Asianet Suvarna News Asianet Suvarna News

ದೃಷ್ಟಿ ದೋಷ ಸಮಸ್ಯೆ ಬಗೆ ಹರಿಸೋ ನೈನಾದೇವಿ

ಕೆಲವೊಂದು ದೇವಾಲಯಗಳು ಇಂದಿಗೂ ತಮ್ಮ ದೈವೀಕತೆಯಿಂದ  ಹೆಸರುವಾಸಿಯಾಗಿವೆ. ಅಲ್ಲಿಗೆ ಹೋದರೆ ಎಲ್ಲಾ ಸಮಸ್ಯೆಗಳು, ದೋಷ ನಿವಾರಣೆಯಾಗುತ್ತವೆ. ಅಂಥದ್ದೇ ಒಂದು ತಾಣ ನೈನಾದೇವಿ ಮಂದಿರ. ಈ ದೇವಿಯ ಮಹಿಮೆ , ಶಕ್ತಿಯನ್ನು ತಿಳಿಯಲು ಮುಂದೆ ಓದಿ.. 

Significance of Nainadevi temple in Himachal Pradesh
Author
Bengaluru, First Published May 7, 2019, 5:21 PM IST

ನೈನಾ ಸರೋವರದ ಉತ್ತರ ಕಿನಾರೆಯಲ್ಲಿ ನೆಲೆಸಿರುವ ನೈನಾದೇವಿ ಮಂದಿರ ಭಕ್ತರ ಪ್ರಮುಖ ಆಕರ್ಷಣೀಯ ತಾಣ. ಈ ಮಂದಿರ ಹಿಮಾಚಲ ಪ್ರದೇಶದ ಬಿಲಾಸ್ ಪುರದಲ್ಲಿದೆ. 1880ರಲ್ಲಿ ಭೂಕಂಪದಿಂದ ಈ ಮಂದಿರ ಹಾಳಾಗಿ ಹೋಗಿತ್ತು.  ನಂತರ ಇದನ್ನು ಪುನರ್‌ನಿರ್ಮಿಸಲಾಯಿತು. ಇಲ್ಲಿ ಎರಡು ಕಣ್ಣುಗಳನ್ನು ಪೂಜಿಸಲಾಗುತ್ತದೆ. ಇದು ನೈನಾ ದೇವಿಯ ಸಂಕೇತ. ನೈನಾ ದೇವಿಯ ಕಣ್ಣುಗಳಿಂದ ಬಿದ್ದ ಕಣ್ಣೀರಿನಿಂದ ಇಲ್ಲಿನ ಸರೋವರ ನಿರ್ಮಾಣವಾಯಿತು ಎನ್ನುತ್ತಾರೆ. ಆದುದರಿಂದ ಇಲ್ಲಿನ ಜಾಗದ ಹೆಸರೂ ನೈನಿತಾಲ್. 

ದೇವಿಯ ಮಾತೃತ್ವಕ್ಕಿಲ್ಲಿ ಪೂಜೆ

ಸತಿ ದೇವಿಯ ಕಣ್ಣು ಬಿದ್ದ ಜಾಗ

ಈ ತಾಣ ಸತಿ ದೇವಿಯ ಕಣ್ಣು ಬಿದ್ದ ಜಾಗವೆನ್ನುತ್ತಾರೆ. ಪುರಾಣದ ಪ್ರಕಾರ ದಕ್ಷ ಯಜ್ಞ ಮಾಡುವಾಗ ತನ್ನ ಪತಿಯನ್ನು ಕರೆಯಲಿಲ್ಲ ಎಂದು ಕೋಪಗೊಂಡ ಸತಿ ಅಗ್ನಿ ಪ್ರವೇಶಿಸಿ, ಕೊನೆಯುಸಿರೆಳೆಯುತ್ತಾಳೆ. ಇದನ್ನು ತಿಳಿದ ಶಿವ ಕೋಪದಿಂದ ಸತಿಯ ದೇಹವನ್ನು ಹೊತ್ತುಕೊಂಡು ದೇಶದಾದ್ಯಂತ ಸುತ್ತುತ್ತಿರುತ್ತಾನೆ. ಶಿವನ ಕೋಪವನ್ನು ಕಡಿಮೆ ಮಾಡಲು ವಿಷ್ಣು ತನ್ನ ಚಕ್ರದಿಂದ ಸತಿ ದೇಹವನ್ನು ತುಂಡರಿಸುತ್ತಾನೆ. ಆ ಸಂದರ್ಭದಲ್ಲಿ ಸತಿಯ ದೇಹ ಒಂದೊಂದೆಡೆ ಬೀಳುತ್ತದೆ. ಅದೇ ರೀತಿ ಸತಿಯ ಕಣ್ಣು ಈ ತಾಣದಲ್ಲಿ ಬಿತ್ತಂತೆ. ಆದುದರಿಂದ ಇಲ್ಲಿ ಸತಿಯನ್ನು ನೈನಾ ದೇವಿ ರೂಪದಲ್ಲಿ ಪೂಜೆಸಲಾಗುತ್ತದೆ. 

Significance of Nainadevi temple in Himachal Pradesh

ಈ ಮಂದಿರ ನೈನಿತಾಲ್ ಬಸ್ ಸ್ಟಾಂಡ್‌ನಿಂದ 2 ಕಿ.ಮೀ ದೂರದಲ್ಲಿದೆ. ಇಲ್ಲಿನ ಮಂದಿರದಲ್ಲಿ ನೈನಾ ದೇವಿಯ ಜೊತೆ ಗಣೇಶ ಮತ್ತು ಕಾಳಿ ದೇವಿ ಮೂರ್ತಿಯನ್ನೂ ಪೂಜಿಸಲಾಗುತ್ತದೆ. ಮಂದಿರದ ಹೊರಗೆ ಒಂದು ಅಶ್ವಥ ಮರವಿದೆ. ಇಲ್ಲಿ ಪಾರ್ವತಿ ದೇವಿಯನ್ನು ನಂದಾದೇವಿ ಎನ್ನುತ್ತಾರೆ. ಈ ದೇವಿ ಮಂದಿರ 51 ಶಕ್ತಿ ಪೀಠಗಳಲ್ಲಿ ಒಂದು. ಈ ದೇವಿಯ ದರ್ಶನ ಮತ್ತು ಪೂಜೆಯಿಂದ ಜನರ ನೇತ್ರ ರೋಗ ಸಂಪೂರ್ಣವಾಗಿ ಗುಣಮುಖವಾಗಿರುವ ಉದಾಹರಣೆಗಳಿವೆ. 

ಮತ್ತೇನಿದೆ ನೋಡ್ಲಿಕ್ಕೆ?

ಇಲ್ಲಿ ಮಂದಿರವಲ್ಲದೇ ಮಲ್ಲಿನಾಥ್, ತಲ್ಲಿನಾಥ್ ಎಂಬ ಆಕರ್ಷಣೀಯ ತಾಣಗಳಿವೆ. ಈ ಎರಡು ಸರೋವರಗಳನ್ನು ಜೋಡಿಸುವ ರಸ್ತೆಯನ್ನು ಮಾಲ್ ರೋಡ್ ಎನ್ನುತ್ತಾರೆ. ಅಲ್ಲದೇ ಹತ್ತಿರದಲ್ಲಿ ಪಕ್ಷಿಧಾಮ, ರಾಜಭವನ, ಕೇವ್ ಗಾರ್ಡನ್, ರಾಣಿ ಖೇತ್ ಮೊದಲಾದ ತಾಣಗಳಿವೆ. 

ಪ್ರವಾಸಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios