news
By Suvarna Web Desk | 11:34 AM January 11, 2017
ಸುವರ್ಣ ನ್ಯೂಸ್'ನಲ್ಲಿ ವರದಿ ಪ್ರಸಾರವಾದ ನಂತರ ಸಭೆ ರದ್ದುಗೊಳಿಸಿದ ನಾಯ್ಕ್

Highlights

ಡ್ರೀಮ್ಸ್ಜಿಕೆ, ಟಿಜಿಎಸ್ಕನ್ಸ್ಟ್ರಕ್ಷನ್ಸ್​, ಸೆಂಡ್ಮೈ ಗಿಫ್ಟ್​, ಪೂಜಾ ಡಾಟ್ಕಾಂ ಹೀಗೆ ಚೆಂದ ಚೆಂದದ ಹೆಸರಿಟ್ಟುಕೊಂಡು ಜನರ ಕಣ್ಣಿಗೆ ಮಣ್ಣೆರಚಿದವನ ಹೆಸರು ಸಚಿನ್ನಾಯ್ಕ್​. ಈತ ಇಷ್ಟೇ ಅಲ್ಲ ಚೆಂದ ಚೆಂದದ ಹುಡುಗಿಯರನ್ನು ಕೆಲಸಕ್ಕಿಟ್ಟುಕೊಂಡು ತನ್ನ ವಂಚನೆಗೆ ಗ್ಲಾಮರ್ಟಚ್ಕೊಟ್ಟಿದ್ದ.

ಬೆಂಗಳೂರು(ಜ.11):ಸಾವಿರಾರು ಜನರಿಗೆ ವಂಚನೆ ಮಾಡಿದ ಡ್ರೀಮ್ಸ್ ಜಿಕೆ ಕಂಪನಿ ಮಾಲೀಕ ಸಚಿನ್ ನಾಯಕ್ ವಿರುದ್ಧ ದೂರು ದಾಖಲಾಗಿದೆ. ಸಚಿನ್ ನಾಯ್ಕ್ ಡ್ರೀಮ್ಸ್ ಜಿಕೆ ಕಂಪನಿ ಎದುರು ಸಾರ್ವಜನಿಕರು ಜಮಾಯಿಸಿದ್ದಾರೆ. ಇವತ್ತು ಹಣ ಕೊಟ್ಟು ಮೋಸ ಹೋದವರನ್ನು ಸಚಿನ್ ನಾಯಕ್​ ಸಭೆ ಕರೆದಿದ್ದರು. ಸುವರ್ಣ ನ್ಯೂಸ್​ನಲ್ಲಿ ವರದಿ ಪ್ರಸಾರವಾದ ನಂತರ ಸಚಿನ್ ನಾಯ್ಕ್ ಸಭೆಗೆ ಗೈರಾಗಿದ್ದಾರೆ. ವರದಿ ಪ್ರಸಾರ ನಂತರ ಸಭೆಯನ್ನು ರದ್ದು ಪಡಿಸಿದ್ದಾರೆ.

ಡ್ರೀಮ್ಸ್​ ಜಿಕೆ, ಟಿಜಿಎಸ್​ ಕನ್ಸ್​ಟ್ರಕ್ಷನ್ಸ್​, ಸೆಂಡ್​ ಮೈ ಗಿಫ್ಟ್​, ಪೂಜಾ ಡಾಟ್​ ಕಾಂ ಹೀಗೆ ಚೆಂದ ಚೆಂದದ ಹೆಸರಿಟ್ಟುಕೊಂಡು ಜನರ ಕಣ್ಣಿಗೆ ಮಣ್ಣೆರಚಿದವನ ಹೆಸರು ಸಚಿನ್​ ನಾಯ್ಕ್​. ಈತ ಇಷ್ಟೇ ಅಲ್ಲ ಚೆಂದ ಚೆಂದದ ಹುಡುಗಿಯರನ್ನು ಕೆಲಸಕ್ಕಿಟ್ಟುಕೊಂಡು ತನ್ನ ವಂಚನೆಗೆ ಗ್ಲಾಮರ್​ ಟಚ್​ ಕೊಟ್ಟಿದ್ದ. ಫ್ಲಾಟ್'​ಗಳನ್ನು ಕಟ್ಟಿಸಿಕೊಡುತ್ತೇನೆ ಎಂದು ನಂಬಿಸಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರಿಂದ ಕೋಟ್ಯಂತರ  ರೂಪಾಯಿ ಹಣ ಸಂಗ್ರಹಿಸಿ ವಂಚಿಸಿದ್ದಾನೆ. ಫ್ಲಾಟ್​ ನಿರ್ಮಾಣ ಮಾಡುವ ಮುನ್ನವೇ ಮಾರುಕಟ್ಟೆಯ ಅರ್ಧ ಬೆಲೆಗೆ ಫ್ಲಾಟ್'​ಗಳನ್ನು ಕೊಡುತ್ತೇವೆ ಅಂತ ನಂಬಿಸಿ ಕೊಟ್ಯಾಂತರ ಹಣ ಸಂಗ್ರಹಿಸಿ ಒಬ್ಬನಿಗೂ ಒಂದು ಫ್ಲಾಟ್ ಕೊಟ್ಟಿಲ್ಲ. ಎಸಿ ಕಾರ್​'ನಲ್ಲಿ ಅಪಾರ್ಟ್​ಮೆಂಟ್​ ನಿರ್ಮಾಣದ ಸ್ಥಳಕ್ಕೆ ಜನರನ್ನು ಕರೆದೊಯ್ದು ಲಕ್ಷಾಂತರ ರೂಪಾಯಿ ಪೀಕಿದ್ದಾನೆ.

ಫ್ಲಾಟ್​'ಗಳನ್ನು ಕೊಡುವುದಾಗಿ ಜನರನ್ನು ನಂಬಿಸಿದ್ದ ಈ ಸಚಿನ್​ ನಾಯ್ಕ್​, ದಾಖಲೆಗಳಲ್ಲೆಲ್ಲೂ  ತನ್ನ ಹೆಸರಿಲ್ಲದಂತೆ ನೋಡಿಕೊಂಡಿದ್ದಾನೆ. ತನ್ನ ಪತ್ನಿಯ ಹೆಸರನ್ನು ಬದಲಾಯಿಸಿ ಕಾನೂನು ಕುಣಿಕೆಗೆ ಸಿಗದಂತೆ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾನೆ. ಆರಂಭದಲ್ಲಿ ಈತನ ಉಪಚಾರ ಕಂಡು ಹಿ ಈಸ್ ಸ್ಮಾರ್ಟ್​ ಅಂದುಕೊಂಡಿದ್ದ ಜನ ಇದೀಗ ಹೀ ಈಸ್ ​ಮೋರ್ ಡೇಂಜರಸ್​ ಅನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅಪಾರ್ಟ್​ಮೆಂಟ್​ಗಳನ್ನು ಕಟ್ಟಲು ಮುಂದಾಗಿದ್ದ  ಜಾಗಗಳನ್ನೂ ಮಾರಾಟ ಮಾಡಿ ಈಗ ನಾಪತ್ತೆಯಾಗಿದ್ದಾನೆ. ಸದ್ಯ ಸಚಿನ್ ನಾಯಕ್​, ಮುಂಬೈನಲ್ಲಿ  ತಲೆಮರೆಸಿಕೊಂಡಿದ್ದಾನೆ ಅನ್ನೋ ಮಾಹಿತಿಯನ್ನ  ಪೊಲೀಸರೇ ಹೇಳುತ್ತಿದ್ದರೂ, ಆತನ ವಿರುದ್ದದ ಕ್ರಮಕ್ಕೆ ಮುಂದಾಗದಿರುವುದು ಪೊಲೀಸರ ವೈಫಲ್ಯಕ್ಕೆ ಸಾಕ್ಷಿಯಾಗಿದೆ...! 

 

Show Full Article


Recommended


bottom right ad