Asianet Suvarna News Asianet Suvarna News

ಇಂದಿನಿಂದ ಮೆಟ್ರೋ 2 ಬಾಗಿಲು ಮಹಿಳೆಯರಿಗೆ

ನಮ್ಮ ಮೆಟ್ರೋ’ ರೈಲು ಮಹಿಳಾ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ.  ಸೋಮವಾರದಿಂದ ಮೆಟ್ರೋ ರೈಲಿನ ಮುಂಭಾಗದ ಎರಡು ದ್ವಾರಗಳು ಮಹಿಳೆಯರಿಗಾಗಿಯೇ  ಮೀಸಲಿರಿಸಿದ್ದು, ಆ ದ್ವಾರಗಳನ್ನು ಪುರು ಷರು ಬಳಸುವುದನ್ನು ನಿರ್ಬಂಧಿಸಿದೆ.

2 door reserve for women in Namma Metro

ಬೆಂಗಳೂರು (ಫೆ.17): ನಮ್ಮ ಮೆಟ್ರೋ’ ರೈಲು ಮಹಿಳಾ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ.  ಸೋಮವಾರದಿಂದ ಮೆಟ್ರೋ ರೈಲಿನ ಮುಂಭಾಗದ ಎರಡು ದ್ವಾರಗಳು ಮಹಿಳೆಯರಿಗಾಗಿಯೇ  ಮೀಸಲಿರಿಸಿದ್ದು, ಆ ದ್ವಾರಗಳನ್ನು ಪುರು ಷರು ಬಳಸುವುದನ್ನು ನಿರ್ಬಂಧಿಸಿದೆ.

ಜನದಟ್ಟಣೆ ಇರುವ ಸಂದರ್ಭದಲ್ಲಿ ಪುರುಷರೊಂದಿಗೆ ಪ್ರಯಾಣ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಅಳವಡಿಸಬೇಕು ಮಹಿಳಾ ಪ್ರಯಾಣಿಕರಿಂದ ಬೇಡಿಕೆಯಿತ್ತು. ಅದರಂತೆ ಪ್ರತ್ಯೇಕ ಬೋಗಿ ನೀಡುವ ಭರವಸೆಯನ್ನು ಬಿಎಂಆರ್ ಸಿಎಲ್ ನೀಡಿತ್ತು. ಈ ಭರವಸೆ ಈಡೇರಿಸಲು ಇನ್ನೂ ಕೆಲಕಾಲ ಆಗುವ ಹಿನ್ನೆಲೆಯಲ್ಲಿ ಸಂಸ್ಥೆಯು ಸೋಮವಾರದಿಂದ ಮೆಟ್ರೋ ರೈಲಿನ ಮುಂದಿನ ಎರಡು ದ್ವಾರಗಳನ್ನು ಮಹಿಳೆಯರ ಬಳಕೆಗೆ ಮೀಸಲಿಟ್ಟಿದೆ.

ಈ ನಿಯಮವು ಇಂದಿನಿಂದ ರಿಂದ ಪೀಕ್ ಅವರ್ಸ್‌ (ಹೆಚ್ಚು ಜನ ದಟ್ಟಣೆ ಇರುವ ಸಂದರ್ಭ)ಗಳಲ್ಲಿ ಈ ನಿಯಮ ಜಾರಿಯಾಗುತ್ತಿದೆ. ಈ ನಿಯಮದ ಪ್ರಕಾರ ಪ್ರತಿ ದಿನ ಬೆಳಗ್ಗೆ 9 ರಿಂದ 11.30, ಸಂಜೆ 5.30 ರಿಂದ 7.30 ರವರೆಗೆ ಚಾಲಕರ ಹಿಂಬದಿಯ ಬೋಗಿಯ ಎರಡು ದ್ವಾರಗಳು ಮಹಿಳೆಯರಿಗೆ ಮಾತ್ರ ಮೀಸಲಿರಲಿದೆ. ಪ್ರಸ್ತುತ ಪ್ರಾಯೋಗಿಕವಾಗಿ ಈ ನಿಯಮವನ್ನು ಜಾರಿ ಮಾಡುತ್ತಿದ್ದು, ಸಾರ್ವಜನಿಕರ ಅಭಿಪ್ರಾಯಗಳ ಆಧಾರದಲ್ಲಿ ಮುಂದುವರಿಸುವುದರ ಕುರಿತು
ಚಿಂತನೆ ನಡೆಸಲಾಗುವುದು. ಪ್ರತಿನಿತ್ಯ 3.6 ರಿಂದ 3.7 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಸಾಕಷ್ಟು ಮಹಿಳಾ ಪ್ರಯಾಣಿಕರು ನಮಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿಯಮ ಜಾರಿ ಮಾಡಲಾಗುತ್ತದೆ ಎಂದು ಬಿಎಂಆರ್ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios