Asianet Suvarna News Asianet Suvarna News

ನಿದ್ರೆ ಬರೋದಿಲ್ವಾ? ಇಲ್ಲಿದೆ 6 ಸಖತ್ ಟಿಪ್ಸ್

ಯಾವುದಾದರೂ ಪುಸ್ತಕ ಕೈಗೆತ್ತಿಕೊಂಡು ಸುಮ್ಮನೆ ಓದುತ್ತಾ ಹೋಗಿ. ಪುಸ್ತಕದಲ್ಲಿರುವ ಕಥೆ ಅಥವಾ ವಿಷಯವನ್ನು ಅರಿಯುವ ಪ್ರಯತ್ನ ಮಾತ್ರ ಮಾಡಬೇಡಿ. ಬರೀ ಅಕ್ಷರಗಳನ್ನು ಓದುತ್ತಾ ಹೋಗಿರಿ. ಆಗ ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗುತ್ತದೆ.

tips to get good sleep

ನಿದ್ರೆ ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗಗಳಲ್ಲೊಂದು. ನಿದ್ರೆಯ ಏರಿಳಿತದೊಂದಿಗೆ ನಮ್ಮ ಅನೇಕ ಆರೋಗ್ಯ ವಿಚಾರಗಳು ತಳಕುಹಾಕಿಕೊಂಡಿವೆ. ಒಳ್ಳೆಯ ನಿದ್ರೆಗೆ ಹಲವು ಟ್ರಿಕ್'ಗಳಿವೆ. ಅಂಥ ಕೆಲ ಟಿಪ್ಸ್ ಇಲ್ಲಿವೆ.

1) ಒಂದೇ ವಿಚಾರ:
ನಾವು ವಿಚಲಿತಗೊಂಡಾಗ ನಿದ್ರೆ ಹತ್ತೋದಿಲ್ಲ. ಮನಸು ಪ್ರಶಾಂತವಾಗಿದ್ದಾಗ ನಿದ್ರೆ ತನ್ನಿಂತಾನೆ ಬರುತ್ತದೆ. ಮನಸನ್ನು ಪ್ರಶಾಂತಗೊಳಿಸುವುದು ಹೇಗೆ? ಯಾವುದೇ ಕ್ಷಣದಲ್ಲಿ, ಅದರಲ್ಲೂ ಮಲಗುವಾಗ ಹಲವು ವಿಚಾರಗಳು, ಆಲೋಚನೆಗಳು ನಮ್ಮ ತಲೆಯಲ್ಲಿ ಕೊರೆಯುತ್ತಿರುತ್ತವೆ. ನೀವು ಯಾವುದಾದರೂ ಸಕರಾತ್ಮಕವಾದ ಒಂದು ವಿಚಾರದ ಬಗ್ಗೆಯೇ ಆಲೋಚಿಸಿರಿ. ನಕರಾತ್ಮಕ ವಿಚಾರಗಳೆಲ್ಲವನ್ನೂ ಮರೆತುಬಿಡಿ. ಆಗ ಮನಸಿನ ಪ್ರಕ್ಷುಬ್ದತೆ ಕಡಿಮೆಯಾಗುತ್ತದೆ. ಬೆಟ್ಟಗುಡ್ಡಗಳು, ಬೀಚ್, ಉದ್ಯಾನವನ ಇತ್ಯಾದಿ ರಮಣೀಯ ಸ್ಥಳಗಳನ್ನು ಕಲ್ಪಿಸಿಕೊಳ್ಳಿ. ಆಗ ಬೇಗ ನಿದ್ರಾವಶರಾಗುತ್ತೀರಿ ಎಂದು ಅಧ್ಯಯನವೊಂದು ಹೇಳುತ್ತದೆ.

2) 4:7:8 ಟೆಕ್ನಿಕ್:
ಇದೊಂದು ಪವರ್'ಫುಲ್ ತಂತ್ರವಾಗಿದ್ದು, ಮನಸ್ಸನ್ನು ಬೇಗ ನಿಯಂತ್ರಣಕ್ಕೆ ತರುತ್ತದೆ. ಮೊದಲು 4 ಸೆಕಂಡ್'ಗಳ ಕಾಲ ಉಸಿರನ್ನು ಎಳೆದುಕೊಳ್ಳಿ; ನಂತರ 7 ಸೆಕೆಂಡ್'ಗಳು ಉಸಿರನ್ನು ಹಿಡಿದಿಟ್ಟುಕೊಳ್ಳಿ; ಮುಂದಿನ 8 ಕ್ಷಣಗಳಲ್ಲಿ ಉಸಿರನ್ನು ಹೊರಹಾಕಿರಿ. ಈ ರೀತಿಯಾಗಿ ಉಸಿರಾಟವನ್ನು ನಡೆಸುತ್ತಲೇ ಇರಿ. ನಿಮಗೇ ಗೊತ್ತಿಲ್ಲದೇ ನಿದ್ರೆಗೆ ಜಾರುವಿರಿ.

3) ಓದುವುದು:
ಯಾವುದಾದರೂ ಪುಸ್ತಕ ಕೈಗೆತ್ತಿಕೊಂಡು ಸುಮ್ಮನೆ ಓದುತ್ತಾ ಹೋಗಿ. ಪುಸ್ತಕದಲ್ಲಿರುವ ಕಥೆ ಅಥವಾ ವಿಷಯವನ್ನು ಅರಿಯುವ ಪ್ರಯತ್ನ ಮಾತ್ರ ಮಾಡಬೇಡಿ. ಬರೀ ಅಕ್ಷರಗಳನ್ನು ಓದುತ್ತಾ ಹೋಗಿರಿ. ಆಗ ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗುತ್ತದೆ.

4) ಬರೆಯುವುದು:
ಮಲಗುವಾಗ ನಿಮ್ಮನ್ನು ಬಾಧಿಸುತ್ತಿರುವ ಯಾವುದೇ ವಿಚಾರದ ಬಗ್ಗೆ ಒಂದು ಪುಸ್ತಕದಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿರಿ. ಆಗ ಮನಸಿನ ದುಗುಡ ಕಡಿಮೆಯಾಗುತ್ತದೆ.

5) ಬಿಸಿಬಿಸಿ ಕುಡಿಯಿರಿ:
ಮಲಗುವ ಮುನ್ನ ಬಿಸಿ ಹಾಲನ್ನೋ, ಚಹಾವನ್ನೋ ಅಥವಾ ಬಿಸಿನೀರನ್ನೋ ಕುಡಿಯಿರಿ. ಇವು ದೇಹವನ್ನು ರಿಲ್ಯಾಕ್ಸ್ ಮಾಡುತ್ತವೆ. ಗ್ರೀನ್ ಟೀ ಅಥವಾ ಮಿಂಟ್ ಟೀ ಕುಡಿದರೆ ಇನ್ನೂ ಒಳ್ಳೆಯದು. ಇದರಲ್ಲಿರುವ ಥಿಯನೈನ್ ಅಂಶವು ಮನಸಿನ ಒತ್ತಡವನ್ನು ನೀಗಿಸಬಲ್ಲುದಂತೆ.

6) ಮ್ಯೂಸಿಕ್ ಕೇಳಿರಿ:
ಸಂಗೀತ ಕೇಳುವುದು ಎಷ್ಟು ರಿಲ್ಯಾಕ್ಷಿಂಗ್ ಎಂಬುದು ಅದನ್ನು ಕೇಳಿದವರಿಗೇ ಗೊತ್ತು. ಹೆಚ್ಚು ಅಬ್ಬರವಿಲ್ಲದ ಸರಳ ಸಂಗೀತದಿಂದ ನಿದ್ರೆ ಬೇಗ ಹತ್ತುತ್ತದೆ.

Follow Us:
Download App:
  • android
  • ios