Asianet Suvarna News Asianet Suvarna News

ಮಂತ್ರಿಗಿರಿ ಕಳೆದುಕೊಳ್ಳುತ್ತಾರ ಕಾಂಗ್ರೆಸ್ ಮುಖಂಡ ?

ಅನೇಕ ಬಾರಿ ವಿವಾದಕ್ಕೆ ಒಳಗಾಗಿರುವ ಈ ಕಾಂಗ್ರೆಸ್ ಮುಖಂಡನನ್ನು ಸಂಪುಟದಿಂದ ಕೈ ಬಿಡಲು ಒತ್ತಾಯ ಕೇಳಿ ಬಂದಿದೆ. ಸಿಧು ಅವರನ್ನು ಅಮರೀಂದರ್ ಸಿಂಗ್ ಅವರನ್ನು ಕೈ ಬಿಡಲು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. 

Amarinder Should Throw Navjot Singh Sidhu His Cabinet Says BJP leader\
Author
Bengaluru, First Published Dec 3, 2018, 10:57 AM IST

ಚಂಡೀಗಢ :  ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರವಾಗಿ ವಿವಾದಿತ ಹೇಳಿಕೆ ನೀಡುತ್ತಿದ್ದು ಈ ನಿಟ್ಟಿನಲ್ಲಿ ಸಂಪುಟದಿಂದ ಅವರನ್ನು ಕೈ ಬಿಡಬೇಕು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. 

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರೇ ಸಿಧು ಅವರನ್ನು ವಿರೋಧಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ  ತರುಣ್ ಚುಗ್ ಹೇಳಿದ್ದಾರೆ. 

ಪಾಕಿಸ್ಥಾನಿ ಪತ್ರಕರ್ತರನ್ನು  ಸಿಧು ಅಪ್ಪಿಕೊಳ್ಳುತ್ತಾರೆ. ಆದರೆ ಭಾರತೀಯ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. 2019ರ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಮುಸ್ಲಿಂ ಮತಗಳನ್ನು ಪಡೆಯಲು ರಾಹುಲ್ ಗಾಂಧಿಯ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ ಗುರುನಾನಕ್ ಕರ್ತಾಪುರ್ ಗುರುದ್ವಾರಕ್ಕೆ ತೆರಳಲು ಮಾರ್ಗವನ್ನು ತೆರೆಯುವಲ್ಲಿ ವಿಫಲವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಚುಗ್ ಹೇಳಿದ್ದಾರೆ.

Follow Us:
Download App:
  • android
  • ios