Asianet Suvarna News Asianet Suvarna News

ಕೈ- ಕುತ್ತಿಗೆ ನಟಿಕೆ ಮುರಿಯುವುದು ಸರಿಯೇ?

ಮನಸ್ಸಿಗೆ ಏನೋ ತಳಮಳ. ಟೆನ್ಷನ್. ಸ್ಟಾರ್ಟ್ ಆಗುತ್ತೆ, ಕೈ ಬೆರಳುಗಳ ನಟಿಗೆ ತೆಗೆಯಲು. ದೇಹದಲ್ಲಿಯೂ ಅಲ್ಲಿ ಇಲ್ಲಿ ನೋವು ಕಂಡಾಗ ನಟಿಗೆ (ನಟಿಕೆ) ತೆಗೆಯುತ್ತೇವೆ. ಆಪ್ತರು ಚೆಂದ ಕಂಡಾಗಲೂ ನಟಿಗೆ ತೆಗೆದು ದೃಷ್ಟಿ ತೆಗೆಯುತ್ತೇವೆ. ಅಷ್ಟಕ್ಕೂ ಈ ಅಭ್ಯಾಸ ಒಳ್ಳೆಯದಾ?

why knuckles breaking is dangerous
Author
Bengaluru, First Published Dec 15, 2018, 3:22 PM IST

ಹೆಚ್ಚೊತ್ತು ಕೆಲಸ ಮಾಡಿದಾಗ ಕೈ ಬೆರಳ ನಟಿಗೆ ಮುರಿಯುವುದು ಸಹಜ, ಎಲ್ಲ ಭಾರವನ್ನು ಒಂದೇ ಸಲ ತೆಗೆದು ಹಾಕಿದಷ್ಟು ಈ ಕಾರ್ಯ ನೆಮ್ಮದಿ ಕೊಡುತ್ತದೆ. ಯಾವುದೋ ವಾದ್ಯದಿಂದ ಹೊರಡಿದ ಶಬ್ಧ ಮನಸ್ಸಿಗೆ ಮುದ ನೀಡಿದರೆ, ಸಮಸ್ಯೆಯನ್ನೂ ತಂದಿಡುತ್ತೆ ಎಂಬುವುದು ಗೊತ್ತಾ? ಓದಿ ಈ ಸುದ್ದಿಯನ್ನು...

ನಟಿಗೆ ಶಬ್ಧ ಏಕೆ ಬರುತ್ತದೆ? ಕೈ ಬೆರಳುಗಳ ಸಂಧಿಯಲ್ಲಿ 'ಪಾಕೆಟ್ ಆಫ್ ಗ್ಯಾಸ್' ಜಾಗದಲ್ಲಿ ಗಾಳಿ ತುಂಬಿರುತ್ತದೆ. ನಟಿಗೆ ಮುರಿದಾಕ್ಷಣ ಲಟ ಲಟ ಎಂಬ ಸದ್ದು ಹೊರಡಿಸುತ್ತದೆ ಇದೆ. ಕೈ ಹಾಗೂ ಕಾಲು ಬೆರಳುಗಳ ನಟಿಗೆ ತೆಗೆದರೆ ಏನೂ ತೊಂದರೆಯಿಲ್ಲ. ಆದರೆ.....ಕುತ್ತಿಗೆ ಭಾಗದಲ್ಲಿ ಮಾಡುವುದು ಸರಿಯಲ್ಲ. ಏಕೆಂದರೆ ನಟಿಗೆ ತೆಗೆದ ನಂತರ ಬೆನ್ನು ಭಾಗದ ಸ್ನಾಯು ಮೇಲೆ ಒತ್ತಡ ಹೇರಿದಂತಾಗುತ್ತದೆ. ಇದರಿಂದ ಕುತ್ತಿಗೆ ಉಳುಕುವುದು ಅಥವಾ ಸೊಂಟ ನೋವು ಕಾಣಿಸುವ ಸಾಧ್ಯತೆ ಇರುತ್ತದೆ.

why knuckles breaking is dangerous

ಕೂತ ಜಾಗದಲ್ಲಿಯೇ ಹೆಚ್ಚು ಸಮಯ ಕಳಯುವವರಲ್ಲಿ ಇಂಥ ಲಕ್ಷಣ ಕಾಣಿಸುತ್ತದೆ. ಕತ್ತು ನೋವೆಂದು ಕುತ್ತಿಗೆ ಭಾಗದಲ್ಲಿ ನಟಿಗೆ ತೆಗೆಯುವಾಗ ಮೆದುಳಿನ ಮೇಲೂ ಭೀಕರ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಇಂಥದ್ದನ್ನು ಮಾಡದಿದ್ದರೇ ಒಳಿತು.

ನೆಟಿಕೆ ಬಗ್ಗೆ ನಿಮಗೆಷ್ಟು ಗೊತ್ತು

ರಿಲ್ಯಾಕ್ಸ್ ಆಗಬೇಕೆಂದರೆ ಕೂತ ಜಾಗದಿಂದ ಎದ್ದು ಓಡಾಡಿ. ಕೈ-ಕಾಲುಗಳನ್ನು ಅಲ್ಲಾಡಿಸಿ. ಸುದೀರ್ಘ ಉಸಿರೆಳೆದುಕೊಂಡು ಬಿಡಿ. ಪ್ರಾಣಾಯಾಮ ಮಾಡಿ. ಇವೆಲ್ಲವೂ ಅಷ್ಟೇ ರಿಲ್ಯಾಕ್ಸ್ ನೀಡುವಂಥ ಕ್ರಿಯೆಗಳಾಗಿದ್ದು, ಪ್ರಾಣಕ್ಕೇ ಕುಂದು ತರುವಂಥ ನಟಿಕೆ ತೆಗೆದುಕೊಳ್ಳಲು ಸುಖಾ ಸುಮ್ಮನೆ ಮುಂದಾಗಬೇಡಿ.

Follow Us:
Download App:
  • android
  • ios