Asianet Suvarna News Asianet Suvarna News

ದೀಪಾವಳಿ ಬಂಪರ್ ಗಿಫ್ಟ್; ಮೈಸೂರು-ಹೈದರಾಬಾದ್ ವಿಮಾನ ಸೇವೆ ಆರಂಭ!

ದೀಪಾವಳಿ ಹಬ್ಬದ ಸಡಗರದಲ್ಲಿ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಮೈಸೂರು -ಹೈದರಾಬಾದ್ ವಿಮಾನ ಸೇವೆ ಆರಂಭಿಸೋ ಮೂಲಕ ಹೊಸ ಇನಿಂಗ್ಸ್ ಆರಂಭಿಸಿದೆ. ನೂತನ ವಿಮಾನ ಸೇವೆ ಹಾಗೂ ಇತರ ಮಾಹಿತಿ ಇಲ್ಲಿದೆ.

Mysore Hyderabad flight service inaugurated by mp pratab simha
Author
Bengaluru, First Published Oct 28, 2019, 12:02 PM IST

ಮೈಸೂರು(ಅ.28): ವಿಮಾನ ಪ್ರಯಾಣಿಕರ ದೀಪಾವಳಿ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ.ಕೇಂದ್ರ ಸರ್ಕಾರದ ಉಡಾನ್(UDAN)ಯೋಜನೆಯಡಿ  ಮೈಸೂರು-ಹೈದರಾಬಾದ್ ವಿಮಾನ ಸೇವೆ ಆರಂಭಗೊಂಡಿದೆ. ವಿಶೇಷ ಅಂದರೆ ವಾರದ ಎಲ್ಲಾ ದಿನಗಳಲ್ಲೂ ಈ ಸೇವೆ ಲಭ್ಯವಿದೆ.

ಇದನ್ನೂ ಓದಿ: ಏಕಾ ಏಕಿ ಬೆಂಕಿ ಹೊತ್ತಿ ಎಟಿಎಂ ಮಶಿನ್ ಸಂಪೂರ್ಣ ಭಸ್ಮ

ದೀಪಾವಳಿ ಹಬ್ಬದ ದಿನ ಮೈಸೂರು-ಹೈದರಾಬಾದ್ ವಿಮಾನ ಸೇವೆ ಆರಂಭಗೊಂಡಿತು. ಸಂಸದ ಪ್ರತಾಪ್ ಸಿಂಹ ನೂತನ ಏರ್ ಬಸ್‌ ವೆಲ್ಕಮ್ ಮಾಡಿದರು. ಬಳಿಕ ವಿಮಾನ ಸೇವೆಗೆ ಚಾಲನೆ ನೀಡಿದರು. ಪ್ರತಿ ದಿನ  ಇಂಡಿಗೂ ಎಟಿಆರ್ 72 ವಿಮಾನ ಮೈಸೂರಿನಂದ ಹೈದರಾಬಾದ್ ಹಾಗೂ ಹೈದರಾಬಾದ್ ನಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿದೆ.

 

ಮೈಸೂರು-ಹೈದರಾಬಾದ್ ವಿಮಾನ ಸೇವೆ ವಿವರ:

  • ಪ್ರತಿ ನಿತ್ಯ ಹೈದರಾಬಾದ್‌ನಿಂದ ಸಂಜೆ 4.55ಕ್ಕೆ ಹೊರಟು, 6.40ಕ್ಕೆ ಮೈಸೂರು ತಲುಪಲಿದೆ 
  • ಮೈಸೂರಿನಿಂದ ಸಂಜೆ 7.40ಕ್ಕೆ ಹೊರಟು, ರಾತ್ರಿ 9.15 ಸುಮಾರಿಗೆ ಹೈದರಾಬಾದ್ ತಲುಪಲಿದೆ.
  • ಪ್ರತೀ ಮಂಗಳವಾರ ಹೈದರಾಬಾದ್ ನಿಂದ ಬೆಳಗ್ಗೆ 11.20ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಮೈಸೂರಿಗೆ ಬರಲಿದೆ
  • ಬಳಿಕ ಮಧ್ಯಾಹ್ನ 1.30ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 3.10ಸುಮಾರಿಗೆ ಹೈದರಾಬಾದ್ ಗೆ ತಲುಪಲಿದೆ

 

ಮೈಸೂರು-ಹೈದರಾಬಾದ್ ಸೇವೆ ನೀಡುವ ಇಂಡಿಗೂ ಎಟಿಆರ್ 72 ವಿಮಾನ  ಒಟ್ಟು 70 ಪ್ರಯಾಣಿಕರನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಹೊಂದಿದೆ. ಪ್ರಯಾಣದ ವೆಚ್ಚ ಒಬ್ಬರಿಗೆ 2,650 ರೂಪಾಯಿ.

ಇದನ್ನೂ ಓದಿ: ಮೈಸೂರು: ಹಾರಂಗಿ ನಾಲೆ ಮೂಲಕ ಕೆರೆಕಟ್ಟೆಗಳಿಗೆ ನೀರು

ಮುಂದಿನ ದಿನಗಳಲ್ಲಿ ಮೈಸೂರಿನಿಂದ ಶಿರಡಿ, ಮಂಗಳೂರು, ತಿರುಪತಿಗೂ ವಿಮಾನ ಸೇವೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ದರ್ಜೆಯ ಸೇವೆ ನೀಡಲಿದೆ ಎಂದು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಮಂಜುನಾಥ್ ಹೇಳಿದರು.

Follow Us:
Download App:
  • android
  • ios