Asianet Suvarna News Asianet Suvarna News

ಬೆಳಗಾವಿ ಅಧಿವೇಶನ: ದೋಸ್ತಿ ಸರ್ಕಾರ ಈ 5 ಕಷ್ಟ ಎದುರಿಸಲೇಬೇಕು!

ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಸಕಲ ಸಿದ್ಧತೆಗಳು ಮುಗಿದಿವೆ. ನಿಗದಿಯಂತೆ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳ ಬಳಿ ಇರುವ ಅಸ್ತ್ರಗಳು ಯಾವವು?

Belagavi WInter session Karnataka Coalition Government should face 5 challenges
Author
Bengaluru, First Published Dec 9, 2018, 8:36 PM IST

ಬೆಂಗಳೂರು[ಡಿ.09] ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ರಾಜ್ಯದ ಹಲವು ಸಮಸ್ಯೆಗಳು ಚರ್ಚೆಯಾಗಬಹುದು. ದೋಸ್ತಿ ಸರ್ಕಾರ ಮೊದಲ ಸಾರಿ ಬೆಳಗಾವಿಯಲ್ಲಿ ಸದನದಲ್ಲಿ ಭಾಗವಹಿಸಲಿದೆ. ಹಾಗಾದರೆ ಈ ಬಾರಿ ವಿಪಕ್ಷಗಳ ಬಳಿ ಇರುವ ಅಸ್ತ್ರಗಳು ಯಾವವು?

1. ಸಾಲಮನ್ನಾ: ಘೊಷಣೆ ಮಾಡಿದಂತೆ ರಾಜ್ಯ ಸರ್ಕಾರ ರೈತರಿಗೆ ಸಾಲಮನ್ನಾ ನೀಡಿದ್ದರೂ ಅನುಷ್ಠಾನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಇದೇ ವಿಚಾರ ಸದನದಲ್ಲಿ ಮತ್ತೆ ಪ್ರತಿಧ್ವನಿಸಿದರೂ ಅಚ್ಚರಿ ಇಲ್ಲ.

2. ಕಬ್ಬು ಬಾಕಿ: ಕಬ್ಬು ಬಾಕಿ ಹಣ ಪಾವತಿ ಮಾಡಲು ಬೆಳಗಾವಿಯಲ್ಲೇ ರೈತರು ಉಗ್ರ ಹೋರಾಟ ನಡೆಸಿದ್ದರು. ಸುವರ್ಣ ಸೌಧದ ಬೀಗ ಮುರಿಯಲು ಯತ್ನ ಮಾಡಿದ್ದರು. ಈಗ ಅಧಿವೇಶನದ ಸಂದರ್ಭ ಮತ್ತೆ ಹೋರಾಟ ಆರಂಭವಾಗಬಹುದು.

ನಿಖಿಲ್‌ಗೆ ಮದುವೆ ಫಿಕ್ಸ್ ಮಾಡಲು ಕುಮಾರಸ್ವಾಮಿ ಹೋಗಿದ್ದು ಎಲ್ಲಿಗೆ?

3. ಸಿದ್ದರಾಮಯ್ಯ ಸಿಎಜಿ ವರದಿ: ಸಿದ್ದರಾಮಯ್ಯ ಸರ್ಕಾರದ ವೇಳೆ ಖರ್ಚು ಮಾಡಲಾದ 35 ಸಾವಿರ ಕೋಟಿ ರೂ.ಗೆ ಲೆಕ್ಕ ಸಿಗುತ್ತಿಲ್ಲ. ಈ ಬಗ್ಗೆ ಸದನ ಸಮಿತಿ ರಚನೆ ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದು ಕೂರಬಹುದು.

4. ಬೆಳಗಾವಿಗೆ ಸ್ಥಳಾಂತರ: ದೋಸ್ತಿ ಸರ್ಕಾರ ಬಂದಾಗಿನಿಂದ ಉತ್ತರ ಕರ್ನಾಟಕ ಕಡೆಗಣನೆ ಮಾಡುತ್ತಿದೆ ಎಂಬ ಆರೋಪ ಒಂದೆಲ್ಲಾ ಒಂದು ಕಡೆ ಕೇಳಿ ಬರುತ್ತಲೇ ಇದೆ. ಪ್ರಮುಖ ಇಲಾಖೆಗಳನ್ನು ಉತ್ತರ ಕರ್ನಾಟಕದ  ಜನರಿಗೆ ಅನುಕೂಲ ಆಗುವ ರೀತಿ ಸ್ಥಳಾಂತರ ಮಾಡಿಕೊಡಬೇಕು ಎಂಬ ಕೂಗು ಜೋರಾಗಬಹುದು.

5. ಸಂಪುಟ ಸಂಕಷ್ಟ: ಸಂಪುಟ ವಿಸ್ತರಣೆಗೆ ದೋಸ್ತಿ ಸರ್ಕಾರ ಡಿಸೆಂಬರ್ 22 ರ ದಿನಾಂಕ ಫಿಕ್ಸ್ ಮಾಡಿದ್ದರೂ ಇದು ಕೇವಲ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರ ಎಂಬ ಆರೋಪ ಆಡಳಿತ ಪಕ್ಷ ದವರಿಂದಲೇ ಕೇಳಿ ಬಂದಿದೆ.  ಈ ಕಾರಣಕ್ಕೆ ಆಡಳಿತ ಪಕ್ಷದವರಿಗೆ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಲಿದೆ.

Follow Us:
Download App:
  • android
  • ios