Asianet Suvarna News Asianet Suvarna News

ಮೋದಿ ಉಡುಗೊರೆಗಳ ಮಾರಾಟ!: ನೀವೂ ಖರೀದಿಸ್ಬೇಕಾ? ಹೀಗೆ ಮಾಡಿ

ದೆಹಲಿಯಲ್ಲಿ ಮೋದಿ ಉಡುಗೊರೆಗಳ ಮಾರಾಟ!| ಇದರಿಂದ ಬಂದ ಹಣ ನಮಾಮಿ ಗಂಗಾ ಯೋಜನೆಗೆ

1800 gifts mementos received by PM Narendra Modi go under hammer in 2 day event
Author
New Delhi, First Published Jan 28, 2019, 8:53 AM IST

ನವದೆಹಲಿ[ಜ.28]: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳ ಹರಾಜು ಪ್ರಕ್ರಿಯೆಯು ಇಲ್ಲಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌(ಎನ್‌ಜಿಎಂಎ)ಯಲ್ಲಿ ಭಾನುವಾರ (ಜ.28-ಜ.29) ಆರಂಭವಾಗಿದೆ. ಉಡುಗೊರೆಗಳ ಹರಾಜಿನಿಂದ ಬರುವ ಹಣವನ್ನು ಗಂಗಾ ನದಿ ಶುಚಿತ್ವಕ್ಕೆ ರೂಪಿಸಲಾಗಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ನಮಾಮಿ ಗಂಗೆ’ ಯೋಜನೆಗೆ ಬಳಸಲಾಗುತ್ತದೆ.

ಜ.27 ಮತ್ತು ಜ.28ರಂದು ಮ್ಯೂಸಿಯಂನಲ್ಲೇ ಹರಾಜು ಪ್ರಕ್ರಿಯೆ ನಡೆಯಲಿದೆ. ಬಳಿಕ 2 ದಿನಗಳ ಕಾಲ ಆನ್‌ಲೈನ್‌ ಮೂಲಕವೂ ಹರಾಜು ನಡೆಸಲಾಗುತ್ತದೆ. ಉಡುಗೊರೆಗಳನ್ನು https://pmmementos.gov.in/ ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆಯು ಬೆಲೆ 100 ರು.ಯಿಂದ 30000 ರು.ವರೆಗೂ ನಿಗದಿಯಾಗಿದ್ದು, ಸಾರ್ವಜನಿಕರು ಖರೀದಿಸಬಹುದಾಗಿದೆ. ಖರೀದಿಸಬಹುದಾಗಿದೆ.

ಬಂಗಾರ, ಲೋಟ, ಬಟ್ಟೆಗಳು, ಬೆಳ್ಳಿ, ಸೇರಿದಂತೆ ಇತರ ವಸ್ತುಗಳ ಚಿತ್ರದ ಕೆಳಗೆ ಅವುಗಳ ಕುರಿತು ವಿವರಣೆ ನೀಡಲಾಗಿರುತ್ತದೆ.

Follow Us:
Download App:
  • android
  • ios