Asianet Suvarna News Asianet Suvarna News

+917574999093 ಇದು ಬ್ಲೂವೇಲ್ ಆಟದ ನಂಬರಂತೆ?

ಆ ಕಡೆಯಿಂದ ಫೋನ್ ಮಾಡಿದವರು ನಿಮ್ಮನ್ನು ಬ್ಲೂವೇಲ್ ಆಟದ ಜಾಲಕ್ಕೆ ಬೀಳಿಸುತ್ತಾರೆ. ದಯವಿಟ್ಟು ನಿಮ್ಮೆಲ್ಲಾ ಸ್ನೇಹಿತರಿಗೆ ಮತ್ತು ಮತ್ತು ವಾಟ್ಸಪ್ ಗ್ರೂಪ್‌ಗಳಿಗೆ ಈ ಸಂದೇಶವನ್ನು ಕಳುಹಿಸಿ ಎಂದು ಮನವಿ ಮಾಡುವ ಪೋಟೋ ಮತ್ತು ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral check news

ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ದೇಶದಲ್ಲಿ ಈಗಾಗಲೇ ಹಲವು ಮಂದಿಯನ್ನು ಬಲಿಪಡೆದಿದೆ. ಬ್ಲೂವೇಲ್ ಆಟ ನಿಷೇಧಿಸಲು ಕೂಡ ಸಾಧ್ಯವಾಗುತ್ತಿಲ್ಲ. ಈ ಆಟದ ಲಿಂಕ್ ಅನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಡಲಾಗುತ್ತಿದೆ ಎಂಬ ಅನುಮಾನಗಳಿವೆ. ಈ ಮಧ್ಯೆ ಬ್ಲೂವೇಲ್ ಆಟ ಆಡಿಸುವ ನಂಬರ್ ಎನ್ನಲಾದ ಒಂದು ಫೋನ್ ನಂಬರ್ ವಾಟ್ಸಪ್‌ನಲ್ಲಿ ವೈರಲ್ ಆಗಿದೆ.

+917574999093 ಇದು ಬ್ಲೂವೇಲ್ ಚಾಲೆಂಜ್ ಆಟದ ನಂಬರ್. ಒಂದು ವೇಳೆ ಈ ಫೋನ್ ನಂಬರ್‌ನಿಂದ ನಿಮಗೆ ಕಾಲ್ ಬಂದರೆ ಅದನ್ನು ಸ್ವೀಕರಿಸಲು ಅಥವಾ ಪುನಃ ಕರೆ ಮಾಡಲು ಹೋಗಬೇಡಿ. ಈ ನಂಬರ್ ತುಂಬಾ ಅಪಾಯಕಾರಿ. ಇದನ್ನು ನಿರ್ಲಕ್ಷಿಸಬೇಡಿ. ಕೆಲವು ಮಂದಿ ಈ ನಂಬರ್‌ನಿಂದ ಫೋನ್ ಸ್ವೀಕರಿಸಿ ಅಪಾಯಕ್ಕೆ ಸಿಲುಕಿದ್ದಾರೆ. ಆ ಕಡೆಯಿಂದ ಫೋನ್ ಮಾಡಿದವರು ನಿಮ್ಮನ್ನು ಬ್ಲೂವೇಲ್ ಆಟದ ಜಾಲಕ್ಕೆ ಬೀಳಿಸುತ್ತಾರೆ. ದಯವಿಟ್ಟು ನಿಮ್ಮೆಲ್ಲಾ ಸ್ನೇಹಿತರಿಗೆ ಮತ್ತು ಮತ್ತು ವಾಟ್ಸಪ್ ಗ್ರೂಪ್‌ಗಳಿಗೆ ಈ ಸಂದೇಶವನ್ನು ಕಳುಹಿಸಿ ಎಂದು ಮನವಿ ಮಾಡುವ ಪೋಟೋ ಮತ್ತು ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ, ಈ ಬಗ್ಗೆ ತನಿಖೆ ನಡೆಸಿದ ಸಂದರ್ಭದಲ್ಲಿ ಇದೊಂದು ಭಾರತದ್ದೇ ನಂಬರ್ ನಂಬರ್ ಎಂದು ತಿಳಿದುಬಂದಿದೆ. ಮೊಬೈಲ್ ನಂಬರ್‌ನ ಹೆಸರು ವಿಳಾಸ ತೋರಿಸುವ ಟ್ರೂಕಾಲರ್ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಈ ನಂಬರ್ ಗುಜರಾತಿನ ಯಾವುದೋ ವ್ಯಕ್ತಿಯದ್ದು ಎಂದು ತೋರಿಸಿದೆ. ಅಲ್ಲದೇ ಈ ನಂಬರ್‌ಗೆ ಕಾಲ್ ಮಾಡಿದರೆ ಸ್ವಿಚ್ಡ್ ಆಫ್ ಆಗಿದೆ. ಒಂದು ವೇಳೆ ಭಾರತದ ನಂಬರ್‌ನಿಂದ ಬ್ಲೂವೇಲ್ ಆಟದ ಲಿಂಕ್ ಕಳುಹಿಸಿದ್ದರೆ ಇಷ್ಟರಲ್ಲಾಗಲೇ ಪೊಲೀಸರು ಅದನ್ನು ಪತ್ತೆ ಮಾಡುತ್ತಿದ್ದರು. ಹೀಗಾಗಿ ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಬ್ಲೂವೇಲ್ ನಂಬರ್ ನಿಜವಾಗಿದ್ದಲ್ಲ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios