Asianet Suvarna News Asianet Suvarna News

ಹಳೇ ಪ್ರೇಮಿಯೊಂದಿಗೆ ಬೇಕಾ ಬಾಂಧವ್ಯದ ಬಂಧ?

ಸಾಮಾನ್ಯವಾಗಿ ಬ್ರೇಕ್‌ಅಪ್ ಆದರೆ ಒಬ್ಬರನ್ನೊಬ್ಬರು ಮರೆಯಲು ಹರಸಾಹಸ ಪಡುತ್ತಾರೆ. ಮೊದಲ ಲವ್, ಮೊದಲ ಕ್ರಷ್ ಸದಾ ನೆನಪಲ್ಲಿ ಉಳಿಯುತ್ತೆ. ಜೀವನ ಪರ್ಯಂತ ಪಾಸ್‌ವರ್ಡ್ ರೂಪದಲ್ಲಾದರೂ ನೆನಪಾಗುತ್ತಾರೆ. ಆದರೆ ಆ ಹಳೇ ಲವ್‌ನೊಂದಿಗೆ ನೇರ ಸಂಪರ್ಕವನ್ನಿಟ್ಟು ಕೊಳ್ಳುವುದು ಎಷ್ಟು ಸರಿ?

Times not to text partners
Author
Bangalore, First Published Apr 27, 2019, 4:30 PM IST

ಅವನ(ಳ)ದ್ದೇ ಧ್ಯಾನ. ಮದುವೆಯಾಗಿ ಹೊಸ ಬದುಕು ಆರಂಭವಾಗಿದೆ. ಮನೆಯಲ್ಲಿ ಅತ್ತೆ-ಮಾವ ಇರೋ ತುಂಬು ಕುಟುಂಬ. ಹೊಸ ಜವಾಬ್ದಾರಿ, ಹೊಸ ಮನೆ. ಆದರೆ, ಮನಸ್ಸಿನ್ನೂ ಅವನಲ್ಲೇ. ಕೈಯಲ್ಲಿ ಫೋನ್ ಹಿಡಿದಾಗಲೆಲ್ಲಾ ಅವನದ್ದೇ ಧ್ಯಾನ. ಅವನ ಡಿಪಿ, ಸ್ಟೇಟಸ್ ನೋಡಿದರೆ ಮನಸ್ಸಿಗೆ ಸಮಾಧಾನ. ಮನದ ಧಾವಂತ, ಆಸೆ, ಆಕಾಂಕ್ಷೆಗಳನ್ನು ಅವನೊಂದಿಗೆ ಶೇರ್ ಮಾಡಿಕೊಳ್ಳುವ ಆಸೆ.

ಅಷ್ಟಕ್ಕೂ ಹೊಸ ಬದುಕು ಆರಂಭವಾದ ಮೇಲೆ ಹಳೇ ಸಂಬಂಧವನ್ನು ನೆನಪಿಸಿಕೊಂಡು ಕೊರಗುವುದರಲ್ಲಿ ಅರ್ಥವಿದೆಯಾ? ಭಾವನಾತ್ಮಕವಾಗಿ ಎಕ್ಸ್ ಬಾಯ್ ಫ್ರೆಂಡ್‌ನೊಂದಿಗೆ (ಎಕ್ಸ್ ಗರ್ಲ್ ಫ್ರೆಂಡ್‌ನೊಂದಿಗೂ ಆಗಿರಬಹುದು) ಬಂಧವನ್ನು ಮುಂದುವರಿಸುವುದು ಬೇಕಾ? ಅಕಸ್ಮಾತ್ ಅಂಥದ್ದೊಂದು ಬಾಂಧವ್ಯಕ್ಕೆ ನಿಮ್ಮ ಮನಸ್ಸು ಹಾತೊರೆಯುತ್ತಿದೆ ಎನ್ನುವುದಾದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು...

Times not to text partners

  • ಎಲ್ಲವನ್ನೂ ಹೇಳಿಕೊಳ್ಳಬೇಕು ಎಂದೆನಿಸಿದರೂ, ಕೆಲವೊಂದು ಕಾಮನ್ ವಿಷಯಗಳನ್ನು ಮಾತ್ರ ಶೇರ್ ಮಾಡಿಕೊಳ್ಳಿ. ಮಾತನಾಡುವಾಗ ಧ್ವನಿಯಲ್ಲಿ ವಿಶ್ವಾಸ ಇರಲಿ. ಗೋಳನ್ನು ಹೇಳಿಕೊಳ್ಳಬೇಡಿ. ಸಿಂಪಥಿ ಬಯಸಲೇ ಬೇಡಿ.
  • ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್‌ಗಳಿಗೆಲ್ಲಾ ರೆಸ್ಪಾಂಡ್ ಮಾಡಲೇ ಬೇಕಿಲ್ಲ. ಬಿಟ್ಟು ಹೋದ ಸಂಬಂಧದ ಬಗ್ಗೆ ಮತ್ತೆ ಮತ್ತೆ ಸ್ಪೈ ಮಾಡಬೇಡಿ. ಪದೆ ಪದೇ ಕರೆ ಮಾಡಿ, ಡಿಸ್ಟರ್ಬ್ ಮಾಡಬೇಡಿ. ಅವರವರ ಬದುಕು ಅವರವರಿಗೆ.
  • ಈ ಸಮಯದಲ್ಲಿ ಒಂಟಿತನ ಏನೆಂದು ಅರ್ಥವಾಗುತ್ತದೆ. ಅದಕ್ಕೆ ತಾವೇನೆಂದು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಸಮಯ ಬಳಸಿಕೊಳ್ಳಿ. ಅದರ ಬದಲು ಅವರನ್ನು ಸಂಪರ್ಕಿಸಲು ಮುಂದಾಗಬೇಡಿ.
  • ಮನಸ್ಸು ಹೀಗೇ ಇರುತ್ತೆ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಇಂಥ ಸಂಬಂಧವನ್ನು ಮುಂದುವರಿಸಲು ತುಡಿಯುವುದು ಬೇಡ. ಬಿಟ್ಟರೆ ಒಳ್ಳೆಯದು. ಇದರಿಂದ ಅವರಿಗೂ ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ಬದಲಾಗಿ ಹಳೆ ಪ್ರೇಮಿ ದೇವದಾಸನಾಗುವಂತೆ ಮಾಡಬೇಡಿ.
  • ವಿಶೇಷ ದಿನಗಳಂದು ಶುಭ ಕೋರುವ ಅಗತ್ಯವೂ ಇಲ್ಲ. ನೀವು ಜೀವನದಿಂದ ಹೊರ ಬಂದ ಮೇಲೆ ಅವರು ಅವರ ಜೀವನವನ್ನು ಕಟ್ಟಿಕೊಂಡಿರುತ್ತಾರೆ. ಸುಖಾ ಸುಮ್ಮನೆ ಮತ್ತೆ ಮತ್ತೆ ನಿಮ್ಮನ್ನು ನೆನಪಿಸಿಕೊಳ್ಳುವಂತೆ ಮಾಡಿ, ಶಾಂತವಾದ ಮನಸ್ಸನ್ನು ಕದಡಬೇಡಿ. 
  • ಸಾಧ್ಯವಾದಷ್ಟು ದೂರವಾಗಲು ಯತ್ನಿಸಿ. ಒಂದು ಹೊಸ ಜೀವನ ಆರಂಭಿಸಿದ ಮೇಲೆ ಮತ್ಯಾಕೆ ಅದರ ಗೊಡವೆ?
Follow Us:
Download App:
  • android
  • ios