Asianet Suvarna News Asianet Suvarna News

ಭಾರತಕ್ಕೆ  ಶೀಘ್ರ 5G ತಂತ್ರಜ್ಞಾನ

4G ತಂತ್ರಜ್ಞಾನದಲ್ಲಿ ಲಭ್ಯವಾಗುವ ವಿವಿಧ ವೇಗದ ಸೇವೆಗಳಿಂದ ಭಾರತೀಯರು ಸಂತುಷ್ಟರಾಗಿರುವ ಹೊತ್ತಿನಲ್ಲೇ, ಎರಿಕ್ಸ್‌ಸನ್ ಕಂಪನಿ ಭಾರತದಲ್ಲಿ 5G ತಂತ್ರಜ್ಞಾನವನ್ನು ನೇರ ಪ್ರದರ್ಶನದ ಮೂಲಕ ಅನಾವರಣಗೊಳಿಸಿದೆ.

5G Technology Soon In India

ನವದೆಹಲಿ: 4G ತಂತ್ರಜ್ಞಾನದಲ್ಲಿ ಲಭ್ಯವಾಗುವ ವಿವಿಧ ವೇಗದ ಸೇವೆಗಳಿಂದ ಭಾರತೀಯರು ಸಂತುಷ್ಟರಾಗಿರುವ ಹೊತ್ತಿನಲ್ಲೇ, ಎರಿಕ್ಸ್‌ಸನ್ ಕಂಪನಿ ಭಾರತದಲ್ಲಿ 5G ತಂತ್ರಜ್ಞಾನವನ್ನು ನೇರ ಪ್ರದರ್ಶನದ ಮೂಲಕ ಅನಾವರಣಗೊಳಿಸಿದೆ.

ಕಳೆದ ಶುಕ್ರವಾರ ಸ್ವೀಡನ್ ಮೂಲದ ಎರಿಕ್ಸ್’ಸನ್ ಕಂಪನಿ 5G ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಈ ವೇಳೆ ಪ್ರತಿ ಸೆಕೆಂಡ್‌ಗೆ 5.75 ಗಿಗಾ ಬೈಟ್ಸ್ ವೇಗದಲ್ಲಿ ದತ್ತಾಂಶ ವರ್ಗಾವಣೆಯಾಗಿದೆ.

ಅಂದರೆ 5GBಯ ಚಲನಚಿತ್ರವೊಂದನ್ನು ಕೇವಲ 1 ಸೆಕೆಂಡ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.

ಅಂದರೆ 4G ಎಲ್‌ಟಿಇ ವ್ಯವಸ್ಥೆಗಿಂತ 100 ಪಟ್ಟು ಹೆಚ್ಚಿನ ವೇಗ 5G ತಂತ್ರಜ್ಞಾನದಲ್ಲಿ ಸಾಧ್ಯವಾಗಲಿದೆ. ಹಾಲಿ ಇರುವ 2G, 3G ಮತ್ತು 4G ವ್ಯವಸ್ಥೆಯಲ್ಲಿ 5G ತಂತ್ರಜ್ಞಾನ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಹಾಲಿ ಇರುವ ತಂತ್ರಜ್ಞಾನವನ್ನೇ ಸಣ್ಣ ಬದಲಾವಣೆಯೊಂದಿಗೆ ಹೇಗೆ ಹೊಸ ವ್ಯವಸ್ಥೆಗೆ ಹೇಗೆ ಮಾರ್ಪಾಡು ಮಾಡಬಹುದು ಎಂಬುದರ ಬಗ್ಗೆ ಸಂಶೋಧನೆ ನಡೆಸುತ್ತಿರುವುದಾಗಿ ಎರಿಕ್ಸ್‌ಸನ್ ಹೇಳಿದೆ.

ಎರಿಕ್ಸ್‌ಸನ್ ಕಂಪನಿ ಭಾರತದಲ್ಲಿ ಏರ್‌ಟೆಲ್ ಜೊತೆಗೆ 5G ಸೇವೆ ನೀಡುವ ಒಪ್ಪಂದ ಮಾಡಿಕೊಂಡಿದೆ.

Follow Us:
Download App:
  • android
  • ios