Asianet Suvarna News Asianet Suvarna News

ಡಿಸೆಂಬರ್ 31ರ ಒಳಗೆ ಪ್ರಳಯ! ಇದು ಭವಿಷ್ಯವಲ್ಲ,ವಿಜ್ಞಾನಿಯ ಮಾತು: ಬೆಂಗಳೂರಿಗೂ ಸುನಾಮಿ ಸಾಧ್ಯತೆ !

ಪತ್ರವು ಸೆ.20ಕ್ಕೆ ಪ್ರಧಾನಿಯವರ ಕೈಸೇರಿದೆ. ಕಲಾಯಿಲ್ ಅವರು ಬಿ.ಕೆ. ರಿಸರ್ಚ್ ಅಸೋಸಿಯೇಷನ್'ನ ನಿರ್ದೇಶಕರಾಗಿದ್ದು, ನಿಖರವಾದ ವೈಜ್ಞಾನಿಕ ವಿಶ್ಲೇಷಣೆ ನೀಡುವಲ್ಲಿ ಪರಿಣಿತಿ ಪಡೆದಿದ್ದಾರೆ

Babu Kalayil Letter PM Modi

ಬೆಂಗಳೂರು(ಸೆ.23): ಡಿಸೆಂಬರ್ 31ರೊಳಗೆ ಪ್ರಳಯ ಸಂಭವಿಸಲಿದ್ದು ಭಾರತವೂ ಸೇರಿ 11 ದೇಶಗಳಿಗೆ ತೊಂದರೆಯುಂಟಾಗಲಿದೆ. ಅಲ್ಲದೆ ಸುನಾಮಿ ಅಲೆಗಳು ಬೆಂಗಳೂರಿಗೂ ತಲುಪುವ ಸಾಧ್ಯತೆಯಿದೆ ಎಂದು ವಿಜ್ಞಾನಿಯೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಭೂಪದರಗಳ ಒಳಗೆ ಚಟುವಟಿಕೆ ನಡೆಯುತ್ತಿದ್ದು, ಹಿಂದು ಮಹಾಸಾಗರದಾಳದಲ್ಲಿ ಭೂಕಂಪವುಂಟಾಗಿ ಅದರ ಬೆನ್ನಲ್ಲೇ ಸುನಾಮಿಯಾಗಲಿದೆ. ಸುನಾಮಿ ನಂತರ ಮಹಾ ಚಂಡಮಾರುತ ಸಂಭವಿಸಲಿದೆಯಂತೆ ಎಂದು ಕೇರಳದ ವಿಜ್ಞಾನಿ ಬಾಬು ಕಲಾಯಿಲ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪತ್ರವು ಸೆ.20ಕ್ಕೆ ಪ್ರಧಾನಿಯವರ ಕೈಸೇರಿದೆ.

ಕಲಾಯಿಲ್ ಅವರು ಬಿ.ಕೆ. ರಿಸರ್ಚ್ ಅಸೋಸಿಯೇಷನ್'ನ ನಿರ್ದೇಶಕರಾಗಿದ್ದು, ನಿಖರವಾದ ವೈಜ್ಞಾನಿಕ ವಿಶ್ಲೇಷಣೆ ನೀಡುವಲ್ಲಿ ಪರಿಣಿತಿ ಪಡೆದಿದ್ದಾರೆ. ಇವರು ಬರೆದ ಪತ್ರದ ಪ್ರಕಾರ ಈ ಭಯಾನಕ ಭೂಕಂಪನದಿಂದ ಏಷ್ಯಾದ ಕರಾವಳಿ ಪ್ರದೇಶಗಳಿಗೆ ಹಾನಿಯುಂಟಾಗಲಿದೆ. ಸಮುದ್ರತೀರದ ರೇಖೆಯಲ್ಲಿ ಭಾರೀ ಬದಲಾವಣೆಯಾಗಲಿದೆ. ಭಾರತವಲ್ಲದೆ ಚೈನಾ, ಜಪಾನ್​, ಪಾಕಿಸ್ತಾನ,

ನೇಪಾಳ, ಬಾಂಗ್ಲಾದೇಶ​, ಥೈಲ್ಯಾಂಡ್, ಅಫ್ಘಾನಿಸ್ತಾನ, ಶ್ರೀಲಂಕಾ, ಗಲ್ಫ್​ ದೇಶ ಸೇರಿದಂತೆ ಒಟ್ಟು 11 ದೇಶಗಳು ತೊಂದರೆ ಅನುಭವಿಸಲಿದೆ. ಏಷ್ಯಾ ಖಂಡದ ಭೂ ನಕ್ಷೆಯೇ ಬದಲಾಗುತ್ತದೆ' ಎಂದು ತಿಳಿಸಿದ್ದಾರೆ.

2004ರ ಸುನಾಮಿಯನ್ನು ಅಂದಾಜಿಸಿದ್ದ ಬಾಬು

ಸುನಾಮಿಯು 120 ಕಿ.ಮೀ'ನಿಂದ 180 ಕಿ.ಮೀ ವೇಗವಾಗಿ ಬರಲಿದ್ದು, ಕರಾವಳಿ ಪ್ರದೇಶಗಳೆಲ್ಲಾ ನಿರ್ನಾಮವಾಗಲಿದೆಯಂತೆ. ‘ಸೀಶ್ಮಾ’ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆಯಂತೆ. ಇಎಸ್​ಪಿ(ಎಕ್ಸ್​ಟ್ರಾ ಸೆನ್ಸರಿ ಪ್ರಿಸೆಪ್ಶನ್) ಸಹಾಯದಿಂದ ಬಾಬು ಮತ್ತವರ ತಂಡ ಈ ಮಾಹಿತಿ ಕಂಡುಕೊಂಡಿದೆ. ಬಾಬು ಅವರು 2004ರ ಚೆನ್ನೈ ಸುನಾಮಿಯನ್ನು ಮೊದಲೇ ಅಂದಾಜಿಸಿ ಮುನ್ನೆಚ್ಚರಿಕೆ ಕೈಗೊಳ್ಳಿ  ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಾಬು ಈವರೆಗೆ ಅಂದಾಜಿಸಿದ್ದು ಯಾವುದೂ ಸುಳ್ಳಾಗಿಲ್ಲ. 2001ರಲ್ಲೇ ಮಂಗಳ ಗ್ರಹದಲ್ಲಿ ನೀರಿದೆ ಎಂದಿದ್ದರು ಬಾಬು.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios