Asianet Suvarna News Asianet Suvarna News

ಮಕ್ಕಳೊಂದಿಗೆ ಅಪ್ಪ-ಅಮ್ಮ ಮಲಗಬೇಕೋ, ಬೇಡ್ವೋ?

ಪುಟ್ಟ ಮಕ್ಕಳು ಪೋಷಕರೊಂದಿಗೆ ಮಲಗೋದು ಸಹಜ. ಆದರೆ, ಯಾವ ವಯಸ್ಸಿನ ತನಕ ಹೀಗೆ ಮಲಗೋದು ಓಕೆ? ತಮ್ಮೊಂದಿಗೆ ಮಕ್ಕಳನ್ನು ಮಲಗಿಸಿಕೊಳ್ಳುವ ಬಗ್ಗೆ ಗೊಂದಲ ಇರೋರು ಇದನ್ನು ಓದಲೇ ಬೇಕು.

Should parents co-sleep with children
Author
Bengaluru, First Published Oct 23, 2018, 3:26 PM IST

ಮಕ್ಕಳು ಪೋಷಕರಿಂದ ಪ್ರತ್ಯೇಕವಾಗಿ ಮಲಗಬೇಕಾ? ಅಪ್ಪ-ಅಮ್ಮನೊಂದಿಗೆ ಮಲಗಿದೆರ ಓಕೆನಾ? 

ಈ ಪ್ರಶ್ನೆ ಬಹುತೇಕ ಪೋಷಕರನ್ನು ಕಾಡುವುದು ಸಹಜ. ಮುಂಚೆಯಾದರೆ ಕೂಡು ಕುಟುಂಬದಲ್ಲಿ ಮಕ್ಕಳು ಹೆಚ್ಚಾಗಿ ಅಜ್ಜ-ಅಜ್ಜಿಯೊಂದಿಗೆ ಮಲಗುತ್ತಿದ್ದರು. ಆದರೀಗ ನ್ಯೂಕ್ಲಿಯರ್ ಫ್ಯಾಮಿಯಲ್ಲಿ ಮಕ್ಕಳು ಒಂದೋ ಅಪ್ಪ-ಅಮ್ಮನೊಂದಿಗೇ ಮಲಬೇಕು. ಇಲ್ಲ ಒಂಟಿಯಾಗಿ ಬೇರೆ ರೂಮಿನಲ್ಲಿ ಮಲಗಬೇಕು. 

ಎಷ್ಟು ದಿನ ಅಂತ ಮಕ್ಕಳನ್ನು ಪೋಷಕರು ಜತೆಯಲ್ಲಿಯೇ ಮಲಗಿಸಿಕೊಳ್ಳಲು ಸಾಧ್ಯ? ಆದರೆ, ಯಾವ ವಯಸ್ಸಿನಿಂದ ಮಕ್ಕಳನ್ನು ಬೇರೆ ಮಲಗಿಸಬೇಕು? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

ದೊಡ್ಡವರಾದ ಮೇಲೂ ಮಕ್ಕಳನ್ನು ತಮ್ಮೊಟ್ಟಿಗೇ ಮಲಗಿಸಿಕೊಂಡರೆ, ಬಾಂಧವ್ಯ ವೃದ್ಧಿಸುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಇದರಿಂದ ಎಸ್‌ಐಡಿಎಸ್‌ ಎಂಬ ಸಮಸ್ಯೆ ಎದುರಾಗುತ್ತದೆ, ಎಂದು ಸಂಶೋಧನೆಗಳು ದೃಢಪಡಿಸಿವೆ.

ಏನಿದು SIDS?

ಸಡನ್ ಇನ್ ಫ್ಯಾಂಟ್ ಡೆತ್ ಸಿಂಡ್ರೋಮ್ ಎಂದು ಕರೆಯುವ ಈ ಸಮಸ್ಯೆಯಿಂದ ಸಾವಿರಕ್ಕೆ ಒಂದು ಮಗು ಸಾಯುತ್ತದೆ. ಅಂದರೆ ಮಕ್ಕಳನ್ನು ಮಲಗಿಸಿಕೊಂಡ ಪೋಷಕರ, ನಿದ್ದೆಯಲ್ಲಿ ತಮ್ಮ ಕೈ-ಕಾಲು ಹಾಕಿ ಹಿಸುಕುವ ಸಾಧ್ಯತೆ ಇರುತ್ತಂತೆ. ಇದು ಮಗುವಿನ ಪ್ರಾಣವನ್ನೇ ತೆಗೆಯಬಹುದು. ಅತ್ಯಂತ ಪುಟ್ಟ ಮಕ್ಕಳಿಗೆ ಮಾತ್ರ ಈ ಸಮಸ್ಯೆ ಕಾಡುತ್ತದೆ. ಅಲ್ಲದೇ ಮಗು ಮಧ್ಯೆ ಮಲಗಿದರೆ ಪೋಷಕರಿಗೂ ನಿದ್ರೆ ಕೊರತೆಯಾಗಿ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡಬಹುದು, ಎನ್ನುತ್ತದೆ ಸಂಶೋಧನೆ. 

ಎಷ್ಟು ವರ್ಷಕ್ಕೆ ಬೇರೆ ಮಲಗಿಸಬೇಕು?

ಮಗುವಿಗೆ ಹಾಲುಣಿಸುವವರೆಗೆ ತಮ್ಮೊಟ್ಟಿಗೆ ಮಲಗಿಸಿಕೊಂಡರೆ ಓಕೆ. ಆಮೇಲೆ ಪೋಷಕರು ಬಳಸುವ ಫ್ಯಾನ್ ಹಾಗೂ ಮೊಬೈಲ್ ಬೆಳಕಿನಿಂದ ಮಗುವಿನ ನಿದ್ರೆಗೂ ಕುಂದುಂಟಾಗುತ್ತದೆ. ಇದು ಮಗುವಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು. 

ಹಾಗಂತ ದಿಢೀರನೆ ಮಕ್ಕಳನ್ನು ದೂರ ಮಾಡಿ, ಬೇರೆ ರೂಮಿನಲ್ಲಿ ಮಲಗುವಂತೆ ಒತ್ತಡ ತರಬೇಡಿ. ಒಂದೊಂದು ದಿನ ಬೇರೆ ಕೊಠಡಿಯಲ್ಲಿ ಮಲಗಿಸಿ, ಪೋಷಕರಲ್ಲಿ ಒಬ್ಬರು ಮಲಗಬೇಕು. ಇಷ್ಟವಾಗುವಂತೆ ಮಕ್ಕಳ ರೂಮನ್ನು ಅಲಂಕರಿಸಿ, ಮಕ್ಕಳಿಗೆ ಆ ರೂಮ್ ಅವರದ್ದೆನ್ನುವ ಭಾವ ಮೂಡುವಂತೆ ಮಾಡಬೇಕು. ಆಗ ನಿಧಾನವಾಗಿ ಮಕ್ಕಳೇ ಬೇರೆ ರೂಮಿನಲ್ಲಿ ಮಲಗಲು ಮಾನಸಿಕವಾಗಿ ಸಿದ್ಧವಾಗುತ್ತವೆ. 

7-8 ವರ್ಷದವರೆಗೆ ಮಕ್ಕಳನ್ನು ಮಲಗಿಸಿಕೊಳ್ಳುವುದು ಓಕೆ. ಆಮೇಲೆ ಅವುಗಳನ್ನು ಸ್ವತಂತ್ರವಾಗಿ ಬೆಳೆಸಿದಷ್ಟು ಪೋಷಕರು ಹಾಗೂ ಮಕ್ಕಳ ದೃಷ್ಟಿಯಿಂದ ಒಳ್ಳೆಯದು. ಯಾವುದೇ ಭಯವನ್ನೂ ಮನಸ್ಸಿನಲ್ಲಿ ತುಂಬದೇ, ಮಗು ಸ್ವತಂತ್ರವಾಗಿ ಬದುಕುವಂಥ ಮಾನಸಿಕ ಸ್ಥೈರ್ಯ ತುಂಬುತ್ತಲೇ, ಮಕ್ಕಳನ್ನು ತಮ್ಮಿಂದ ದೂರು ಮಲಗಿಸಲು ಪೋಷಕರು ಯತ್ನಿಸಬೇಕು. 

ಇಲ್ಲದಿದ್ದರೆ, ಮಕ್ಕಳು ಡಲ್ ಆಗೋ ಚಾನ್ಸ್ ಇರುತ್ತೆ. ಮಾನಸಿಕವಾಗಿ ಸದೃಢರನ್ನಾಗಿಸಿ, ಮಕ್ಕಳನ್ನು ಬೇರೆ ಮಲಗಿಸಿ. ಏಕಾಏಕಿ ದೂರ ಮಾಡಿಬೇಡಿ. ಹುಷಾರ್!

Follow Us:
Download App:
  • android
  • ios