್ದಾರೆ. ಬಳಿಕ ಸಂಜೆ ಕೆಲಸ ಮುಗಿಸಿ ಮುರುಗೇಶ್ ಹಾಗೂ ರಾಜೇಶ್, ಸ್ಮಶಾನಕ್ಕೆ ತೆರಳಿ ಮದ್ಯ ಸೇವಿಸಿದ್ದಾರೆ. ಆ ವೇಳೆ ವಿಷ ಸೇವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆದರೆ ಬೆಳಗ್ಗೆ ಕೆಲಸಕ್ಕೆ ಹೋದವರು ರಾತ್ರಿಯಾದರೂ ಮನೆಗೆ ಬಾರದೆ ಹೋದಾಗ ಅವರ ಕುಟುಂಬದ ಸದಸ್ಯರು ಆತಂಕಗೊಂಡಿದ್ದಾರೆ. ಬಳಿಕ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಎಲ್ಲೂ ಪತ್ತೆಯಾಗದೆ ಹೋದಾಗ ಇಂದಿರಾ ನಗರ ಠಾಣೆ ಪೊಲೀಸರಿಗೆ ಅವರು ದೂರು ನೀಡಿದ್ದರು. ಇತ್ತ ಹಲಸೂರು ಠಾಣೆಗೆ ಶನಿವಾರ ಬೆಳಗ್ಗೆ ೬.೩೦ರಲ್ಲಿ ಲಕ್ಷ್ಮೀಪುರ ಸ್ಮಶಾನದಲ್ಲಿ ಇಬ್ಬರು ವ್ಯಕ್ತಿಗಳ ಮೃತದೇಹಗಳು ಬಿದ್ದಿವೆ ಎಂದು ಸ್ಥಳೀಯರು ಕರೆ ಮಾಡಿದ್ದರು. ತಕ್ಷಣವೇ ಹಲಸೂರು ಪೊಲೀಸರು, ಸ್ಮಶಾನಕ್ಕೆ ತೆರಳಿ ಮೃತರ ಪ್ಯಾಂಟ್‌ಗಳ ಜೇಬಿನಲ್ಲಿದ್ದ ಐಡಿ ಕಾರ್ಡ್‌ಗಳನ್ನು ಪರಿಶೀಲಿಸಿದಾಗ ಗುರುತು ಸಿಕ್ಕಿದೆ. ಅನಂತರ ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಸಾಗಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮೃತದೇಹಗಳ ಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲ. ಅಲ್ಲದೆ ಅವರ ಮೇಲೆ ಬಲಪ್ರಯೋಗ ಸಹ ನಡೆದಿರುವುದಕ್ಕೆ ಕುರುಹುಗಳಿಲ್ಲ. ವಿಷ ಸೇವಿನೆಯಿಂದ ಸಾವು ಸಂಭವಿಸಿದೆ ಎಂದಿದ್ದಾರೆ. ಹೀಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow Us:
Download App:
  • android
  • ios