Asianet Suvarna News Asianet Suvarna News

ಬರಿಮೈಯಲ್ಲಿ ನಿದ್ರಿಸುವುದರಿಂದ ಆರೋಗ್ಯವೃದ್ಧಿ : ತೊಟ್ಟ ಬಟ್ಟೆಯೇ ರೋಗಕ್ಕೆ ಮೂಲ

ನಗ್ನವಾಗಿ ಮಲಗುವುದರಿಂದ ಮುಖ್ಯ ಲಾಭವೆಂದರೆ ಅತ್ಯುತ್ತಮ ನಿದ್ರೆ. ಬಿಗಿಯಾದ ಬಟ್ಟೆಗಳನ್ನು ಧರಿಸಿಕೊಂಡಿದ್ದರೆ ಸೆಕೆಗೆ ನಿದ್ರೆ ಬರಲ್ಲ. ನಗ್ನ ಸ್ಥಿತಿಯಲ್ಲಿದ್ದರೆ ಸುಮಾರು 70 ಡಿಗ್ರಿ ಫೆರನ್‌ಹೀಟ್ ಉಷ್ಣಾಂಶವನ್ನು ದೇಹ ಕಾಯ್ದುಕೊಂಡು ತಂಪಾಗುತ್ತದೆ. ಸುಖ ನಿದ್ರೆಗೆ ಇದು ಸೂಕ್ತವಾದ ಹವೆ. ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ನಿಯಂತ್ರಣಕ್ಕೆ ಸುಖ ನಿದ್ರೆ ನೆರವಾಗುತ್ತದೆ.

Sleeping tips for good health

ಮೈತುಂಬ ಬಟ್ಟೆ ಧರಿಸಿ ಬದುಕುವ ಮನುಷ್ಯನಿಗಿಂತ ಬೆತ್ತಲಾಗಿ ತಿರುಗುವ ಪ್ರಾಣಿಗಳಿಗೆ ಕಾಯಿಲೆಗಳ ಹಾವಳಿ ತೀರ ಕಡಮೆ ಎನ್ನುತ್ತವೆ ವೈದ್ಯಕೀಯ ಸಂಶೋಧನೆಗಳು. ರಾತ್ರಿ ಮಲಗುವ ಸಮಯದಲ್ಲಿ ತೀರ ಸಡಿಲವಾದ ಉಡುಪುಗಳನ್ನು ಧರಿಸಿಕೊಳ್ಳಿ. ಆದರೆ ಏನೂ ಆತಂಕವಿಲ್ಲವಾದರೆ ಬೆಳಗಿನ ತನಕ ಪೂರ್ಣ ನಗ್ನರಾಗಿ ಮಲಗಿ. ಪ್ರಾಣಿಗಳು ದೇಹವನ್ನು ಮುಚ್ಚಿಕೊಳ್ಳದ ಕಾರಣ ರೋಗನಿರೋಧಕವಾದ ಅನೇಕ ಗುಣಾಂಶಗಳನ್ನು ಪಡೆದುಕೊಳ್ಳುತ್ತವೆ. ಮನುಷ್ಯ ಕೂಡ ದಿನದ ಹನ್ನೆರಡು ತಾಸುಗಳನ್ನಾದರೂ ದೇಹವನ್ನು ಬಯಲಿಗೊಡ್ಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚು ಉತ್ಪಾದಿಸಿಕೊಳ್ಳಬಹುದು ಎಂದು ಹಲವಾರು ವೈದ್ಯಕೀಯ ವರದಿಗಳು ಹೇಳುತ್ತವೆ.

ಎಷ್ಟೊಂದು ಪ್ರಯೋಜನಗಳು!

ನಗ್ನವಾಗಿ ಮಲಗುವುದರಿಂದ ಮುಖ್ಯ ಲಾಭವೆಂದರೆ ಅತ್ಯುತ್ತಮ ನಿದ್ರೆ. ಬಿಗಿಯಾದ ಬಟ್ಟೆಗಳನ್ನು ಧರಿಸಿಕೊಂಡಿದ್ದರೆ ಸೆಕೆಗೆ ನಿದ್ರೆ ಬರಲ್ಲ. ನಗ್ನ ಸ್ಥಿತಿಯಲ್ಲಿದ್ದರೆ ಸುಮಾರು 70 ಡಿಗ್ರಿ ಫೆರನ್‌ಹೀಟ್ ಉಷ್ಣಾಂಶವನ್ನು ದೇಹ ಕಾಯ್ದುಕೊಂಡು ತಂಪಾಗುತ್ತದೆ. ಸುಖ ನಿದ್ರೆಗೆ ಇದು ಸೂಕ್ತವಾದ ಹವೆ. ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ನಿಯಂತ್ರಣಕ್ಕೆ ಸುಖ ನಿದ್ರೆ ನೆರವಾಗುತ್ತದೆ. ಇದರ ನಿಯಂತ್ರಣವಾಗದಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ, ಹೆಚ್ಚು ವಯಸ್ಸಾದಂತೆ ಕಾಣಿಸುತ್ತದೆ. ಒಳ್ಳೆಯ ಆರೋಗ್ಯವನ್ನು ಕಾಪಾಡಲು ಅಗತ್ಯವಾದ ವ್ಯವಸ್ಥೆ ರೂಪುಗೊಳ್ಳುವುದು ಸುಖ ನಿದ್ರೆಯ ಕಾಲದಲ್ಲಿ ಎಂಬುದು ವೈದ್ಯ ತಜ್ಞರ ಅಭಿಮತ.

ಸಂತಾನಹೀನತೆಗೆ ಬಟ್ಟೆಯೂ ಕಾರಣ ಆತಂಕ, ಬೊಜ್ಜುಗಳಿಗೆ ಕಾರಣವಾಗುವ ಕಾರ್ಟಿಸೋಲ್ ಹೆಚ್ಚು ಉತ್ಪನ್ನವಾಗಲು ಕಡಿಮೆ ನಿದ್ರೆಯೇ ಕಾರಣ. ತಂಪಾದ ವ್ಯವಸ್ಥೆಯಲ್ಲಿ ದೇಹವಿದ್ದರೆ ಕಾರ್ಟಿಸೋಲ್ ಪರಿಣಾಮ ತಗ್ಗುತ್ತದೆ. ಪುರುಷರಿಗೆ ವೃಷಣಗಳು ಹೆಚ್ಚು ಬಿಗಿಯಾದ ಉಡುಪಿನೊಳಗಿದ್ದರೆ ಅಲ್ಲಿ ಉಂಟಾಗುವ ಉಷ್ಣತೆಯ ತೀವ್ರತೆಯಿಂದಾಗಿ ವೀರ್ಯಾಣುಗಳ ಸಂಖ್ಯೆ ಇಳಿಮುಖವಾಗುತ್ತದೆ. ಸಂತಾನೋತ್ಪಾದನೆಗೂ ಅದರಿಂದ ತೊಂದರೆಯಾಗಬಹುದು. ಕನಿಷ್ಠ ರಾತ್ರಿಯಾದರೂ ಇಂತಹ ನಿರ್ಬಂಧಿತ ಸ್ಥಿತಿಯನ್ನು ಮುಕ್ತಗೊಳಿಸಬಹುದು.

ಗಂಡ, ಹೆಂಡತಿ ಈ ವಿಧದಲ್ಲಿ ಸನಿಹ ಮುಕ್ತವಾಗಿ ಮಲಗಿಕೊಳ್ಳುವುದರಿಂದ ಮೆದುಳಿನಲ್ಲಿ ಆಕ್ಸಿಟೋಸಿನ್ ಚೋದಕ ಹೆಚ್ಚು ಪ್ರಮಾಣದಲ್ಲಿ ಸ್ರವಿಸಿ ಭಾವನಾತ್ಮಕ ಅನುಬಂಧವನ್ನು ವರ್ಧಿಸಲು ನೆರವಾಗುತ್ತದೆ ಎಂದು ಮೇರಿಲ್ಯಾಂಡ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಎಂಡ್ ಡೆವಲಪ್‌ಮೆಂಟ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವ ವಿದ್ಯಾನಿಲಯದ ಸಂಶೋಧನೆಗಳಲ್ಲಿ ಹೇಳಲಾಗಿದೆ. ನಗ್ನವಾಗಿ ನಿದ್ರಿಸುವ ಮೂಲಕ ಉತ್ತಮ ಗುಣಮಟ್ಟ ಹೊಂದುವ ವೀರ್ಯದಲ್ಲಿ ಶೇ. 25ರಷ್ಟು ಹೆಚ್ಚಳವನ್ನು ಗುರುತಿಸಲಾಗಿದೆಯಂತೆ.

ದೇಹದ ಬೆಳವಣಿಗೆಗೆ ಸಹಕರಿಸುವ ಚೋದಕಗಳು ಉಷ್ಣಾಂಶದ ಹೆಚ್ಚಳದಲ್ಲಿ ಕಡಮೆಯಾಗುತ್ತವೆ. ಈ ವಾತಾವರಣದಲ್ಲಿ ಜೀವಕೋಶಗಳ ರಿಪೇರಿಗೆ ದೇಹಕ್ಕೆ ಅನುಕೂಲ ಹೆಚ್ಚಾಗುತ್ತದೆ ಎಂದಿವೆ ವರದಿಗಳು. ಚರ್ಮ ಚೆನ್ನಾಗಿರುತ್ತೆ ದಿನವಿಡೀ ಬಿಗಿಯುಡುಪಿನೊಳಗೆ ಹುದುಗುವ ತೋಳು, ಪಾದಗಳು ಸೇರಿದಂತೆ ದೇಹದ ಬಹುತೇಕ ಬಾಹ್ಯ ಅಂಗಗಳಿಗೆ ಉಸಿರಾಟ ಸಿಗದೆ ನಿರ್ಬಂಧಿತವಾಗಿರುತ್ತದೆ. ಬೇಸಿಗೆಯಲ್ಲಿಯಂತೂ ಅವುಗಳ ಮೇಲೆ ಬೆವರಿನ ಒಂದು ಪದರವೂ ಆವರಿಸುತ್ತದೆ. ಚರ್ಮವನ್ನು ಉಸಿರಾಡಲು, ಗಾಳಿಯಾಡಲು ರಾತ್ರಿಯಾದರೂ ಅವಕಾಶ ನೀಡಬಹುದು.

ಇದರಿಂದ ಕಜ್ಜಿ, ಚರ್ಮರೋಗಗಳು ಮುಂತಾದ ಕಾಯಿಲೆಗಳ ಅಪಾಯವನ್ನು ಸಾಕಷ್ಟು ದೂರವಿಡಬಹುದು. ಚರ್ಮದ ಸುಕ್ಕು ಕಡಮೆಯಾಗುತ್ತದೆ.ಪ್ರಾಯೋಗಿಕವಾಗಿ ಒಂದು ಸಾವಿರ ಮಂದಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದವರನ್ನು ಆರಿಸಿ ಕತ್ತಲಲ್ಲಿ ಬೆತ್ತಲಾಗಿ ಮಲಗಲು ಹೇಳಿದಾಗ ಇವರಲ್ಲಿ 570 ಮಂದಿಗೆ ಹಿಂದೆ ಎಂದೂ ಬರದಂತಹ ಸಂತೋಷಕರವಾದ ನಿದ್ರೆ ಬಂದಿತೆಂದು ಹೇಳಿದರು. ಗುಣಮಟ್ಟದ ನಿದ್ರೆಯಿಂದಾಗಿ ಚಯಾಪಚಯ ಕ್ರಿಯೆ ಸುಲಲಿತವಾಗುತ್ತದೆ. ರಕ್ತ ಪರಿಚಲನೆ ಸುಗಮವಾಗಿ ಹೃದಯದ ಸ್ನಾಯುಗಳಿಗೆ ಅನಿರ್ಬಂಧಿತವಾಗಿ ರಕ್ತ ಹರಿಯುತ್ತದೆ. ರಕ್ತದ ಒತ್ತಡ ಕಡಮೆಯಾಗುತ್ತದೆ. ಖಿನ್ನತೆ ದೂರವಾಗುತ್ತದೆ ಎನ್ನುತ್ತಾರೆ ಡಾ. ಮೆರ್ಕೋಲಾ.

2014ರ ವರದಿಯೊಂದು ಹೇಳುವಂತೆ ಕಡಮೆ ತಾಪಮಾನದಲ್ಲಿ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಅಧಿಕವಾಗಿ ಮಧುಮೇಹ ನಿಯಂತ್ರಣವು ಸಹಜವಾಗಿ ಸಾಧ್ಯವಾಗುತ್ತದೆ. ಯಾವುದೇ ನಿದ್ರೆಯ ಗುಳಿಗೆಗಳಿಗಿಂತಲೂ ಬೆತ್ತಲಾಗಿ ಮಲಗುವುದೂ ನಿರಪಾಯಕರವಾದ ನಿದ್ರೆಯ ಆಹ್ವಾನವೆಂಬುದು ಈ ವರದಿಯ ಮುಖ್ಯಾಂಶ. ಬೆತ್ತಲಾಗಿ ನಿದ್ರೆಗೆ ಶರಣಾಗುವುದರಿಂದ ದೇಹದ ತೂಕ ಹೆಚ್ಚಿಸುವ ಹಾರ್ಮೊನುಗಳ ಉತ್ಪನ್ನ ಕಡಮೆಯಾಗುತ್ತದೆ. ದೇಹದಲ್ಲಿ ಕ್ಯಾಲೊರಿಗಳನ್ನು ಸುಡುವ ಕೊಬ್ಬಿನ ಸಂಗ್ರಹ ಇಳಿಮುಖವಾಗುತ್ತದೆ. ಹಸಿವು ಹೆಚ್ಚುತ್ತದೆ. ಮೆದುಳಿನ ಸಾಮರ್ಥ್ಯ ಹಿಗ್ಗುತ್ತದೆ. ಲೈಂಗಿಕ ಸುಖಕ್ಕೆ ಅನುಕೂಲವಾಗುವ ಆಕ್ಸಿಟೋಸಿನ್ ಹೆಚ್ಚಲು ಪೂರಕವಾಗುತ್ತದೆ ಎಂದು ಹೇಳಲಾಗಿದೆ.

ಸ್ತ್ರೀಯರ ಆರೋಗ್ಯಕ್ಕೂ ಒಳ್ಳೆಯದು

ಸಿಂಥೆಟಿಕ್ ಫೈಬರ್ ಮೂಲದ ಒಳ ಉಡುಪುಗಳನ್ನು ಧರಿಸುವ ಸಿಉೀಯರು ಕತ್ತಲಲ್ಲಿ ಮುಕ್ತರಾಗುವುದರಿಂದ ಮೂತ್ರನಾಳದ ಸೋಂಕು, ಹಲವು ಬಗೆಯ ಶಿಲೀಂಧ್ರ ರೋಗಗಳನ್ನು ತರುವ ಬ್ಯಾಕ್ಟೀರಿಯಾಗಳನ್ನು ದೂರವಿಡಬಹುದು. ಆರ್ದ್ರಮಿಶ್ರಿತ ಉಷ್ಣದಲ್ಲಿ ಹೆಚ್ಚಾಗುವ ಸಮಸ್ಯೆಗಳಿಂದ ಮುಕ್ತರಾಗಬಹುದು. ಬಿಗಿಯಾದ ಸ್ತನಬಂಧದಿಂದ ಕ್ಯಾನ್ಸರ್ ಬರುವುದನ್ನು ಈಗಾಗಲೇ ಸಂಶೋಧನೆಗಳು ದೃಢಪಡಿಸಿವೆ. ಮಗುವಿಗೆ ಹಾಲೂಡಿಸುವ ತಾಯಂದಿರು ರಾತ್ರೆ ಉಡುಪು ಧರಿಸದೆ ಸ್ತನಗಳನ್ನು ಗಾಳಿಯಾಡಲು ಬಿಡುವುದರಿಂದ ಹಾರ್ಮೋನುಗಳ ಸ್ರಾವಿಕೆ ಹೆಚ್ಚಾಗಿ ಹಾಲು ಅಧಿಕವಾಗುವುದಲ್ಲದೆ ಮಗುವಿನೊಂದಿಗೆ ಭಾವನಾತ್ಮಕ ಸಂಬಂಧ ವೃದ್ಧಿಯಾಗಲು ಸಹಕಾರಿ ಎಂಬುದು ವೈದ್ಯ ತಜ್ಞರ ಹೇಳಿಕೆ.

- ಪ. ರಾಮಕೃಷ್ಣ ಶಾಸ್ತ್ರಿ

Follow Us:
Download App:
  • android
  • ios