Asianet Suvarna News Asianet Suvarna News

‘ಹಿಂದೂ ಭಯೋತ್ಪಾದನೆ ಹುಯಿಲೆಬ್ಬಿಸಿದ್ದ ಕಾಂಗ್ರೆಸ್ ಕ್ಷಮೆ ಕೇಳಲಿ’!

ಸಂಜೋತಾ ಸ್ಫೋಟದ ಪಂಚಕುಲ ಕೋರ್ಟ್ ತೀರ್ಪು ಹಿನ್ನೆಲೆ| ‘ಹಿಂದೂ ಭಯೋತ್ಪಾದನೆ ಎಂದಿದ್ದ ಕಾಂಗ್ರೆಸ್ ದೇಶದ ಕ್ಷಮೆ ಕೇಳಲಿ’| ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಆಗ್ರಹ|  ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲಾ ಪ್ರಮುಖ ಆರೋಪಿಗಳ ಖುಲಾಸೆ| ‘ಓಟ್ ಬ್ಯಾಂಕ್ ಗಾಗಿ ಸುಳ್ಳು ಸಾಕ್ಷ್ಯಗಳನ್ನು ಮುಂದಿಟ್ಟ ಕಾಂಗ್ರೆಸ್’|

Arun Jaitley Says Congress Must Apologise For Fake Hindu Terror Theory
Author
Bengaluru, First Published Mar 29, 2019, 6:30 PM IST

ನವದೆಹಲಿ(ಮಾ.29): ಸಂಜೋತಾ ಸ್ಫೋಟದ ಬಳಿಕ ಹಿಂದೂ ಭಯೋತ್ಪಾದನೆ ಎಂಬ ಹುಸಿ ಸಿದ್ಧಾಂತವನ್ನು ಮಂಡಿಸಿದ್ದ ಕಾಂಗ್ರೆಸ್ ದೇಶದ  ಕ್ಷಮೆ ಯಾಚಿಸಬೇಕೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆಗ್ರಹಿಸಿದ್ದಾರೆ.  

ಸಂಜೋತಾ ಸ್ಫೋಟ ಪ್ರಕರಣದಲ್ಲಿ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಮಾತನಾಡಿರುವ ಅರುಣ್ ಜೇಟ್ಲಿ, ಪ್ರಕರಣವನ್ನು ನೆಪ ಮಾಡಿಕೊಂಡು ಕಾಂಗ್ರೆಸ್ ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ಹುಯಿಲೆಬ್ಬಿಸಿತ್ತು ಎಂದು ಆರೋಪಿಸಿದ್ದಾರೆ.

ಸಂಜೋತಾ ರೈಲು ಸ್ಫೋಟ ಪ್ರಕರಣದದಲ್ಲಿ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲಾ ಪ್ರಮುಖ ಆರೋಪಿಗಳನ್ನು ಇದೀಗ ಪಂಚಕುಲ ನ್ಯಾಯಾಲಯ ಖುಲಾಸೆಗೊಳಿಸಿದೆ. 
 
ನೈಜ ಭಯೋತ್ಪಾದಕರ ಸುಳಿವಿನ ಆಧಾರದಲ್ಲಿ ತನಿಖೆ ನಡೆಸುವುದರ ಬದಲು ಕಾಂಗ್ರೆಸ್ ಓಟ್ ಬ್ಯಾಂಕ್ ಗಾಗಿ ಸುಳ್ಳು ಸಾಕ್ಷ್ಯಗಳನ್ನು ಮುಂದಿಟ್ಟು ಹಿಂದೂ ಭಯೋತ್ಪಾದನೆ ಎಂಬ ಹೊಸ ವ್ಯಾಖ್ಯಾನವನ್ನು ಮುಂದಿಟ್ಟಿತ್ತು ಎಂದು ಜೇಟ್ಲಿ ಆರೋಪಿಸಿದ್ದಾರೆ.

Follow Us:
Download App:
  • android
  • ios