Asianet Suvarna News Asianet Suvarna News

ರೆಸಿಪಿ: ಮನೇಲೇ ಮಾಡ್ಬಹುದು ಪಾವ್ ಬಾಜಿ

ಹೊಟ್ಟೇನೂ ತುಂಬುವಂತೆ ಮಾಡುವುದರೊಂದಿಗೆ ರುಚಿ ಎನಿಸುವ ಪಾವ್ ಬಾಜಿಯನ್ನು ಮನೇಲೂ ಮಾಡಬಹುದು. ಹೇಗೆ? ಇಲ್ಲಿದೆ ರೆಸಿಪಿ...

Recipe : Pav bhaji
Author
Bengaluru, First Published Oct 19, 2018, 11:15 AM IST

ಈ ಮಳೆಯಲ್ಲಿ ಬಿಸಿ ಬಿಸಿ ಏನಾದರೂ ತಿನ್ನಬೇಕು ಎಂದೆನಿಸಿದರೆ ನೆನಪಾಗುವುದು ಪಾವ್ ಬಾಜಿ. ಬೆಣ್ಣೆಯೊಂದಿಗೆ ಫ್ರೈ ಮಾಡಿರುವ ಪಾವ್ ಜತೆ ವಿವಿಧ ತರಕಾರಿ ಹಾಕಿ ಮಾಡಿದ ಬಾಜಿ ಸವಿಯುವ ಮಜಾನೇ ಬೇರೆ. ಹೊಟ್ಟೇನೂ ತುಂಬುವ ಈ ಫಾಸ್ಟ್ ಫುಡ್‌ ರೆಸಿಪಿ ಇಲ್ಲಿದೆ..

ಬೇಕಾಗುವ ಸಾಮಾಗ್ರಿಗಳು: 

  • ಬೆಣ್ಣೆ
  • ಟೊಮ್ಯಾಟೋ
  • ಬಟಾಣಿ 
  • ದೊಣ ಮೆಣಸಿನಕಾಯಿ 
  • ಆಲೂಗೆಡ್ಡೆ 
  • ಉಪ್ಪು 
  • ಖಾರದ ಪುಡಿ
  • ಅರಿಶಿಣ ಪುಡಿ
  • ಪಾವ್ ಬಾಜಿ ಮಸಾಲ
  • ಕಸ್ತೂರಿ ಮೇಥಿ
  • ಕೊತ್ತಂಬರಿ ಸೊಪ್ಪು 
  • ಶುಂಠಿ- ಬೆಳ್ಳುಳಿ ಪೇಸ್ಟ್
  • ಈರುಳ್ಳಿ 
  • ನಿಂಬೆ ಹಣ್ಣು
  • ಪಾವ್ 

 

 ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ಬೆಣ್ಣೆ, ಟೊಮ್ಯಾಟೊ, ಬಟಾಣಿ, ಆಲೂಗಡ್ಡೆ ಮತ್ತು ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. 10 ನಿಮಿಷಗಳ ನಂತರ ಅದನ್ನು ಸ್ಮ್ಯಾಷ್ ಮಾಡಬೇಕು. ಆಮೇಲೆ ಅದಕ್ಕೆ ಖಾರ, ಅರಿಶಿಣ, ಪಾವ್ ಮಸಾಲ, ಕೊತ್ತಂಬರಿ, ಈರುಳ್ಳಿ ಮತ್ತು ಕಸ್ತೂರಿ ಮೇಥಿ ಸೇರಿಸಬೇಕು.
  • ಮತ್ತೊಂದು ಬಾಣಲೆಗೆ ಬೆಣ್ಣೆ, ಖಾರದ ಪುಡಿ ಮತ್ತು ಪಾವ್ ಮಸಾಲ್ ಹಾಕಿ. ಅದಕ್ಕೆ ಪಾವನ್ನು (ಬ್ರೆಡ್) ಎರಡು ಭಾಗ ಮಾಡಿ ಬೆಣ್ಣೆ ಹಚ್ಚಿ ಫ್ರೈ ಮಾಡಬೇಕು. ಅಷ್ಟೇ. ರುಚಿಯಾದ ಪಾವ್ ಬಾಜಿ ಸಿದ್ಧ.
  • ನಂತರ ಒಂದು ತಟ್ಟೆಯಲ್ಲಿ ಬಾಜಿ ಮತ್ತು ಪಾವ್ ಇಟ್ಟು, ಅದಕ್ಕೆ ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಗೂ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿದರೆ ಪಾವ್ ಬಾಜಿ ಸಿದ್ಧ.
Follow Us:
Download App:
  • android
  • ios