Asianet Suvarna News Asianet Suvarna News

ಅಭಿಗೆ ಮತ್ತೆ ವಿಮಾನ ನೀಡಬೇಕಾ? ಬೆಂಗಳೂರಲ್ಲಿ ನಿರ್ಧಾರ

ಅಭಿಗೆ ಮತ್ತೆ ವಿಮಾನ ಬೆಂಗಳೂರಲ್ಲಿ ನಿರ್ಧಾರ| ವೈದ್ಯಕೀಯ ವರದಿಯ ಮೇಲೆ ನಿರ್ಧಾರ

Bengaluru based institute to certify Wing Commander Abhinandan before resuming combat flying
Author
Bangalore, First Published Mar 4, 2019, 9:03 AM IST

ನವದೆಹಲಿ[ಮಾ.04]: ಪಾಕಿಸ್ತಾನದ ವಶದಿಂದ ಬಿಡುಗಡೆ ಹೊಂದಿದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರು ಮತ್ತೆ ಯುದ್ಧವಿಮಾನ ಹಾರಿಸುವವರೇ ಎಂಬುದು ವೈದ್ಯಕೀಯ ಪರೀಕ್ಷಾ ವರದಿಯ ಮೇಲೆ ನಿರ್ಧಾರವಾಗಲಿದೆ.

ಅಭಿನಂದನ್‌ ಅವರನ್ನು ಶೀಘ್ರ ಬೆಂಗಳೂರಿನ ಏರೋಸ್ಪೇಸ್‌ ಮೆಡಿಸಿನ್‌ ಇನ್ಸ್‌ಟಿಟ್ಯೂಟ್‌ನಲ್ಲಿ ತಪಾಸಣೆಗೆ ಒಳಪಡಿಸುವ ನಿರೀಕ್ಷೆಯಿದೆ. ಅಪಘಾತಕ್ಕೆ ಒಳಗಾದ ಪೈಲಟ್‌ಗಳನ್ನು ಇಲ್ಲಿ ದೇಹಕ್ಷಮತೆ ಪರೀಕ್ಷೆಗೆ ಒಳಪಡಿಸುವುದು ವಾಯುಪಡೆ ನಿಯಮದ ಅನುಸಾರ ಕಡ್ಡಾಯವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಒಮ್ಮೆ ವಿಮಾನದಿಂದ ಜಿಗಿದಾಗ ಜಿಗಿದ ಸಂದರ್ಭದಲ್ಲಿ ಬೆನ್ನುಹುರಿಯ ಮೇಲೆ ಶೇ.16-17ರಷ್ಟುಹೆಚ್ಚು ಭಾರ ಬೀಳುತ್ತದೆ. ಹೀಗಾಗಿ ಈ ನೋವು ನಿವಾರಣೆ ಆಗಲು ಸಮಯ ಹಿಡಿಯುತ್ತದೆ. ಒಮ್ಮೆ ನೋವು ನಿವಾರಣೆ ಆದರೆ ಬಳಿಕ ಅವರನ್ನು ಹೆಲಿಕಾಪ್ಟರ್‌ ಅಥವಾ ಸಾರಿಗೆ ವಿಮಾನಗಳನ್ನು ಚಲಾಯಿಸಲು ಅವಕಾಶ ನೀಡಲಾಗುತ್ತದೆ’ ಎಂದರು.

ಆದರೆ ಗಾಯ ಪೂರ್ತಿ ವಾಸಿಯಾದರೆ ಮಾತ್ರ ಅವರಿಗೆ ಯುದ್ಧವಿಮಾನ ಹಾರಿಸಲು ಅನುಮತಿಸಲಾಗುತ್ತದೆ ಎಂದೂ ಅವರು ನುಡಿದರು.

Follow Us:
Download App:
  • android
  • ios