Asianet Suvarna News Asianet Suvarna News

ಧಮ್ ಇದ್ರೆ 370 ಮರುಸ್ಥಾಪನೆ ಮಾಡ್ತಿವಿ ಅಂತ ಹೇಳಿ: ಶಾ ಸವಾಲು!

ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲು ಸ್ವೀಕರಿಸುವ ಧಮ್ ಇದೆಯೇ?| 'ತಾಕತ್ತಿದ್ದರೆ ಆರ್ಟಿಕಲ್ 370 ಮರು ಸ್ಥಾಪಿಸುವುದಾಗಿ ರಾಹುಲ್ ಘೋಷಿಸಲಿ'| ಮಹಾರಾಷ್ಟ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಬ್ಬರದ ಪ್ರಚಾರ| ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಮರು ಸ್ಥಾಪಿಸುವುದಾಗಿ ರಾಹುಲ್ ಘೋಷಿಸಲಿ ಎಂದ ಅಮಿತ್ ಶಾ| 'ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‌ಗಾಗಿ ಇದುವರೆಗೂ 370ನೇ ವಿಧಿ ರದ್ದುಗೊಳಿಸಿರಲಿಲ್ಲ'| 'ಆರ್ಟಿಕಲ್ 370ಯನ್ನು ಕಿತ್ತೆಸೆಯುವುದು ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿತ್ತು'|

Amit Shah Dares Rahul Gandhi To Declare Congress Will Restore Art 370
Author
Bengaluru, First Published Oct 19, 2019, 9:42 PM IST

ನಂದುರ್ಬರ್(ಅ.19): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಖಂಡಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾಕತ್ತಿದ್ದರೆ ಆರ್ಟಿಕಲ್ 370ಯನ್ನು ಮರು ಸ್ಥಾಪಿಸುವುದಾಗಿ ಘೋಷಿಸಲಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ.

ಮಹಾರಾಷ್ಟ್ರದ ನಂದುರ್ಬರ್'ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೆ ಆರ್ಟಿಕಲ್ 370 ರದ್ದುಗೊಳಿಸುವುದಾಗಿ ಘೋಷಿಸುವ ತಾಕತ್ತು ರಾಹುಲ್ ಗಾಂಧಿ ಅವರಿಗೆ ಇದೆಯೇ ಎಂದು ಪ್ರಶ್ನಿಸಿದರು.

ವಿಶೇಷ ಸ್ಥಾನಮಾನದ ನೆರಳಲ್ಲಿ ಪಾಕಿಸ್ತಾನ ಕಾಶ್ಮೀರದಲ್ಲಿ ಉಗ್ರರನ್ನು ಹುಟ್ಟು ಹಾಕುತ್ತಿತ್ತು ಎಂದು ಆರೋಪಿಸಿರುವ ಶಾ, ರಾಜ್ಯದ ಅಭಿವೃದ್ಧಿಗೂ ಮಾರಕವಾಗಿದ್ದ ಆರ್ಟಿಕಲ್ 370ಯನ್ನು ಕಿತ್ತೆಸೆಯುವುದು ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿತ್ತು ಎಂದು ಹೇಳಿದರು.

ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‌ಗಾಗಿ ಇದುವರೆಗೂ 370ನೇ ವಿಧಿ ರದ್ದುಗೊಳಿಸಿರಲಿಲ್ಲ. ಅವರಿಗೆ ರಾಷ್ಟ್ರೀಯ ಹಿತಾಸಕ್ತಿಗಿಂತ ಮತ ಬ್ಯಾಂಕ್ ಮುಖ್ಯವಾಗಿತ್ತು ಎಂದು ಬಿಜೆಪಿ ರಾಷ್ರಾಧ್ಯಕ್ಷ ಕಿಡಿಕಾರಿದರು.

ರಾಹುಲ್ ಗಾಂಧಿ ಅವರು ಮಹಾರಾಷ್ಟ್ರಕ್ಕೂ 370ನೇ ವಿಧಿಗೂ ಏನು ಸಂಬಂಧ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 370ನೇ ವಿಧಿ ಮರು ಸ್ಥಾಪಿಸುವುದಾಗಿ ಘೋಷಿಸಲಿ ಎಂದು ಶಾ ಸವಾಲು ಹಾಕಿದರು.

Follow Us:
Download App:
  • android
  • ios