Asianet Suvarna News Asianet Suvarna News

(ವೈರಲ್ ಚೆಕ್) ಕಾಂಗ್ರೆಸ್ ಕಚೇರಿಯಲ್ಲಿ ಔರಂಗಜೇಬನ ಫೋಟೋ..!

ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಔರಂಗಜೇಬನ ಫೋಟೊವನ್ನು ಹಾಕಿದ್ದಾರೆ ಎನ್ನುವ  ಫೊಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Aurangazeb Photo At congress Headquarter

ನವದೆಹಲಿ (ಡಿ.14): ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಔರಂಗಜೇಬನ ಫೋಟೊವನ್ನು ಹಾಕಿದ್ದಾರೆ ಎನ್ನುವ  ಫೊಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯ ಅಕ್ಬರ್ ರೋಡ್’ನಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ತೆಗೆದಿರುವ ಫೋಟೊ ಇದಾಗಿದೆ.

ಚಿತ್ರದಲ್ಲಿ ಮನಮೋಹನ್ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಇದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಹಿಂಭಾಗದಲ್ಲಿ ಕಾಣುವ ಜೌರಂಗಜೇಬನ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಆದರೆ ನಿಜಕ್ಕೂ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಔರಂಗಜೇಬನ ಫೋಟೋ ಇತ್ತೇ ಎಂದು ಪರಿಶೀಲಿಸಿದಾಗ ಇದರ ಅಸಲಿಯತ್ತು ಬಯಲಾಗಿದೆ. ಈ ಫೋಟೋ ಡಿಸೆಂಬರ್ 4ನೇ ತಾರೀಖು ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಸಲ್ಲಿಸುವ ವೇಳೆ ತೆಗೆದ  ಫೋಟೋ. ಅಸಲಿಗೆ ಕಾಂಗ್ರೆಸ್ ನಾಯಕರ ಹಿಂಭಾಗದಲ್ಲಿರುವುದು ಔರಂಗಜೇಬನ ಫೋಟೋವಲ್ಲ ಬದಲಿಗೆ ಮಹಾತ್ಮಾ ಗಾಂಧಿಯ ಭಾವಚಿತ್ರ. ಮಹಾತ್ಮಾ ಗಾಂಧಿಯ ಭಾವಚಿತ್ರಕ್ಕೆ ಬದಲಾಗಿ, ಔರಂಗಜೇಬನ  ಫೋಟೋವನ್ನು ಫೊಟೋಶಾಪ್ ಮೂಲಕ ಎಡಿಟ್ ಮಾಡಿ ಆ ಜಾಗಕ್ಕೆ ಔರಂಗಜೇಬನ ಫೋಟೋವನ್ನು ಹಾಕಲಾಗಿದೆ.

ಕಾಂಗ್ರೆಸ್’ನ ಅಧಿಕೃತ ವಬ್’ಸೈಟ್ ಅಸಲಿ ಪೋಟೋವನ್ನು ಬಿಡುಗಡೆ ಮಾಡುವ ಮೂಲಕ ಈ ಗೊಂದಲವನ್ನು ಸ್ಪಷ್ಟಪಡಿಸಿದೆ. ಹಾಗಾಗಿ ದೆಹಲಿಯ ಅಕ್ಬರ್ ರೋಡ್’ಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಜೌರಂಗಜೇಬನ ಫೋಟೋವನ್ನು ಇಡಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.

Follow Us:
Download App:
  • android
  • ios