Asianet Suvarna News Asianet Suvarna News

ತುಳುನಾಡ ಋುತು ವೈಭವ!

ಬೇಸಿಗೆ ಬಂದರೆ ತುಳುನಾಡು ರಂಗೇರುತ್ತದೆ. ನಿತ್ಯವೂ ಉತ್ಸವ, ಜಾತ್ರೆಗಳ ಸುಗ್ಗಿ. ದ್ರಾವಿಡ ಹಾಗೂ ವೈದಿಕ ಆಚರಣೆಗಳು ಸಮನ್ವಯದಿಂದ ನಡೆಯುವುದು ಮತ್ತೊಂದು ವಿಶೇಷ.

Significance of Tulu Nadu festivals
Author
Bengaluru, First Published Feb 26, 2019, 10:00 AM IST

ಕೃಷ್ಣ​ಮೋ​ಹನ ತಲೆಂಗ​ಳ

ಭೂತ ಫೋಟೋ: ಹರ್ಷಿತ್‌ ಬಲ್ಲಾ​ಳ್‌

ದಕ್ಷಿಣ ಕನ್ನಡ, ಉಡುಪಿ, ಕೇರ​ಳದ ಕಾಸ​ರ​ಗೋಡು ಜಿಲ್ಲೆ ಸೇರಿದ ಕರಾ​ವ​ಳಿಯ ತುಳು ನಾಡಿ​ನಲ್ಲಿ ಬೇಸಿ​ಗೆ​ಯಲ್ಲಿ ಜಾತ್ರೆ, ನೇಮ, ಯಕ್ಷ​ಗಾ​ನದ ಭರ್ಜರಿ ಋುತು. ಮಳೆ​ಗಾಲ ಮುಗಿದ ತಕ್ಷಣ ಶುರು​ವಾ​ಗುವ ಸಾಲು ಸಾಲು ಪರ್ವ​ಗಳು ಬೇಸಿಗೆ ಕಾಲ​ದಲ್ಲಿ ಉಚ್ಛ್ರಾಯ ಸ್ಥಿತಿ​ಯ​ಲ್ಲಿ​ರು​ತ್ತದೆ. ದೇವ​ಸ್ಥಾ​ನದ ವಾರ್ಷಿಕ ಜಾತ್ರೆ​ಗಳು, ಬ್ರಹ್ಮ​ಕ​ಲ​ಶೋ​ತ್ಸ​ವ​ಗಳು, ನೇಮೋ​ತ್ಸವ, ನಾಗ​ಮಂಡ​ಲೋ​ತ್ಸ​ವ​ಗಳು, ಯಕ್ಷ​ಗಾನ ತಿರು​ಗಾಟಗಳು ಊರಿನ ಬಯ​ಲು​ಗ​ಳಲ್ಲಿ, ಗುಡಿ​ಗ​ಳಲ್ಲಿ ಹಬ್ಬದ ವಾತಾ​ವ​ರ​ಣ​ಗ​ಳನ್ನು ಸೃಷ್ಟಿ​ಸಿ​ರು​ತ್ತವೆ.

ಉಡುಪಿಯ ಅಂಬಲ್ಪಾಡಿ ಮಹಾಕಾಳಿ ಶಕ್ತಿ ಅಪಾರ!

ಚೆಂಡೆ ಸದ್ದು, ದೃಶ್ಯವೈಭವ

ಯಕ್ಷ​ಗಾನ ಬಯ​ಲಾಟ, ತಾಳ​ಮ​ದ್ದಳೆ, ಗಾನ​ವೈ​ಭ​ವಗಳು, ರಥೋ​ತ್ಸ​ವ​ಗಳು, ಭೂತಕೋಲ, ಜಾತ್ರೆ, ಅನ್ನ​ದಾ​ನÜ, ಗಿವಿ​ಗ​ಡ​ಚಿ​ಕ್ಕುವ ಮೈಕು, ದೊಡ್ಡ ದೊಡ್ಡ ಪೆಂಡಾಲು, ಶಾಲು ಹಾಕಿದ ಕಾರ್ಯ​ಕ​ರ್ತರು, ಇವೆ​ಲ್ಲಕ್ಕೂ ಪೂರ​ಕ​ವಾಗಿ ಹೊರೆ​ಕಾ​ಣಿಕೆ ಮೆರ​ವ​ಣಿ​ಗೆಗಳು, ಉತ್ಸ​ವದ ಚಪ್ಪರ ಮುಹೂ​ರ್ತ​ಗಳು, ದೇಣಿಗೆ ಸಂಗ್ರ​ಹ​ಗಳು ಕರಾ​ವ​ಳಿಯ ಊರೂ​ರು​ಗ​ಳಲ್ಲೂ ಕಾಣ​ಸಿ​ಗುವ ದೃಶ್ಯ​ಗಳು. ‘ಎರ್ಮಾಳು ಜಪ್ಪು, ಖಂಡೇವು ಅಡೆಪು’ ಎಂಬ ನುಡಿ​ಗ​ಟ್ಟಿದೆ. ಉಡುಪಿ ಜಿಲ್ಲೆ​ಯ ಎರ್ಮಾ​ಳು ದೇವ​ಸ್ಥಾ​ನ​ದಲ್ಲಿ ಮಳೆ​ಗಾ​ಲ ಮುಗಿದ ತಕ್ಷಣ ಕರಾ​ವ​ಳಿಯ ಮೊದಲ ಜಾತ್ರೆ ಆರಂಭ​ವಾ​ಗು​ತ್ತದೆ. ಮಂಗ​ಳೂರು ಸಮೀ​ಪದ ಚೇಳಾ​ಯರು ಖಂಡಿಗೆಯಲ್ಲಿ ನಡೆ​ಯು​ವುದು ತುಳು​ನಾ​ಡಿನ ಬೇಸಿ​ಗೆಯ ಕೊನೆಯ ಜಾತ್ರೆ ಎಂದು ಪ್ರಸಿದ್ಧಿ ಪಡೆ​ದಿ​ದೆ.

ತುಳು​ನಾ​ಡಿ​ನಲ್ಲಿ ಸಾವಿ​ರಾರು ದೇವ​ಸ್ಥಾನ, ದೈವ​ಸ್ಥಾ​ನ​ಗಳ ಜೊತೆ​ಯಲ್ಲಿ 242 ಕೋಟಿ ಚೆನ್ನ​ಯರ ಗರ​ಡಿ​ಗಳಿವೆ. ಕಾಂತಾ​ಬೂರೆ ಬೂದ​ಬಾರೆ ಅವಳಿ ವೀರರ ಗರಡಿ ಕೂಡಾ ಇದೆ. ದೈವ​ಸ್ಥಾ​ನ​ಗ​ಳಲ್ಲಿ ಹಿಂದೆ ದ್ರಾವಿಡ ಮೂಲದ ಆಚ​ರ​ಣೆ​ಗಳು ನಡೆ​ಯು​ತ್ತಿ​ದ್ದರೆ ಈಗೀಗ ವೈದಿಕ ಕ್ರಮ​ಗ​ಳಲ್ಲೂ ನೇಮ​ಗಳು ನಡೆ​ಯು​ತ್ತಿವೆ ಎನ್ನು​ತ್ತಾರೆ ವಿದ್ವಾಂಸ​ರು. ಕರಾ​ವ​ಳಿಯ ಎಲ್ಲಾ ಆರಾ​ಧ​ನೆ​ಗಳು ಪ್ರಕೃತಿ ಪೂಜೆ ಹಾಗೂ ಕೃಷಿ ಮೂಲ​ದಿಂದ ಹುಟ್ಟಿ​ಕೊಂಡಂಥವು. ಆದರೆ ಕೃಷಿ ನಾಶ​ವಾ​ಗುತ್ತಾ ಬಂದ ಹಾಗೆ ಆರಾ​ಧನಾ ಪದ್ಧ​ತಿಯೂ ಬದ​ಲಾ​ಗು​ತ್ತಿದೆ ಎನ್ನು​ತ್ತಾರೆ ವಿದ್ವಾಂಸ ಡಾ.ಗ​ಣೇಶ್‌ ಅಮೀನ್‌ ಸಂಕ​ಮಾ​ರ್‌. ಕಳೆದ ಐದು ದಶ​ಕ​ಗ​ಳಿಂದೀ​ಚೆಗೆ ಕರಾ​ವಳಿ ಭಾಗ​ದಲ್ಲಿ ನಾಗ​ಮಂಡ​ಲೋ​ತ್ಸ​ವವೂ ವಿಜೃಂಭ​ಣೆ​ಯಿಂದ ನಡೆ​ಯು​ತ್ತಿವೆ.

ಸಹ​ಬಾ​ಳ್ವೆಯೇ ಮುಖ್ಯವಾದ ತುಳುನಾಡಿನ ಜಾತ್ರೆ​ಗಳಲ್ಲಿ ಹೂ ಮಾರು​ವ​ವರು ಒಂದು ಸಮು​ದಾಯದವರು, ವೀಳ್ಯ, ಮಲ್ಲಿಗೆ ಬೆಳೆದು ನೇಯ್ದು ಕೊಡು​ವವರು ಇನ್ನೊಂದು ಸಮು​ದಾ​ಯ​ದ​ವರು, ದೇವರ ರಥ ಕಟ್ಟು​ವ​ವರು ಇನ್ನೊಂದು ವರ್ಗ​ದ​ವರು, ಬೆಡಿ ಸಿಡಿ​ಸು​ವವರು ಇನ್ನೊ​ಬ್ಬರು. ದೇವ​ರಿಗೆ ಡೋಲು ವಾದ್ಯ ಬಾರಿ​ಸು​ವ​ವರು ಮತ್ತೊ​ಬ್ಬರು. ಸಾಮ​ರ​ಸ್ಯಕ್ಕೆ ನಿದರ್ಶನದಂತಿರುತ್ತವೆ ಈ ಜಾತ್ರೆಗಳು. ಆದರೆ ಈಗೀಗ ವೈಭ​ವೀ​ಕ​ರಣ, ವಾಣಿ​ಜ್ಯೀ​ಕ​ರ​ಣ​ದಿಂದ​ ಮೂಲ ಆಚ​ರ​ಣೆ​ಗ​ಳಿಗೆ ಧಕ್ಕೆ​ಯಾ​ಗು​ತ್ತಿ​ರು​ವುದು ಮಾತ್ರ ವಿಷಾ​ದ​ನೀ​ಯ. -ಡಾ.ಗ​ಣೇಶ್‌ ಅಮೀನ್‌ ಸಂಕ​ಮಾರ್‌, ಜಾನ​ಪದ ವಿದ್ವಾಂಸ, ಮಂಗ​ಳೂ​ರು

ಜಾತ್ರೆ ನೆನಪಿಟ್ಟುಕೊಳ್ಳಲು ಕ್ಯಾಲೆಂಡರೇ ಬೇಡ

ಕುಂಬಳೆ ಬೆಡಿ, ಪುತ್ತೂರು ಬೆಡಿ, ಉಳ್ಳಾಲ್ತಿ ಮೆಚ್ಚಿ, ಪೊಳಲಿ ಚೆಂಡು, ಬಪ್ಪ​ನಾಡು ಜಾತ್ರೆ, ಧರ್ಮ​ಸ್ಥಳ ಲಕ್ಷ​ದೀ​ಪೋ​ತ್ಸವ, ಕುಕ್ಕೆ ಸುಬ್ರ​ಹ್ಮ​ಣ್ಯದ ಚಂಪಾ​ಷಷ್ಠಿ, ಕಂಕ​ನಾ​ಡಿ ಗರೋ​ಡಿ ಜಾತ್ರೆ.... ಹೀಗೆ ಕಾಲ ಕಾಲಕ್ಕೆ ಆಗು​ವಂಥಹ ಜಾತ್ರೋ​ತ್ಸ​ವ​ಗಳಿಗೆ ತೆರ​ಳಲು ಜನ​ರಿಗೆ ಕ್ಯಾಲೆಂಡರೇ ಬೇಡ. ಅಷ್ಟರ ಮಟ್ಟಿಗೆ ಊರು ಪರ​ವೂ​ರು​ಗ​ಳಲ್ಲಿ ಪ್ರಸಿದ್ಧಿ ಪಡೆದ ಜಾತ್ರೆ​ಗ​ಳಿವು. ಜಾತ್ರೆ​ಯಲ್ಲಿ ದೇವರ ನೋಡು​ವು​ದ​ಕ್ಕಿಂತಲೂ ಸಂತೆ ಸುತ್ತು​ವುದು, ಮಂಡಕ್ಕಿ ತಿನ್ನು​ವುದು, ಆರ್ಕೆ​ಸ್ಟ್ರಾಕ್ಕೆ ಹೆಜ್ಜೆ ಹಾಕು​ವುದು, ಈಗೀಗ ಹೋದಲ್ಲಿ, ಬಂದಲ್ಲಿ ಸೆಲ್ಫೀ ತೆಗೆ​ಯು​ವುದೂ ಜಾತ್ರೆಯ ಖುಷಿ​ಯಲ್ಲಿ ಸೇರಿದೆ.

ಬೇಸಿ​ಗೆ​ಯಲ್ಲೇ ಉತ್ಸವ ಹೆಚ್ಚುವುದೇಕೆ?

ಹಿಂದೆ ಜನ​ತೆಗೆ ಮಳೆ​ಗಾ​ಲ​ದಲ್ಲಿ ಮಳೆ​ಯಿಂದ ರಕ್ಷಣೆ ಪಡೆಯಲು ಹೆಚ್ಚಿನ ವ್ಯವಸ್ಥೆ ಇರ​ಲಿಲ್ಲ. ಹಾಗಾಗಿ ಬೇಸಿ​ಗೆಗೇ ಜಾತ್ರೆ​ಗಳು ನಿಗ​ದಿ​ಯಾ​ಗು​ತ್ತಿ​ದ್ದವು. ಮಾತ್ರ​ವಲ್ಲ ತುಳು ನಾಡಿ​ನಲ್ಲಿ ಆಟಿ ತಿಂಗ​ಳಲ್ಲಿ ‘ಭೂತ​ಗಳು ಘಟ್ಟಕ್ಕೆ ಹೋಗು​ತ್ತವೆ’ ಎಂಬ ನಂಬಿ​ಕೆಯೂ ಇದೆ. ಈ ಎಲ್ಲಾ ಕಾರ​ಣ​ದಿಂದ ಮಳೆ​ಗಾಲ ಮುಗಿದು ಬೇಸಿಗೆ ಕಾಯು​ವಾ​ಗಲೇ ನೇಮ, ಜಾತ್ರೆ​ಗಳು ರಂಗೇರು​ತ್ತವೆ. ಕೆಲವು ನಂಬಿಕೆ, ವೈಜ್ಞಾ​ನಿ​ಕತೆ, ವ್ಯಾವ​ಹಾ​ರಿ​ಕತೆ ಎಲ್ಲ ಸೇರಿ ಆಚ​ರ​ಣೆ​ಗಳು ನಡೆ​ಯು​ತ್ತವೆ.

 

Follow Us:
Download App:
  • android
  • ios