Asianet Suvarna News Asianet Suvarna News

ಆಪರೇಶನ್‌ಗೆ ಅವಕಾಶ ಇಲ್ಲ, ‘ಕೈ’ಗೆ ಆನೆ ಬೆಂಬಲ..ಬಲಾಬಲ ಏನು?

ಎಲ್ಲರನ್ನು ಕಾಡುತ್ತಿದ್ದ, ರಾತ್ರಿಯೆಲ್ಲಾ ರಾಜಕಾರಣದ ಬೆಳವಣಿಗೆಗೆ ಕಾರಣವಾಗಿದ್ದ ಮಧ್ಯಪ್ರದೇಶದ ಫಲಿತಾಂಶ ಹೊರಬಂದಿದೆ. ಬಹುಮತಕ್ಕೆ ಕಡಿಮೆ ಇದ್ದ 2 ಸ್ಥಾನಗಳ ತಲೆಬಿಸಿಯೂ ಮಾಯವಾಗಿದ್ದು ಮಾಯಾವತಿ ಅವರ ಬಿಎಸ್‌ಪಿ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದಾರೆ.

5 State Election Result 2018 Congress short of majority by 2 seats in Madhya Pradesh
Author
Bengaluru, First Published Dec 12, 2018, 10:49 AM IST

ಬೆಂಗಳೂರು[ಡಿ.12]  ರಾಜಕೀಯ ಪಕ್ಷಗಳ ಬಿಪಿ ಹೆಚ್ಚಿಸಿದ್ದ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ಹೊರಬಂದಿದ್ದು, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಯಾರಿಗೂ ಸ್ಷಷ್ಟ ಬಹುಮತ ಸಿಕ್ಕಿಲ್ಲ.

ಕಾಂಗ್ರೆಸ್ 114, ಬಿಜೆಪಿ 109, ಬಿಎಸ್‍ಪಿ 2, ಎಸ್‍ಪಿ 1, ಪಕ್ಷೇತರ 4 ಅಭ್ಯರ್ಥಿಗಳು ಗೆದ್ದಿದ್ದಾರೆ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 116 ಸ್ಥಾನ ಬೇಕಿದೆ.  ಬಿಎಸ್‌ಪಿ ಬೆಂಬಲ ನೀಡುವ ಸಾಧ್ಯತೆ ಹೆಚ್ಚಾಗಿದ್ದು ಕಾಂಗ್ರೆಸ್ ಸರ್ಕಾರ ರಚಿಸಲಿದೆ.

ಈಗ ಯಾವ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರ? ಇಲ್ಲಿದೆ ವಿವರ

ಒಟ್ಟಿನಲ್ಲಿ ಕ್ಷಣಕ್ಷಣಕ್ಕೂ ಬದಲಾದ ಫಲಿತಾಂಶ, ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ಪೈಪೋಟಿ, ನಿರೀಕ್ಷಿಸದ ಅಚ್ಚರಿ ಬೆಳವಣಿಗೆಗೆ ಮಧ್ಯಪ್ರದೇಶ ಮತ ಎಣಿಕೆ ಸಾಕ್ಷಿಯಾಗಿತ್ತು. ಸದ್ಯ ಆಪರೇಷನ್ ಕಮಲ ಸದ್ದು ಕೇಳಿಬಂದಿದ್ದು, ಕೇಂದ್ರ ಸಚಿವ ತೋಮರ್ ಭೋಪಾಲ್‍ಗೆ ಭೇಟಿ ನೀಡಿದ್ದರು. ಆದರೆ ಇದೀಗ್ ಬಿಎಸ್‌ಪಿ ಬೆಂಬಲ ನೀಡಿರುವುದರಿಂದ ಕಾಂಗ್ರೆಸ್ ಸರಕಾರ ರಚಿಸುವುದು ಪಕ್ಕಾ ಆಗಿದೆ.

 

Follow Us:
Download App:
  • android
  • ios