Asianet Suvarna News Asianet Suvarna News

ಲೋಕಸಭಾ ಚುನಾವಣೆಗೆ ಪ್ರಕಾಶ್ ರೈ ಸ್ಪರ್ಧೆ!: ಯಾವ ಪಕ್ಷ, ಕ್ಷೇತ್ರದಿಂದ ಸ್ಪರ್ಧಿಸ್ತಾರೆ?

2018ಕ್ಕೆ ಗುಡ್ ಬೈ ಹೇಳಿ 2019ನ್ನು ಸ್ವಾಗತಿಸಿದ್ದೇವೆ. ಎಲ್ಲರೂ ನೂತನ ವರ್ಷಾಚರಣೆಯ ಸಂಭ್ರಮದಲ್ಲಿದ್ದಾರೆ. ಹೀಗಿರುವಾಗ ಬಹುಭಾಷಾ ನಟ ಪ್ರಕಾಶ್ ರೈ ಕೂಡಾ ಹೊಸ ಹೆಜ್ಜೆಯೊಂದನ್ನಿಟ್ಟಿದ್ದಾರೆ. ತಾನು ರಾಜಕೀಯಕ್ಕೆ ಎಂಟ್ರಿ ಕೊಡುವುದು ಖಚಿತವೆಂದು ಟ್ವೀಟ್ ಮಾಡಿದ್ದಾರೆ. ಹಾಗಾಧ್ರೆ ಅವರು ಯಾವ ಪಕ್ಷದಿಂದ, ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರೆ? ಇಲ್ಲಿದೆ ವಿವರ

Actor Prakash Rai Will Be contesting for Lok Sabha Election
Author
Bangalore, First Published Jan 1, 2019, 8:42 AM IST

ಬೆಂಗಳೂರು[ಜ.01]: ಬಹುಭಾಷಾ ನಟ ಪ್ರಕಾಶ್ ರೈ ಹೊಸ ವರ್ಷಕ್ಕೆ ಹೊಸ ಹೆಜ್ಜೆ ಇರಿಸಿದ್ದು, ತಾನು ರಾಜಕೀಯಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ. ಹೊಸ ವರ್ಷದ ಶುಭಾಷಯಗಳನ್ನು ಕೋರಿ ಮಾಡಿರುವ ಟ್ವೀಟ್‌ನಲ್ಲಿ ತಮ್ಮ ಈ ಹೊಸ ನಿರ್ಧಾರವನ್ನು ಪ್ರಕಟಿಸಿದ್ದಾರೆ.

"

ಹೌದು ಇಂದು ಮಧ್ಯರಾತ್ರಿ 12 ಗಂಟೆಗೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ 'ಎಲ್ಲರಿಗೂ ಹೊಸ ವರ್ಷದ ಹರ್ದಿಕ ಶುಭಾಷಯಗಳು. ಹೊಸ ಆರಂಭ, ಹೊಸ ಜವಾಬ್ದಾರಿ... ನಿಮ್ಮ ಬೆಂಬಲದೊಂದಿಗೆ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಮಾಹಿತಿಯನ್ನು ಶೀಘ್ರದಲ್ಲೇ ನೀಡುತ್ತೇನೆ. ಈ ಬಾರಿ ಜನರ ಸರ್ಕಾರ... #citizensvoice#justasking ಲೋಕಸಭೆಯಲ್ಲೂ ನನ್ನ ಸಮರ ಮುಂದುವರೆಯಲಿದೆ' ಎಂದಿದ್ದಾರೆ.

ಈ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಬಳಿಕ ನಟ ಪ್ರಕಾಶ್ ರೈ ನೀಡುತ್ತಿದ್ದ ಹೇಳಿಕೆಗಳು ಹಾಗೂ ಅವರ ನಡೆ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದವು. ಹೀಗಿದ್ದರೂ ಪ್ರಕಾಶ್ ರೈ ಮಾತ್ರ ಇವೆಲ್ಲವನ್ನೂ ಅಲ್ಲಗಳೆದಿದ್ದರು. ಆದರೀಗ ಹೊಸ ವರ್ಷದ ಹೊಸ್ತಿಲಲ್ಲಿ ತಮ್ಮ ಹೊಸ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಸದ್ಯ ಅವರು ಬೆಂಗಳೂರು ಕೇಂದ್ರದಿಂದ ಮಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆಯಾದರೂ, ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

Follow Us:
Download App:
  • android
  • ios