Asianet Suvarna News Asianet Suvarna News

ದ್ರೋಣನ ಸಾವಿನ ಬೆನ್ನಲ್ಲೇ ಮತ್ತೊಂದು ಆನೆ ಸಾವು

ದ್ರೋಣನ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್| ಅರಣ್ಯ ಇಲಾಖೆ ಕಾಟಚಾರದ ಚಿಕಿತ್ಸೆಗೆ ಮತ್ತೊಂದು ಕಾಡಾನೆ ಸಾವು!| ಮೈಸೂರಿನ ಆನೆ ಚೌಕೂರು ಅರಣ್ಯ ವ್ಯಾಪ್ತಿಯಲ್ಲಿ ಸಾವು| ನಿತ್ರಾಣಗೊಂಡು ಸಾವನ್ನೊಪ್ಪಿರುವುದಾಗಿ ಅರಣ್ಯ ಇಲಾಖೆ‌ ಸ್ಪಷ್ಟನೆ

After Dasara Elephant Drona Another Wild Elephant Dies
Author
Bangalore, First Published Apr 28, 2019, 12:16 PM IST

ಮೈಸೂರು[ಏ.28]: ದ್ರೋಣನ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್ ಬಂದೆರಗಿದೆ. ಅರಣ್ಯ ಇಲಾಖೆ ಕಾಟಚಾರದ ಚಿಕಿತ್ಸೆಗೆ ಮತ್ತೊಂದು ಕಾಡಾನೆ ಸಾವನ್ನಪ್ಪಿದೆ. 

ಮೈಸೂರಿನ 45 ವರ್ಷದ ಹೆಣ್ಣಾನೆ ಚೌಕೂರು ಅರಣ್ಯ ವ್ಯಾಪ್ತಿಯಲ್ಲಿ ಸಾವನ್ನಪ್ಪಿದೆ. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಅರಣ್ಯಾಧಿಕಾರಿಗಳು ಕಾಡಾನೆ ನಿತ್ರಾಣಗೊಂಡು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. 

ಮೈಸೂರು ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ದ್ರೋಣ ಇನ್ನಿಲ್ಲ

ಆದರೆ ಸ್ಥಳೀಯರು, ಪ್ರಾಣಿಪ್ರಿಯರಿಂದ ಈ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳು ಆನೆಗೆ ಸರಿಯಾದ ಚಿಕಿತ್ಸೆ ನೀಡಿಲ್ಲ, ಅಲ್ಲದೇ ದ್ರೋಣ ಆನೆ ಸಾವಿನಲ್ಲೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದ್ರೋಣನ ಸಾವಿನ ಘಟನೆ ಮಾಸುವ ಮುನ್ನವೇ ಮತ್ತೊಂದು ಕಾಡಾನೆ ಸಾವಮನ್ನಪ್ಪಿರುವುದು ದುರಂತವೇ ಸರಿ.

Follow Us:
Download App:
  • android
  • ios