Asianet Suvarna News Asianet Suvarna News

ಸಿಕ್ತು ಪೂಜಾರಿಯ ಮಮ್ಮಿ: ಇಂರ್ಟೆಸ್ಟಿಂಗ್ ಕತೆ ಕೇಳಮ್ಮಿ!

ಈಜಿಪ್ಟ್‌ನಲ್ಲಿ ಸಿಕ್ತು ಮತ್ತೊಂದು ಮಮ್ಮಿ| ಸುಸ್ಥಿತಿಯಲ್ಲಿದೆ ಶ್ರೇಷ್ಠ ಪೂಜಾರಿಯ ಮಮ್ಮಿ| 4,400 ವರ್ಷಗಳಷ್ಟು ಹಳೆಯದಾದ ವಾಹ್ ತೈ ಮಮ್ಮಿ| ವಾಹ್ ತೈ ರಾಜ ನೆಫಿರಕರೆ ಆಸ್ಥಾನದ ಪ್ರಮುಖ ಪೂಜಾರಿ   

Archaeologists Found 4,400-Year-Old Tomb Of Top Ancient Priest
Author
Bengaluru, First Published Dec 15, 2018, 9:27 PM IST

ಕೈರೋ(ಡಿ.15): ಈಜಿಪ್ಟ್ ಭೂಮಿಯೇ ಹಾಗೆ. ಹಲವಾರು ರಹಸ್ಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಫೆರೊಗಳ ಭೂಮಿ ಅದು. ಮಮ್ಮಿಗಳ ರೂಪದಲ್ಲಿ ಇಂದಿಗೂ ನಮ್ಮೊಂದಿಗೆ ಇರುವ ಭೂತಕಾಲದ ಶ್ರೇಷ್ಠ ನಾಗರಿಕತೆ ಅದು.

ಈಜಿಪ್ಟ್ ನಲ್ಲಿ ಮಮ್ಮಿಗಳಿಗೇನೂ ಕೊರತೆ ಇಲ್ಲ. ಬಗೆದಷ್ಟೂ ಮಮ್ಮಿಗಳು ಇಲ್ಲಿ ಸಿಗುತ್ತವೆ. ಇವುಗಳಲ್ಲಿ ಕೆಲವು ಅತ್ಯಂತ ಮಹತ್ವದ ಮಮ್ಮಿಗಳೂ ಇವೆ.

ಅದರಂತೆ ಈಜಿಪ್ಟ್ ನ ಪುರಾತತ್ವ ಶಾಸ್ತ್ರಜ್ಞರು ಸುಮಾರು 4,400 ವರ್ಷಗಳಷ್ಟು ಹಳೆಯದಾದ ಪೂಜಾರಿಯೋರ್ವನ ಮಮ್ಮಿಯನ್ನು ಸಂಶೋಧಿಸಿದ್ದಾರೆ.

Archaeologists Found 4,400-Year-Old Tomb Of Top Ancient Priest

ಕೈರೋದ ದಕ್ಷಿಣ ಭಾಗದಲ್ಲಿರುವ ಸಖ್ಖಾರಾ ಪ್ರದೇಶದಲ್ಲಿ ಈ ಮಮ್ಮಿ ದೊರೆತಿದ್ದು, ಇದು ವಾಹ್ ತೈ ಎಂಬ ಅತ್ಯಂತ ಪ್ರತಿಷ್ಠಿತ ಪೂಜಾರಿಯ ಮಮ್ಮಿ ಎಂದು ಗುರುತಿಸಲಾಗಿದೆ.

ವಾಹ್ ತೈ ಈಜಿಪ್ಟ್ ನ 5ನೇ ರಾಜಮನೆತನದ ನೆಫಿರಕರೆ ಎಂಬ ರಾಜನ ಆಸ್ಥಾನದಲ್ಲಿ ಪೂಜಾರಿಯಾಗಿದ್ದ ಎಂದು ಇತಾಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಹ್ ತೈ ಮಮ್ಮಿ ಪಕ್ಕದಲ್ಲೇ ಆತನ ತಾಯಿ, ಪತ್ನಿಯ ಮಮ್ಮಿಯೂ ಇದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ ಎಂದು ಪುರಾತತ್ವ ಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios