Asianet Suvarna News Asianet Suvarna News

ಫಂಗಲ್ ಇನ್ಫೆಕ್ಷನ್‌ನಿಂದ ಪಾದ ರಕ್ಷಣೆ ಹೇಗೆ?

ಸದಾ ನೀರಿನಲ್ಲಿಯೇ ನಿಂತು ಕೆಲಸ ಮಾಡುವವರಿಗೆ ಫಂಗಲ್ ಇನ್ಫೆಕ್ಷನ್ ಕಾಡೋದು ಸಹಜ. ಬೆರಳು ಸಂದುಗಳು ಕರಗಿ, ಅದರಿಂದ ಪಡಬಾರದ ಯಾತನೆ ಪಡಬೇಕು. ಇದರಿಂದ ರಕ್ಷಣೆ ಹೇಗೆ?

Tips to protect fungal infected feet
Author
Bengaluru, First Published Dec 22, 2018, 4:08 PM IST

ಒಂದೊಂದು ಕಾಲದಲ್ಲಿ ಒಂದು ಚರ್ಮ ಸಂಬಂಧಿ ಸಮಸ್ಯೆಗಳು ಕಾಡುತ್ತವೆ. ಒಮ್ಮೆ ದೇಹದಲ್ಲಿ ನೀರಿನಂಶ, ಜಿಡ್ಡಿನಾಂಶ ಕಡಿಮೆಯಾಗಿ ಚರ್ಮದಲ್ಲಿ ಒಡಕು ಕಂಡರೆ, ಮತ್ತೊಮ್ಮೆ ನೀರಲ್ಲಿ ಹೆಚ್ಚು ಓಡಾಡಬೇಕಾದ ಪ್ರಸಂಗ ಬರುವುದರಿಂದ ಕಾಲಿನ ಸಂದು ಕೊಳೆಯುತ್ತವೆ. ಅದರಲ್ಲಿಯೂ ಮಲೆನಾಡಿನ ಮಂದಿ ಮಳೆಗಾಲದಲ್ಲಿ ಆ ಸಮಸ್ಯೆಯಿಂದ ಬಳಲುವುದು ಹೆಚ್ಚು.

 

ಕೆಸರು, ಮಳೆ, ನೀರು, ತೇವಾಂಶದಿಂದ ಕಾಲಿನಲ್ಲಿ ಫಂಗಲ್ ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿಯೇ ತ್ವಚೆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ....

  • ಫಂಗಸ್‌ನಿಂದ ಕಾಡಬಹುದಾದ ಕಜ್ಜಿಗಳಿಂದ ಒಂದು ರೀತಿಯ ದ್ರವ ಹೊರ ಬರುತ್ತದೆ. ಅವುಗಳನ್ನು ಪ್ರತಿದಿನ ಕ್ಲೀನ್ ಮಾಡಬೇಕು. ಅದನ್ನು ಹಾಗೆ ಬಿಟ್ಟರೆ ಸಮಸ್ಯೆ ಉಲ್ಭಣಿಸುತ್ತದೆ.
  • ಬೆಳಗ್ಗೆ ಸ್ನಾನ ಮಾಡುವಾಗ ಕಾಲುಗಳ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಪಾದಗಳನ್ನು ಚೆನ್ನಾಗಿ ತೊಳೆಯಿರಿ. ಅಲ್ಲದೆ ಒಣಗಲು ಬಿಡಿ. ಬೆರಳುಗಳ ಮಧ್ಯೆ ಟಾಲ್ಕಮ್ ಪೌಡರ್ ಸಿಂಪಡಿಸಿ. -ಚಪ್ಪಲ್ ಅಥವಾ ಓಪನ್ ಆಗಿರುವ ಸ್ಯಾಂಡಲ್ ಸಾಧ್ಯವಾದಷ್ಟು ಬಳಸಿ. ಕಾಲನ್ನು ಮುಚ್ಚುವ ಶೂಸ್ ಬಳಸುವುದಾದರೆ ಒಳಗೆ ಪೌಡರ್ ಹಾಕಲು ಮರೆಯಬೇಡಿ.
  • ಆಗಾಗ ಪೆಡಿಕ್ಯೂರ್ ಮಾಡಿಸಿಕೊಳ್ಳಿ. ಇದರಿಂದ ಪಾದ ಸ್ವಚ್ಛವಾಗಿರುತ್ತದೆ.
  • ತಣ್ಣೀರಿಗೆ ಸ್ವಲ್ಪ ಉಪ್ಪು ಹಾಕಿ, ಕಾಲನ್ನು ಅದರಲ್ಲಿ ಹಾಕಿಡಿ. ನಂತರ ಚೆನ್ನಾಗಿ ಒಣಗಲು ಬಿಡಿ. ಹೀಗೆ ಮಾಡುವುದರಿಂದ ಮಳೆಗಾಲದಲ್ಲಿ ಕಂಡು ಬರುವ ಎಥಿಲಿಟ್ ಫುಟ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

ಈ ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡಿದರೆ ಬೇಗ ಗುಣಪಡಿಸಿಕೊಳ್ಳಬಹುದು. ಆದರೆ, ನೆಗ್ಲೆಕ್ಟ್ ಮಾಡಿದರೆ ಸಮಸ್ಯೆ ಗಂಭೀರವಾಗುತ್ತದೆ. ದೊಡ್ಡ ಗಾಯ, ತುರಿಕೆ, ರಕ್ತ ಸ್ರಾವವೂ ಆಗಬಹುದು. ಅದು ವಿಪರೀತವಾದರೆ ವೈದ್ಯರ ಸಲಹೆ ಪಡೆಯುವುದು ಅನಿವಾರ್ಯ.

Follow Us:
Download App:
  • android
  • ios