Asianet Suvarna News Asianet Suvarna News

35ರ ಹೆಣ್ಣು, 70ರ ಅಜ್ಜಿಯಂತೆ ಬಂದು ಅಯ್ಯಪ್ಪನ ದರ್ಶನ!

ಶಬರಿಮಲೆಗೆ ಮತ್ತೋರ್ವ ಮಹಿಳೆಯ ಪ್ರವೇಶ| ಮುಖಕ್ಕೆ ಮೇಕಪ್ ಮಾಡಿಕೊಂಡು ದೇಗುಲ ಪ್ರವೇಶ| ಕೇರಳ ದಲಿತ ಮಹಿಳಾ ಫೆಡರೇಶನ್ ಕಾರ್ಯದರ್ಶಿ| ಕೇರಳದ ದೇವಸ್ಥಾನವೊಂದರ ಪೂಜಾರಿಯ ಮಗಳು| ಪ್ರತಿಭಟನಾಕಾರರ ಕಣ್ತಪ್ಪಿಸಿ ದೇಗುಲ ಪ್ರವೇಶ

Another Woman Enters Sabarimala Ayyappa Temple
Author
Bengaluru, First Published Jan 9, 2019, 7:31 PM IST

ತಿರುವನಂತಪುರಂ(ಜ.09): ಶಬರಿಮಲೆಗೆ 'ಅನ್ಯ ಮಾರ್ಗ'ದಲ್ಲಿ ಬಂದು ಅಯ್ಯಪ್ಪನ ದರ್ಶನ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇಂದೂ ಕೂಡ 35 ವರ್ಷದ ಮಹಿಳೆಯೊಬ್ಬರು ವಯಸ್ಸಾದ ಅಜ್ಜಿಯಂತೆ ಮೇಕಪ್ ಮಾಡಿಕೊಂಡು ಶಬರಿಮಲೆಗೆ ಬಂದು ಅಯ್ಯಪ್ಪನ ದರ್ಶನ ಮಾಡಿದ್ದಾರೆ.

ಕೇರಳದ ದಲಿತ ಮಹಿಳಾ ಫೆಡರೇಶನ್ ರಾಜ್ಯ ಕಾರ್ಯದರ್ಶಿಯಾದ ಎಸ್‌.ಪಿ. ಮಂಜು ಎಂಬ ಮಹಿಳೆ ಇಂದು ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಕೇರಳದ ದೇವಸ್ಥಾನವೊಂದರ ಪೂಜಾರಿಯ ಮಗಳಾಗಿರುವ ಈ ಮಹಿಳೆ ಮುಖಕ್ಕೆ ಮೇಕಪ್ ಮಾಡಿಕೊಂಡು ಶಬರಿಮಲೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

"

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ಈಗಲೂ ಬೆಟ್ಟದಲ್ಲೇ ಇದ್ದು, ಅವರ ಕಣ್ಣು ತಪ್ಪಿಸಿ ಈ ಮಹಿಳೆ ದೇಗುಲ ಪ್ರವೇಶಿಸಿದ್ದಾರೆ ಎನ್ನಲಾಗಿದೆ.

ಶಬರಿಮಲೆಯಲ್ಲಿ ಇತಿಹಾಸ: ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು!

ಶಬರಿಮಲೆಗೆ ರಾತ್ರೋ ರಾತ್ರಿ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ವಿವರ

ಶಬರಿಮಲೆ ಪ್ರವೇಶಿಸಿದ ಮಹಿಳೆಯರು ಮತ್ತು ಇನ್ವಿಸಿಬಲ್ ಗೋರಿಲ್ಲಾ!

ಭಾರತದಲ್ಲಿ ಮಾರ್ಕ್ಸಿಸಂಗೆ ಅಂತ್ಯ ಹಾಡಲಿರುವ ಶಬರಿಮಲೆ: ರಾಜೀವ್ ಚಂದ್ರಶೇಖರ್

Follow Us:
Download App:
  • android
  • ios