Asianet Suvarna News Asianet Suvarna News

ಸೀರೆ ಮೇಲೆ ಮಾತ್ರವಲ್ಲ, ಕೈ ಮೇಲೂ ಬರಲಿದೆ ಎಂಬ್ರಾಯ್ಡರಿ ಟ್ಯಾಟೂ!

ಬ್ಲೌಸ್‌ಗೆ ಎಂಬ್ರಾಯಿಡರಿ ಮಾಡಿಸೋದು ಹಳೆದಾಯ್ತು. ಮೈಗೆ ಎಂಬ್ರಾಯಿಡರಿ ಟ್ಯಾಟೂ ಹಾಕಿಸಿಕೊಳ್ಳೋದು ಈಗ ಹೊಸತು. ಇದೇನಪ್ಪಾ ಮೈ ಮೇಲೆ ಸೂಜಿದಾರದ ಚಮತ್ಕಾರನಾ ಅಂತ ಬಾಯಿ ಬಾಯಿ ಬಿಡಬೇಡಿ. ಇದು ಇಂಕ್‌ನಲ್ಲೇ 3ಡಿ ಇಮೇಜ್‌‌ನಿಂದ ಇಲ್ಯೂಶನ್ ಹುಟ್ಟು ಹಾಕುವ ಹೊಸ ಟ್ರೆಂಡ್.
 

pretty cool Embroidery tattoos takes over the trend
Author
Bangalore, First Published May 14, 2019, 3:23 PM IST

ಅಡಗೂಲಜ್ಜಿಯ ಹವ್ಯಾಸಗಳಾದ ಎಂಬ್ರಾಯಿಡರಿ ಹಾಗೂ ಹಚ್ಚೆಗಳೆರಡೂ ಹೊಸ ಬಟ್ಟೆ ತೊಟ್ಟುಕೊಂಡು ಒಟ್ಟಾಗಿ ಹೊಸ ಅವತಾರದಲ್ಲಿ ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತಿವೆ. ಅದೇ ಎಂಬ್ರಾಯಿಡರಿ ಟ್ಯಾಟೂ. ಬಣ್ಣಬಣ್ಣದ ದಾರಗಳಲ್ಲಿ ಟ್ಯಾಟೂ ಹಾಕಿದಂತೆ ಕಾಣುವಂತೆ  ಇಂಕ್‌ನಲ್ಲೇ ಮ್ಯಾಜಿಕ್ ಮಾಡಲಾಗುತ್ತದೆ. ಮೈ ಮೇಲೆ ಅರಳುವ ಜನಪದ ವಿನ್ಯಾಸಗಳು ಬಹಳ ವಿಶಿಷ್ಠವಾಗಿಯೂ, ಸಾಂಪ್ರದಾಯಿಕ ಲುಕ್‌ನೊಂದಿಗೂ ನೋಡುಗರನ್ನು ನಿಬ್ಬೆರಗಾಗಿಸುತ್ತಿವೆ. ಇನ್ಸ್ಟಾಗ್ರಾಂನ ಹೊಸ ಗೀಳಾಗಿರುವ ಎಂಬ್ರಾಯಿಡರಿ ಟ್ಯಾಟೂಗಳ ವಿಶೇಷತೆ ಏನು?

ವಾಟರ್ ಕಲರ್ ಇಂಕ್ ಟ್ಯಾಟೂಗೆ 3ಡಿ ಟಚ್ ನೀಡಿದಂತೆ ಎಂಬ್ರಾಯಿಡರಿ ಟ್ಯಾಟೂಗಳು ಚರ್ಮದಿಂದ ಉಬ್ಬಿ ನಿಲ್ಲುತ್ತವೆ. ಬಟ್ಟೆಯ ಮೇಲೆ ಇರುವ ಎಂಬ್ರಾಯಿಡರಿಯಂತೆ ಕ್ರಾಸ್ ಸ್ಚಿಚ್ ವಿನ್ಯಾಸ ಇಲ್ಲಿ ಜಾದೂ ಮಾಡುತ್ತದೆ. ಆದರೆ ಇವನ್ನು ಕೂಡಾ ಉಳಿದೆಲ್ಲ ಟ್ಯಾಟೂಗಳಂತೆ ಇಂಕ್ ಹಾಗೂ ಬಣ್ಣಗಳನ್ನು ಬಳಸಿಯೇ ಮಾಡಲಾಗುತ್ತದೆ. 

ಟ್ಯಾಟೂ ಮೂಲಕ ಗಮನ ಸೆಳೆಯುತ್ತಿದ್ದಾರೆ ಪ್ರಿಯಾ ವಾರಿಯರ್

ಸಾಮಾನ್ಯವಾಗಿ ಟ್ಯಾಟೂ ಹಾಕಿಸಿಕೊಳ್ಳುವವರು ನಿಜವಾದ ಎಂಬ್ರಾಯಿಡರಿ ವರ್ಕ್‌ನ ಫೋಟೋವನ್ನೋ ಅಥವಾ ಬಟ್ಟೆಯನ್ನೋ ತೆಗೆದುಕೊಂಡು ಹೋದರೆ ಟ್ಯಾಟೂ ಕಲಾವಿದರು ಅದರಂತೆ ಚಿತ್ರಿಸುತ್ತಾರೆ. ಇಲ್ಲಿ ಬಣ್ಣಗಳಲ್ಲ, ಕಪ್ಪು ಇಂಕ್‌ನಲ್ಲಿ ಅವುಗಳ ಸುತ್ತ ಬಿಡಿಸುವ ಔಟ್‌ಲೈನ್‌ಗಳು 3ಡಿ ಎಫೆಕ್ಟ್ ಕಟ್ಟಿಕೊಡುತ್ತವೆ. 

ಟ್ಯಾಟೂ ಹಾಕಿಸುವ ಮುನ್ನ...

- ಟ್ಯಾಟೂಗಳನ್ನು ಹಾಕಿಸುವ ಮುನ್ನ ಕಲಾವಿದರು ಹಾಗೂ ಅವರ ಸ್ಟುಡಿಯೋ ಬಗ್ಗೆ ರಿಸರ್ಚ್ ನಡೆಸಿ. ನಂತರ ಆರ್ಟಿಸ್ಟ್‌ಗಳೊಡನೆ ನಿಮ್ಮ ಪ್ರಶ್ನೆಗಳನ್ನು ಕೇಳಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ. 

- ಟ್ಯಾಟೂಗಳು ಅವುಗಳ ಗಾತ್ರ, ವಿನ್ಯಾಸಕ್ಕೆ ಸರಿಯಾಗಿ ಸಮಯ ತೆಗೆದುಕೊಳ್ಳುತ್ತವೆ, ಸ್ವಲ್ಪ ನೋವುದಾಯಕ ಕೂಡಾ. ನಿಮ್ಮ ನೋವು ಸಹಿಸುವ ಶಕ್ತಿ, ಎಲ್ಲಿ ಟ್ಯಾಟೂ ಬೇಕು, ಯಾವ ಡಿಸೈನ್ ಬೇಕು ಎಲ್ಲವನ್ನೂ ವಿವೇಚನೆಯಿಂದ ಯೋಚಿಸಿ ತೀರ್ಮಾನಿಸಿ. 

16 ಭಾಷೆಗಳಲ್ಲಿ ತಮ್ಮ ಹೆಸರು ಟ್ಯಾಟು ಹಾಕಿಸಿಕೊಂಡು ಟ್ರೋಲ್ ಆದ ಪಾಂಡ್ಯ..!

- ಇನ್ನು ನಿಮಗೆ ಸ್ಕಿನ್ ಅಲರ್ಜಿ ಇದ್ದಲ್ಲಿ ಟ್ಯಾಟೂ ಹಾಕಿಸುವ ಮುನ್ನ ಡಾಕ್ಟರ್ ಬಳಿ ಮಾತನಾಡಿ. 

- ಟ್ಯಾಟೂ ಹಾಕಿಸಿದ ಬಳಿಕವೂ ಹಲವು ದಿನಗಳ ಕಾಲ ಅದನ್ನು ಕೇರ್ ಮಾಡುವುದು ಮುಖ್ಯ. ಇದು ನಿಮ್ಮಿಂದ ಸಾಧ್ಯವೇ ಯೋಚಿಸಿ. 

Follow Us:
Download App:
  • android
  • ios